ಅಂತರರಾಷ್ಟ್ರೀಯ

ರಷ್ಯಾದ ಐದು ವಿಮಾನಗಳು, ಒಂದು ಹೆಲಿಕಾಪ್ಟರ್ ಹೊಡೆದುರುಳಿಸಿದ ಉಕ್ರೇನ್

ರಷ್ಯಾದ ಐದು ವಿಮಾನಗಳು, ಒಂದು ಹೆಲಿಕಾಪ್ಟರ್ ಹೊಡೆದುರುಳಿಸಿದ ಉಕ್ರೇನ್

ಮಾಸ್ಕೋ: ಫೆಬ್ರವರಿ 24 :ಉಕ್ರೇನ್‌ನ ಲುಹಾನ್ಸ್ಕ್ ಪ್ರದೇಶದಲ್ಲಿ ರಷ್ಯಾದ ಐದು ವಿಮಾನಗಳು ಮತ್ತು ಒಂದು ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಲಾಗಿದೆ ಎಂದು ದೇಶದ ಮಿಲಿಟರಿ ಗುರುವಾರ ಹೇಳಿಕೊಂಡಿದೆ. ಲುಹಾನ್ಸ್ಕ್ ಉಕ್ರೇನ್‌ನ ಪ್ರತ್ಯೇಕತಾವಾದಿ ಪ್ರದೇಶಗಳಲ್ಲಿ ಒಂದಾಗಿದೆ, ಇದನ್ನು ಈ ವಾರದ ಆರಂಭದಲ್ಲಿ ರಷ್ಯಾ ಸ್ವತಂತ್ರವೆಂದು ಗುರುತಿಸಿದೆ.

ಏತನ್ಮಧ್ಯೆ, ರಷ್ಯಾದ ರಕ್ಷಣಾ ಸಚಿವಾಲಯವು ಉಕ್ರೇನಿಯನ್ ವಾಯು ರಕ್ಷಣೆಯನ್ನು ‘ತಟಸ್ಥಗೊಳಿಸಲಾಗಿದೆ’ ಎಂದು ಹೇಳಿದೆ.ವರದಿಗಳ ಪ್ರಕಾರ, ರಷ್ಯಾ ಮತ್ತು ಬೆಲಾರಸ್‌ ಜೊತೆ ಉಕ್ರೇನ್‌ನ ಉತ್ತರ ಗಡಿಯಲ್ಲಿ ರಷ್ಯಾ ಫಿರಂಗಿ ದಾಳಿ ನಡೆಸಿತು. ಉಕ್ರೇನಿಯನ್ ಪಡೆಗಳು ಮತ್ತೆ ಗುಂಡಿನ ದಾಳಿ ನಡೆಸುತ್ತಿದ್ದವು.

ಯುದ್ಧ ಘೋಷಿಸಿದ ರಷ್ಯಾ 

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದರು. ಉಕ್ರೇನ್ ಬೆದರಿಕೆಗಳಿಗೆ ಪ್ರತಿಕ್ರಿಯೆಯಾಗಿ ಮಿಲಿಟರಿ ಕಾರ್ಯಾಚರಣೆ ಘೋಷಿಸಲಾಗಿದೆ ಎಂದು ಅವರು ಹೇಳಿದರು. ತದನಂರರ ಉಕ್ರೇನ್‌ನ ವಿವಿಧ ಭಾಗಗಳಲ್ಲಿ ದೊಡ್ಡ ಸ್ಫೋಟಗಳು ಕೇಳಿಬಂದವು. ತುರ್ತು ವಿಶ್ವಸಂಸ್ಥೆಯ ಸಭೆಯಲ್ಲಿ ಉಕ್ರೇನ್ ಪ್ರತಿನಿಧಿಯು “ಯುದ್ಧವನ್ನು ನಿಲ್ಲಿಸಲು” ಎಲ್ಲರಿಗೂ ಮನವಿ ಮಾಡಿದರು.

ಸುದ್ದಿ ಓದಿ