ಅಂತರರಾಷ್ಟ್ರೀಯ

ಕೊನೆಗೂ ಟ್ರಂಪ್ ಸಮ್ಮತಿ.... ಅಧಿಕಾರ ಹಸ್ತಾಂತರ ಔಪಚಾರಿಕ ಪ್ರಕ್ರಿಯೆ ಆರಂಭಿಸಲು ಆದೇಶ

ಕೊನೆಗೂ   ಟ್ರಂಪ್  ಸಮ್ಮತಿ.... ಅಧಿಕಾರ ಹಸ್ತಾಂತರ ಔಪಚಾರಿಕ  ಪ್ರಕ್ರಿಯೆ  ಆರಂಭಿಸಲು ಆದೇಶ

ವಾಷಿಂಗ್ಟನ್, ನವೆಂಬರ್ 24: ಅಮೆರಿಕಾದ  ನಿಯೋಜಿತ  ಅಧ್ಯಕ್ಷ ಜೋ ಬಿಡೆನ್‌  ಅವರಿಗೆ   ಅಧಿಕಾರದ  ಚುಕ್ಕಾಣಿ   ಹಸ್ತಾಂತರಿಸುವ  ಔಪಚಾರಿಕ ಪ್ರಕ್ರಿಯೆಗಳನ್ನು  ಆರಂಭಿಸಲು   ಹಾಲಿ ಅಧ್ಯಕ್ಷ  ಡೊನಾಲ್ಡ್ ಟ್ರಂಪ್  ಸಮ್ಮತಿಸಿದ್ದಾರೆ.


ಆಡಳಿತ  ಯಂತ್ರದ ಮುಖ್ಯಸ್ಥರು     ಈ  ಕುರಿತ  ಅಗತ್ಯ  ಕ್ರಮಗಳನ್ನು   ಕೈಗೊಳ್ಳಲಿದ್ದಾರೆ   ಎಂದು   ಟ್ರಂಪ್   ಹೇಳಿದ್ದಾರೆ.  ಅದೇ ಸಮಯದಲ್ಲಿ   ಚುನಾವಣಾ  ಫಲಿತಾಂಶ  ವಿರುದ್ದ   ತಮ್ಮ ಹೋರಾಟ   ಮುಂದುವರಿಯಲಿದೆ  ಎಂದು  ಅವರು  ತಿಳಿಸಿದ್ದಾರೆ.


ಜೋ ಬೈಡನ್    “ವಿಜೇತ ಅಧ್ಯಕ್ಷರಂತೆ  ಕಂಡುಬರುತ್ತಿದ್ದಾರೆ” ಎಂದು   ಸಾಮಾನ್ಯ  ಸೇವೆಗಳ ಆಡಳಿತ( ಜಿಎಸ್ ಎ) ಹೇಳಿದೆ.

ಇದಕ್ಕೂ ಮುನ್ನ  ಅಮೆರಿಕಾದ  ಮಿಚಿಗನ್  ರಾಜ್ಯದಲ್ಲಿ ಕೂಡಾ ಜೋ ಬೈಡನ್  ಗೆಲುವು ಸಾಧಿಸಿದ್ದಾರೆ  ಎಂದು ಅಧಿಕೃತವಾಗಿ ಪ್ರಕಟಿಸಲಾಗಿದ್ದು, ಡೋನಾಲ್ಡ್   ಟ್ರಂಪ್ ಅವರಿಗೆ ಈ ಸೋಲು ತೀವ್ರ  ಹಿನ್ನಡೆ ಎಂದು  ಎಂದು ವಿಶ್ಲೇಷಿಸಲಾಗಿದೆ.


ಅಧಿಕಾರ ವರ್ಗಾವಣೆ  ಪ್ರಕ್ರಿಯೆ ಆರಂಭಿಸಲು ಆಹ್ವಾನ ಬಂದಿರುವುದಾಗಿ  ಬೈಡೆನ್ ತಂಡ ಘೋಷಿಸಿದೆ. "ದೇಶ ಎದುರಿಸುತ್ತಿರುವ ಸವಾಲುಗಳನ್ನು ಎದುರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಇಂದಿನ ನಿರ್ಧಾರ ಅತ್ಯಗತ್ಯ. ಕೊರೊನಾ  ಸಾಂಕ್ರಾಮಿಕ ನಿಯಂತ್ರಿಸುವುದು ಹಾಗೂ  ಆರ್ಥಿಕತೆಯನ್ನು ಮತ್ತೆ  ಹಳಿಗೆ  ತರುವುದು ನಮ್ಮ ಮುಂದಿರುವ ಸವಾಲುಗಳಾಗಿವೆ  ಎಂದು ಬಿಡೆನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಫೆಡರಲ್ ಏಜೆನ್ಸಿಗಳ ಮೂಲಕ ಅಧಿಕಾರ ವರ್ಗಾವಣೆಯ ಔಪಚಾರಿಕ  ಪ್ರಕ್ರಿಯೆ ಪ್ರಾರಂಭಿಸಲು  ಆಡಳಿತ  ಯಂತ್ರ  ತೆಗೆದುಕೊಂಡ  ನಿರ್ಧಾರ  ಪ್ರಮುಖ ಹೆಜ್ಜೆಯಾಗಿದೆ" ಎಂದು ಹೇಳಿಕೆ ತಿಳಿಸಿದೆ.

ಟ್ರಂಪ್ ಏನು ಹೇಳಿದರು?

ಹೊಸದಾಗಿ ಚುನಾಯಿತರಾದ ಅಧ್ಯಕ್ಷರಿಗೆ ಅಧಿಕಾರ   ಹಸ್ತಾಂತರಿಸುವಹೊಣೆಯನ್ನು    ಜಿಎಸ್ ಎ  ತಾವು ಹಸ್ತಾಂತರಿಸಿದ್ದೇವೆ. ಹಾಗೂ   ಈ  ವಿಷಯವನ್ನು ಬೈಡೆನ್ ತಂಡಕ್ಕೆ ತಿಳಿಸಿದ್ದಾಗಿ  ಟ್ರಂಪ್ ಟ್ವೀಟ್ ಮಾಡಿದ್ದಾರೆ.


ಅಧ್ಯಕ್ಷರಾಗಿ  ಚುನಾಯಿತರಾದ ನಾಯಕನಿಗೆ 63 ಲಕ್ಷ ಡಾಲರ್   ನಿಧಿ  ಲಭ್ಯವಾಗಲಿದೆ ಎಂದು    ಜಿಎಸ್ ಎ  ಮುಖ್ಯಸ್ಥ  ಎಮಿಲಿ ಮರ್ಫಿ ಹೇಳಿದ್ದಾರೆ.

ಚುನಾವಣಾ ಫಲಿತಾಂಶಗಳ ವಿರುದ್ದ  ಹೋರಾಟ  ಮುಂದುವರಿಯಲಿದೆ ಎಂದು ಹೇಳಿರುವ  ಟ್ರಂಪ್,   ದೇಶದ  ಹಿತಾಸಕ್ತಿ  ದೃಷ್ಟಿಯಲ್ಲಿರಿಸಿಕೊಂಡು  ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದ ಶಿಷ್ಟಾಚಾರ ವಿಷಯದಲ್ಲಿ ಅಗತ್ಯವಾದ  ಕ್ರಮ ಕೈಗೊಳ್ಳಬೇಕೆಂದು ಎಮಿಲಿ  ಮರ್ಫಿ ಅವರಿಗೆ  ಸೂಚಿಸಿದ್ದೇನೆ.  ಆದೇ ರೀತಿ ನನ್ನ ತಂಡಕ್ಕೂ ಇದೇ ಸೂಚನೆ ನೀಡಿದ್ದೇನೆ ಎಂದು ಅಧ್ಯಕ್ಷ ಟ್ರಂಪ್  ಹೇಳಿದ್ದಾರೆ.

 

 

ಸುದ್ದಿ ಓದಿ