ಅಂತರರಾಷ್ಟ್ರೀಯ

ಉಕ್ರೇನ್‌ ರಷ್ಯಾ ಮಧ್ಯೆ ಎರಡನೇ ಬಾರಿಗೆ ಕದನ ವಿರಾಮ ಘೋಷಣೆ

ಉಕ್ರೇನ್‌ ರಷ್ಯಾ ಮಧ್ಯೆ ಎರಡನೇ ಬಾರಿಗೆ ಕದನ ವಿರಾಮ ಘೋಷಣೆ

ಮಾಸ್ಕೋ 07 : ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ 12ನೇ ದಿನ ಮುಂದುವರಿದಿದೆ. ಈ ಮಧ್ಯೆ, ರಷ್ಯಾ ಉಕ್ರೇನ್‌ನಾದ್ಯಂತ ಕದನ ವಿರಾಮವನ್ನು ಘೋಷಿಸಿದೆ. ಈ ಕದನ ವಿರಾಮವು 12.30ಕ್ಕೆ ಆರಂಭಗೊಂಡಿದೆ.ಈ ಸಂದರ್ಭದಲ್ಲಿ, ಯುದ್ಧದಲ್ಲಿ ಸಿಲುಕಿರುವ ಜನರನ್ನು ಸ್ಥಳಾಂತರಿಸಲು ಮಾನವ ಕಾರಿಡಾರ್ ನಿರ್ಮಿಸಲಾಗುತ್ತದೆ. ಉಕ್ರೇನ್‌ನಲ್ಲಿ ರಷ್ಯಾ ಕದನ ವಿರಾಮ ಘೋಷಿಸಿದ್ದು ಇದು ಎರಡನೇ ಬಾರಿ. ಈ ಹಿಂದೆ ಎರಡು ನಗರಗಳಲ್ಲಿ ಕದನ ವಿರಾಮ ಮಾಡಲಾಗಿತ್ತು. ಆದರೆ ರಷ್ಯಾ ಕೆಲವೇ ಗಂಟೆಗಳಲ್ಲಿ ಕದನ ವಿರಾಮ ಉಲ್ಲಂಘಿಸಿ ಬಾಂಬ್ ದಾಳಿಯನ್ನು ಆರಂಭಿಸಿತ್ತು.ಇಂದು ಮುಂಜಾನೆ, ಉಕ್ರೇನ್ ನಗರದ ಖಾರ್ಕಿವ್‌ನಲ್ಲಿನ ವಸತಿ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ರಷ್ಯಾ ದಾಳಿ ಮಾಡಲು ನಿರ್ಧರಿಸಿತ್ತು. ಆದರೆ, ಸೀಜ್ ಫಾಯರ್ ಘೋಷಣೆ ಮಾಡಿದ್ದರಿಂದ  ಬಂಕರ್‌ಗಳು ಸೇರಿದಂತೆ ಸುರಕ್ಷಿತ ಸ್ಥಳಗಳಿಗೆ ಹೋಗಲು ಈಗಾಗಲೇ ಜನರಿಗೆ ಸೂಚಿಸಲಾಗಿದೆ. ಆದರೂ ಸಹ ಇನ್ನು ಕೆಲವರು ಅಲ್ಲಿ ಸಿಲುಕಿರುವ ಶಂಕೆ ಇದೆ. ಈ ಮಧ್ಯೆ, ಉಕ್ರೇನ್ ಸೇನೆ ಅನೇಕ ರಷ್ಯಾದ ಟ್ಯಾಂಕ್ ಗಳನ್ನು ನಾಶಪಡಿಸಿದೆ ಎಂದು ಹೇಳಿಕೊಂಡಿದೆ.

ಸುದ್ದಿ ಓದಿ