ಅಂತರರಾಷ್ಟ್ರೀಯ

ಉಕ್ರೇನ್ ರಷ್ಯಾನ ಸೋಲಿಸುತ್ತದೆ : ಉಕ್ರೇನಿಯನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ

ಉಕ್ರೇನ್ ರಷ್ಯಾನ ಸೋಲಿಸುತ್ತದೆ : ಉಕ್ರೇನಿಯನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ

ಕೈವ್: ಫೆಬ್ರವರಿ 25: ವ್ಲಾಡಿಮಿರ್ ಪುಟಿನ್ ನಾಯಕತ್ವದ ರಷ್ಯಾವು ಚೀನಾವನ್ನು ಹೊರತುಪಡಿಸಿ ಪ್ರಮುಖ ದೇಶಗಳಿಂದ ಕಟು ಟೀಕೆ ಎದುರಿಸಿದರೂ ಕೂಡ ಲೆಕ್ಕಿಸದೆ ಉಕ್ರೇನ್ ನ ಹಲವು ಪ್ರದೇಶಗಳ ಮೇಲೆ ದಾಳಿ ಮಾಡುವ ಮೂಲಕ ಆಕ್ರಮಣದ ಮೊದಲ ದಿನ ಯಶಸ್ವಿಯಾಗಿದೆ ಎಂದು ರಷ್ಯಾ ಹೇಳಿದೆ.

ಈಗಾಗಲೇ 137 ಉಕ್ರೇನಿಯನ್ನರ ಪ್ರಾಣ ಕಳೆದುಕೊಂಡಿದ್ದು, 300ಕ್ಕೂ ಹೆಚ್ಚು ಇತರರು ಗಾಯಗೊಂಡಿರುವ ಆಕ್ರಮಣದ ಸಮಯದಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಪುಟಿನ್ ಅವರಿಗೆ ಕರೆ ಮಾಡಿ ಹಿಂಸಾಚಾರವನ್ನು ನಿಲ್ಲಿಸಲು ಪ್ರಯತ್ನಿಸಿದರು.

ಉಕ್ರೇನಿಯನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಶುಕ್ರವಾರ ರಾಜಧಾನಿಯನ್ನು ತಲ್ಲಣಗೊಳಿಸಿದ ‘ಭಯಾನಕ’ ರಾಕೆಟ್ ದಾಳಿಗಳನ್ನು ಖಂಡಿಸಿದರು. 1941ರಲ್ಲಿ ನಾಜಿಗಳು ದಾಳಿ ಮಾಡಿದಾಗ ಕೈವ್ ಕೊನೆಯ ಬಾರಿಗೆ ಏನನ್ನು ಅನುಭವಿಸಿತ್ತು ಎಂದು ಟ್ವೀಟ್ ಮಾಡಿದ ಅವರು, ಉಕ್ರೇನ್ ಆ ದುಷ್ಟರನ್ನು ಸೋಲಿಸಿತು ಮತ್ತು ಇದೀಗ ರಷ್ಯಾವನ್ನು ಸೋಲಿಸುತ್ತದೆ ಎಂದು ಕುಲೆಬಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುದ್ದಿ ಓದಿ