ಉಕ್ರೇನ್-ರಷ್ಯಾ ಯುದ್ಧ: ಪಲಾಯನ ವೇಳೆ ತಾಯಿ, ಮಕ್ಕಳ ಸಾವು
ಕೈವ್, ಮಾರ್ಚ್ 07: ಕೈವ್ ಬಳಿಯ ಇರ್ಪಿನ್ ಪಟ್ಟಣದಿಂದ ನಿವಾಸಿಗಳು ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾಗ ಸೋಮವಾರ ತಾಯಿ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಟ ಮೂವರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ರಕ್ಷಣಾ ಅಧಿಕಾರಿ ತಿಳಿಸಿದ್ದಾರೆ.
ರಾಜಧಾನಿ ಕೈವ್ ಮೇಲೆ ಸಂಪೂರ್ಣ ದಾಳಿ ನಡೆಸಲು ರಷ್ಯಾ ಸಿದ್ಧತೆ ನಡೆಸುತ್ತಿದೆ ಎಂದು ಉಕ್ರೇನಿಯನ್ ಅಧಿಕಾರಿಗಳು ಎಚ್ಚರಿಸಿದ್ದಾರೆ. ಹಾಗಾಗಿ ಉಕ್ರೇನಿಯನ್ನರು ಮತ್ತು ವಿದೇಶಿಯರು ಕ್ರೂರ ಯುದ್ಧದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಮಾಸ್ಕೋದ ಬೇಡಿಕೆಗಳನ್ನು ಈಡೇರಿಸುವವರೆಗೆ ರಷ್ಯಾದ ಮಿಲಿಟರಿ ಕ್ರಮ ನಿಲ್ಲುವುದಿಲ್ಲ ಎಂದು ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಭಯಭೀತರಾದ ನೂರಾರು ಜನರು ಕಾಂಕ್ರೀಟ್ ಮತ್ತು ಲೋಹದ ಅವಶೇಷಗಳ ಮೂಲಕ ಕಾಲ್ನಡಿಗೆಯಲ್ಲಿ ಇರ್ಪಿನ್ ನದಿಯನ್ನು ದಾಟಲು ಪ್ರಯತ್ನಿಸಿದರು ಎಂದು ವರದಿಯಾಗಿದೆ
ಕೈವ್ ನ ಹೊರವಲಯದಲ್ಲಿ ಹಿಡಿತ ಸಾಧಿಸಲು ತಮ್ಮ ರಷ್ಯಾದ ಪಡೆಗಳಿಗೆ ಇರ್ಪಿನ್ ನ ಸಂಪೂರ್ಣ ನಿಯಂತ್ರಣವನ್ನು ಹೊಂದಿರುವುದು ಅತ್ಯಗತ್ಯ. ರಷ್ಯನ್ನರ ಮುಂದಿನ ಹಂತವೆಂದರೆ, ಇರ್ಪಿನ್ ನ ದಕ್ಷಿಣಕ್ಕೆ ಚಲಿಸುವ ಝೈಟೊಮಿರ್ ಹೆದ್ದಾರಿ ಎಂದು ಕರೆಯಲ್ಪಡುವ, ನಿಷ್ಕ್ರಿಯಗೊಂಡ ಇ40 ರಸ್ತೆಗೆ ಹೋಗುವುದು ಮತ್ತು ನಂತರ ಪಶ್ಚಿಮದಿಂದ ಕೈವ್ ಅನ್ನು ಸುತ್ತುವರಿಯುವ ಅವರ ಪ್ರಯತ್ನಗಳನ್ನು ಮುಂದುವರಿಸುವುದು ಎಂದು ವರದಿ ಮಾಡಿದೆ.