ಸೌಂದತ್ತಿ

ಉಗರಗೋಳ : ಎನ್‌ಜಿಓ ಹೆಸರಲ್ಲಿ ವಂಚನೆ

ಉಗರಗೋಳ : ಎನ್‌ಜಿಓ ಹೆಸರಲ್ಲಿ ವಂಚನೆ

ಬೇಜವಾಬ್ದಾರಿತನದ ಪಂಚಾಯತಿಯಿಂದ ಪೇಚಿಗೆ ಸಿಲುಕಿದ ಗ್ರಾಮಸ್ಥರು: ಗ್ರಾಮಸ್ಥರಿಂದ ಅರ್ಜಿ ಶುಲ್ಕವೆಂದು ಸಂಗ್ರಹಿಸಿದ ಹಣ ವಾಪಸ್ 

ಸವದತ್ತಿ: ಎನ್‌ಜಿಓ ಹೆಸರಿನಲ್ಲಿ ಹಿರಿಯ ನಾಗರಿಕರಿಗೆ ವಿವಿಧ ಸೌಲಭ್ಯಗಳ ಕಾರ್ಡ ನೀಡಲಾಗುವುದೆಂದು ಹಣ ಸುಲಿಗೆ ನಡೆಸಿ ವಂಚಿಸಿದ ಘಟನೆ ತಾಲೂಕಿನ ಉಗರಗೋಳ ಗ್ರಾಮದಲ್ಲಿ ನಡೆದಿದೆ. ಪಂಚಾಯತಿ ಬೇಜವಾಬ್ದಾರಿತನದಿಂದ ಗ್ರಾಮಸ್ಥರು ಪೇಚಿಗೆ ಸಿಲುಕುವಂತಾಗಿತ್ತು. ಸೌಲಭ್ಯ ಪಡೆಯಲು ಜನರೂ ಸೇರಿದ್ದರು. 

ಗ್ರಾಮ ಪಂಚಾಯತಿಯಿಂದ ಧ್ವನಿವರ್ಧಕದ ಮೂಲಕ ಹಿರಿಯ ನಾಗರಿಕರಿಗೆ ವಿವಿಧ ಸೌಲಭ್ಯದ ಕಾರ್ಡ ನೀಡಲಾಗುವುದೆಂದು ಪ್ರಚಾರ ಕಾರ್ಯ ನಡೆಸಿದ್ದಾರೆ. ಪಂಚಾಯತ ಮುಂದಿನ ಹನುಮಾನ ದೇವಸ್ಥಾನದ ಸಭಾಭವನದಲ್ಲಿ ಓರ್ವ ಮಹಿಳೆ ಮತ್ತು ಯುವಕ ಎನ್‌ಜಿಓ ಹೆಸರಿನಲ್ಲಿ ಗ್ರಾಮಸ್ಥರಿಂದ  ಬಸ್, ರೈಲು ಸಂಚಾರ ಮತ್ತು ವೈಧ್ಯಕೀಯ ಸಬ್ಸಿಡಿ ನೀಡುವ ಕಾರ್ಡ ನೀಡಲಾಗುವದೆಂದು ಪುಸಲಾಯಿಸಿ ಅರ್ಜಿ ಶುಲ್ಕವೆಂದು ರೂ. 20 ಪಡೆದುಕೊಳ್ಳುತ್ತಿದ್ದರು.  

ಆಧಾರ ಕಾರ್ಡ, 2 ಪೋಟೊ ಸಹಿತ ಅರ್ಜಿ ಶುಲ್ಕ ಪಡೆದಿದ್ದಾರೆ. ಅರ್ಜಿದಾರರು ರೂ 150 ನೀಡಿ 15 ದಿನಗಳ ಬಳಿಕ ಹಿರಿಯ ನಾಗರಿಕರ ಕಾರ್ಡ ಪಡೆಯುವ ಅವಕಾಶವಿದೆ ಎಂದು ಗ್ರಾಮಸ್ಥರನ್ನು ಮೋಸಗೊಳಿಸುವ ಪ್ರಯತ್ನ ನಡೆದಿದೆ. ಮುಗ್ಧ, ಅವಿದ್ಯಾವಂತ ಹಿರಿಯ ನಾಗರಿಕರು ಸೌಲಭ್ಯಗಳ ಆಸೆ ಪೂರ್ವಾಪರ ವಿಮರ್ಶೆ ನಡೆಸದೇ ಆಧಾರ, ಪೋಟೋ ಜೊತೆಗೆ ಹಣವನ್ನೂ ನೀಡಿದ್ದಾರೆ.  

ಹಣ ವಸೂಲಿ ಸಂದರ್ಭ ಆ ಮಹಿಳೆ ಯಾರು ? ಕಾರ್ಡ ವಿತರಿಸುತ್ತಿರುವ ಇಲಾಖೆಯ ಮಾಹಿತಿ, ಅರ್ಜಿ ನಮೂನೆ, ಸರಕಾರದ ಅನುಮತಿ, ಮತ್ತು ಗುರುತಿನ ಚೀಟಿ ಕುರಿತು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ತಬ್ಬಿಬ್ಬಾದ ಮಹಿಳೆ ಹೊಸದಾಗಿ ಕೆಲಸಕ್ಕೆ ಸೇರಿದ್ದು ಗುರುತಿನ ಚೀಟಿ ಇದೂರೆಗೂ ನೀಡಿಲ್ಲ. ಪಂಚಾಯತಿ ಅಧ್ಯಕ್ಷರಿಂದ ಅನುಮತಿ ಪಡೆಯಲಾಗಿದೆ. ಮೇಲಾಧಿಕಾರಿಗಳಿಂದ ಆದೇಶ ಪ್ರತಿ ದೊರೆತಿಲ್ಲವೆಂದಾಗ ಜನತೆಗೆ ಇದೊಂದು ಹಣ ವಂಚಿಸುವ ತಂತ್ರವೆಂದು ತಿಳಿದು ಥಳಿಸಲು ಮುಂದಾಗಿದ್ದಾರೆ.  

ಬಳಿಕ ಪಂಚಾಯತಿ ಅಧ್ಯಕ್ಷರನ್ನು ಸಂಪರ್ಕಿಸಿದಾಗ ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂದು ಭಾವಿಸಿ ಪ್ರಚಾರ ನಡೆಸಿರೆಂದು ತಿಳಿಸಿದ್ದು, ಆದರೆ ಇಂಥವುಗಳ ಹೆಸರಿನಲ್ಲೂ ಹಣ ದೋಚುತ್ತಾರೆನ್ನುವದು ತಿಳಿಯಲ್ಲ. ಈ ಪ್ರಕ್ರಿಯೆ ನಿಲ್ಲಿಸಿ ಪೊಲೀಸ್ ಇಲಾಖೆಗೆ ಒಪ್ಪಿಸಲು ಮುಂದಾಗಿ ಮಹಿಳೆ ಎನ್ನುವ ಕಾರಣಕ್ಕೆ ಗ್ರಾಮಸ್ಥರ ಒಪ್ಪಿಗೆ ಮೇರೆಗೆ ಕ್ಷಮಿಸಿ ಕಳುಹಿಸಲಾಯಿತು. 

ಎನ್‌ಜಿಓ ನಿಖರ ಮಾಹಿತಿ ಗಮಿನಿಸದೇ ಗ್ರಾಮದಲ್ಲಿ ಪ್ರಚಾರ ನಡೆಸಿ, ಪಂಚಾಯಿತಿಯಿಂದಲೇ ಕಾರ್ಡ ವಿತರಿಸುವ ತಪ್ಪು ಸಂದೇಶ ಜನರಿಗೆ ನೀಡಿದಂತಾಯಿತೆಂದು ಕ್ಷಮೆಯಾಚಿಸಿದ ಪಿಡಿಓ ಮಹೇಶ ತೆಲಗಾರ ಪ್ರಕರಣ ತಿಳಿಗೊಳಿಸಲು ಪ್ರಯತ್ನಿಸಿದರು. ನಂತರ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡ ಅವರು ಸಂಸ್ಥೆ, ಅಧಿಕಾರಿ ಮತ್ತು ಇಲಾಖೆಯ ಆದೇಶವಿರದೇ ಸಾರ್ವಜನಿಕವಾಗಿ ಹಣ ಸಂಗ್ರಹ ಕಾನೂನು ಬಾಹಿರವಾಗಿದೆ ಎಂದರು. ಕೊನೆಯಲ್ಲಿ ಸಂಗ್ರಹಿಸಿದ ಹಣವನ್ನು ಗ್ರಾಮಸ್ಥರಿಗೆ ಮರಳಿ ನೀಡಲಾಯಿತು. 

ಇಂದು 20 ರೂ. ತೆಗೆದುಕೊಂಡವರು ನಾಳೆ 2 ಸಾವಿರ ವಸೂಲಿ ಮಾಡಿದರೂ ಆಶ್ಚರ್ಯವಿಲ್ಲ. ಅನಕ್ಷರಸ್ಥರಾದ ನಾವು ತಿಳಿಯದೇ ಕೊಟ್ಟು ಸೌಲಭ್ಯದ ಆಸೆಗೆ ಕಾಯುವದಾಗಿತ್ತು. ಪಂಚಾಯತಿ ನಿರ್ಲಕ್ಷವೇ ಇದಕ್ಕೆಲ್ಲ ಕಾರಣವೆಂದು ವೃದ್ಧೆ ಆಕ್ರೋಶಿಸಿದರು. 


ಸುದ್ದಿ ಓದಿ