ಅಂತರರಾಷ್ಟ್ರೀಯ

ರಷ್ಯಾ ಸೈನಿಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಉಕ್ರೇನ್ ಕೋರ್ಟ್

ರಷ್ಯಾ ಸೈನಿಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಉಕ್ರೇನ್ ಕೋರ್ಟ್

ಕೀವ್: ಮೇ 23 : ಉಕ್ರೇನ್ ಮೇಲೆ ರಷ್ಯಾ ಸೇನಾ ಕಾರ್ಯಾಚರಣೆ ನಡೆಸಿದ ಫೆ.24ರ ಆಕ್ರಮಣದಿಂದ ಉಂಟಾದ ಮೊದಲ ಯುದ್ಧಾಪರಾಧಗಳ ವಿಚಾರಣೆಯಲ್ಲಿ ರಷ್ಯಾ ಸೈನಿಕನಿಗೆ ಉಕ್ರೇನ್ ಕೋರ್ಟ್ ಶಿಕ್ಷೆ ವಿಧಿಸಿದೆ. ನಿರಾಯುಧ ನಾಗರಿಕನನ್ನು ಕೊಂದ ರಷ್ಯಾದ ಸೈನಿಕನಿಗೆ ಉಕ್ರೇನ್ ನ್ಯಾಯಾಲಯ ಸೋಮವಾರ ಜೀವಾವಧಿ ಶಿಕ್ಷೆ ನೀಡಿದೆ.

21 ವರ್ಷ ವಯಸ್ಸಿನ ಟ್ಯಾಂಕ್ ಕಮಾಂಡರ್ ವಾಡಿಮ್ ಶಿಶಿಮರಿನ್ ಫೆ.28 ರಂದು ಈಶಾನ್ಯ ಉಕ್ರೇನಿಯನ್ ಗ್ರಾಮದಲ್ಲಿ ಚುಪಾಖಿವ್ಕಾದಲ್ಲಿ 62 ವರ್ಷದ ವ್ಯಕ್ತಿಯ ಮೇಲೆ ಕಾರಿನ ಕಿಟಕಿಯಿಂದ ಸ್ವಯಂಚಾಲಿತ ರೈಫಲ್‌ನಿಂದ ಗುಂಡು ಹಾರಿಸಿದ್ದರು. ನಿರಾಯುಧನನ್ನ ಕೊಂದ ತಪ್ಪನ್ನು 21 ವರ್ಷ ವಯಸ್ಸಿನ ಟ್ಯಾಂಕ್ ಕಮಾಂಡರ್ ವಾಡಿಮ್ ಶಿಶಿಮರಿನ್ ಒಪ್ಪಿಕೊಂಡಿದ್ದಾರೆ.ಫೆಬ್ರವರಿ 24 ರಂದು ಯುದ್ಧ ಪ್ರಾರಂಭವಾದಾಗಿನಿಂದ ರಷ್ಯಾದ ಪಡೆಗಳು ನೂರಾರು ನಾಗರಿಕರನ್ನು ಕೊಂದ ಆರೋಪ ಹೊತ್ತಿರುವ ಉಕ್ರೇನ್‌ಗೆ ಈ ವಿಚಾರಣೆಯು ಮಹತ್ವದ ಕ್ಷಣವಾಗಿದೆ.

ಸುದ್ದಿ ಓದಿ