ಅಂತರರಾಷ್ಟ್ರೀಯ

ಉಕ್ರೇನ್- ರಷ್ಯಾ ಯುದ್ದ: ರಷ್ಯಾದಲ್ಲಿ ರೇಸಿಂಗ್ ಗೆ ಹೊರಟರೇ ನನ್ನ ಚಪ್ಪಲಿಯಲ್ಲಿ ನಾನೇ ಹೊಡೆದು ಕೊಂಡಂತೆ: ಸೆಬಾಸ್ಟಿಯನ್

ಉಕ್ರೇನ್- ರಷ್ಯಾ ಯುದ್ದ: ರಷ್ಯಾದಲ್ಲಿ ರೇಸಿಂಗ್ ಗೆ ಹೊರಟರೇ ನನ್ನ ಚಪ್ಪಲಿಯಲ್ಲಿ ನಾನೇ ಹೊಡೆದು ಕೊಂಡಂತೆ: ಸೆಬಾಸ್ಟಿಯನ್

ಜರ್ಮನ್ : ಫೆಬ್ರವರಿ 25: ರಷ್ಯಾ- ಉಕ್ರೇನ್ ನಡುವೆ ಎದ್ದಿರುವ ಯುದ್ದ ವಿಶ್ವವನ್ನೇ ತಲ್ಲಣಗೊಳಿಸಿದೆ. ರಷ್ಯಾದ ಅಮಾನುಷ ದಾಳಿಯನ್ನ ಪ್ರಪಂಚದ ಎಲ್ಲಾ ದೇಶಗಳು ತೀವ್ರವಾಗಿ ಖಂಡಿಸುತ್ತಿದೆ. ಯುದ್ದ ಸರಿಯಲ್ಲ, ಕೂಡಲೆ ನಿಲ್ಲಿಸಬೇಕೆಂಬ ಕೂಗು ಕೇಳಿಬಂದರು ರಷ್ಯಾ ಹಿಂದೇಟು ಹಾಕುತ್ತಿಲ್ಲ. ಜೊತೆಗೆ ತನ್ನ ತಂಟೆಗೆ ಬಂದರೆ ಪರಿಣಾಮ ಏನಾಗುತ್ತದೆ ಎಂದು ತನ್ನನ್ನು ಟಾರ್ಗೆಟ್ ಮಾಡಿದ ದೇಶಗಳಿಗೆ ಮುಂದೇನಾಗುತ್ತದೆ ಎಂದು ಉದಾಹರಣೆ ಸಮೇತ ಎಚ್ಚರಿಕೆ ನೀಡುತ್ತಿದೆ. ರಷ್ಯಾದ ಈ ಧೊರಣೆಗೆ ಸಾಮಾನ್ಯರಿಂದ ಸೆಲೆಬ್ರೆಟಿಗಳ ವರೆಗೂ ವಿಮರ್ಶೆಗಳ ಚರ್ಚೆ ನಡೆಯುತ್ತಿದೆ.

ಉಕ್ರೇನ್- ರಷ್ಯಾ ನಡುವಿನ ಯುದ್ದದ ಪರಿಣಾಮ ಈಗ ಕ್ರೀಡೆಗೂ ವ್ಯಾಪಿಸಿದೆ. ರಷ್ಯಾದಲ್ಲಿ ನಡೆಯಲಿರುವ ಯಾವ ಕ್ರೀಡೆಯಲ್ಲೂ ಸಹ ಪಾಲ್ಗೊಳ್ಳಲು ಕ್ರೀಡಾಪಟುಗಳು ಹಿಂದೇಟು ಹಾಕುತ್ತಿದ್ದಾರೆ. ಫಾರ್ಮುಲ ಒನ್ ರೇಸ್ ಆಟಗಾರ ಸೂಪರ್ ಸ್ಟಾರ್ ಸೆಬಾಸ್ಟಿಯನ್ ವೆಟೆಲ್ ಇದೇ ವಿಷಯವನ್ನ ಪ್ರಸ್ತಾಪಿಸಿದ್ದಾರೆ.

ನಾಲ್ಕು ಬಾರಿ ಚಾಂಪಿಯನ್ ಆಗಿರುವ ವೆಟಲ್ ಅವರು ರಷ್ಯಾದಲ್ಲಿ ನಡೆಯಲಿರುವ ಎಫ್1 ರೇಸ್ ಅನ್ನು ಬಹಿಷ್ಕರಿಸುವುದಾಗಿ ಹೇಳಿದ್ದಾರೆ. ಫಾರ್ಮುಲಾ ಒನ್ 2022 ರ ಪೂರ್ವ-ಪರೀಕ್ಷೆ ಸೀಸನ್ ಗಾಗಿ ಪ್ರಸ್ತುತ ಬಾರ್ಸಿಲೋನಾದಲ್ಲಿರುವ ವೆಟ್ಟೆಲ್ ಅವರು ರಷ್ಯಾದ ಜಿಪಿಯಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇಂದು ಮುಂಜಾನೆ ಎಚ್ಚರವಾಗುತ್ತಿದ್ದಂತೆ ಒಂದು ಸುದ್ದಿ ತಿಳಿದು ಆಘಾತವಾಯಿತು. ಉಕ್ರೇನ್ ಮೇಲೆ ದಾಳಿ ಮಾಡುವ ಮೂಲಕ ರಷ್ಯಾ ಅಮಾನವೀಯವಾಗಿ ವರ್ತಿಸುತ್ತಿದೆ. ಮೌಢ್ಯದ ಕಾರಣಕ್ಕೆ ಅಮಾಯಕರ ಜೀವ ಬಲಿಯಾಗುತ್ತಿದೆ. ಅದಕ್ಕಾಗಿಯೇ ಒಮ್ಮೆ ನಾನು ಭಾಗವಹಿಸಲು ಹೊರಟಿದ್ದ ರೇಸಿಂಗ್ ಕ್ಯಾಲೆಂಡರ್ ಅನ್ನು  ಒಮ್ಮೆ ನೋಡಿದಾಗ. ಅದರಲ್ಲಿ ರಷ್ಯಾ ಕೂಡ ಇದೇ. ರಷ್ಯಾದಲ್ಲಿ ರೇಸಿಂಗ್‌ನಲ್ಲಿ ಭಾಗವಹಿಸದಿರಲು ನಾನು ಎಂದೋ ನಿರ್ಧರಿಸಿದ್ದೆ, ಆ ದೇಶದಲ್ಲಿ ರೇಸಿಂಗ್‌ಗೆ ಹೋಗುವುದೆಂದರೆ ನನ್ನ ಚಪ್ಪಲಿಯಿಂದ ನಾನೆ ಹೊಡೆದುಕೊಂಡಂತೆ. ಅದಕ್ಕೇ ನಾನು ರಷ್ಯಾಕ್ಕೆ ಹೋಗಲ್ಲ ಎಂದಿದ್ದಾರೆ.

ಸುದ್ದಿ ಓದಿ