ಉಕ್ರೇನ್ ಮೇಲೆ ಆಕ್ರಮಣ ನಡೆಸಿದರೆ ಪರಿಣಾಮ ನೆಟ್ಟಗಿರದು.. ರಷ್ಯಾಗೆ ಅಮೆರಿಕಾ ಎಚ್ಚರಿಕೆ
ವಾಷಿಂಗ್ಟನ್, ಜ 20 ಉಕ್ರೇನ್ ವಿವಾದ ಸಂಬಂಧ ಅಮೆರಿಕಾ -ರಷ್ಯಾ ನಡುವಣ ಜಟಾಪಟಿ ಮುಂದುವರಿದಿದೆ. ಅಧ್ಯಕ್ಷ ಜೋ ಬೈಡನ್, ಈಗಾಗಲೇ 600 ಮಿಲಿಯನ್ ಡಾಲರ್ ಮೌಲ್ಯದ ಅತ್ಯಾಧುನಿಕ ರಕ್ಷಣಾ ಸಾಧನಗಳನ್ನು ಉಕ್ರೇನ್ಗೆ ರವಾನಿಸಿದ್ದೇನೆ. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅಮೆರಿಕ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಷ್ಯಾದ ನಡೆ ಇದೇ ರೀತಿ ಮುಂದುವರೆದರೆ, ಕಠಿಣ ನಿರ್ಬಂಧ ಹೇರಲಾಗುವುದು ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನದಿಂದ ಅಮೆರಿಕ ತನ್ನ ಭದ್ರತಾ ಪಡೆಗಳನ್ನು ವಾಪಸ್ ಕರೆದುಕೊಂಡ ವಿಚಾರದ
ಬಗ್ಗೆ ತಾವು ಕ್ಷಮೆ ಕೇಳುವುದಿಲ್ಲ ಎಂದು ಬೈಡನ್ ಸ್ಪಷ್ಟನೆ ನೀಡಿದ್ದಾರೆ.
20 ವರ್ಷಗಳ ನಂತರ ಅಫ್ಘಾನಿಸ್ತಾನದಿಂದ ಹೊರಬರಲು ಬೇರೆ ಯಾವುದೇ ಮಾರ್ಗ ಇರಲಿಲ್ಲ.
ಯಾವಾಗ ಪ್ರಶ್ನೆ ಮಾಡಿದರೂ, ನಾನು ಆ ಕುರಿತು ಕ್ಷಮೆ ಕೇಳುವುದಿಲ್ಲ ಎಂದಿದ್ದಾರೆ.
ತಾಲಿಬಾನ್‌ನ ಅಸಮರ್ಥತೆಯ ಪರಿಣಾಮವಾಗಿ ಅಫ್ಘಾನಿಸ್ತಾನದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಬೇಸರವಾಗುತ್ತಿದೆ. ನಮ್ಮ ವಿರುದ್ಧ ವಿಮಾನ ನಿಲ್ದಾಣದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಅಫ್ಘಾನಿಸ್ತಾನ ನಾಗರಿಕರ ಬಗ್ಗೆ ಕಳಕಳಿಯಿದೆ ಎಂದು ಬೈಡನ್ ಹೇಳಿದ್ದಾರೆ.
ಒಂದು ವೇಳೆ ಅಮೆರಿಕಾ ಪಡೆಗಳು ಅಫ್ಘಾನಿಸ್ತಾನದಲ್ಲಿಯೇ ಉಳಿದುಕೊಂಡಿದ್ದರೆ, ಮತ್ತೆ ಸಾವಿರ ಸೈನಿಕರನ್ನು ನಿಯೋಜನೆ ಮಾಡಲು ಕೋರಲಾಗುತ್ತಿತ್ತು ಎಂದು ಬೈಡನ್ ತಿಳಿಸಿದ್ದಾರೆ.
ಚೀನಾದ ಸರಕುಗಳ ಆಮದು ಮೇಲಿನ ಸುಂಕ ತೆರವುಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ವ್ಯಾಪಾರ ಪ್ರತಿನಿಧಿಗಳು ಈ ಕುರಿತು ಚಿಂತನೆ ನಡೆಸುತ್ತಿದ್ದಾರೆ ಎಂದು ಬೈಡನ್ ಉತ್ತರಿಸಿದ್ದಾರೆ.