ಅಂತರರಾಷ್ಟ್ರೀಯ

ಟ್ರಂಪ್ - ಬೈಡನ್ ಹಣಾಹಣಿ, ವಿಶ್ವದ ದೊಡ್ಡಣ್ಣನ ಕೀರೀಟ ಯಾರ ಮುಡಿಗೆ?

ಟ್ರಂಪ್ - ಬೈಡನ್ ಹಣಾಹಣಿ, ವಿಶ್ವದ ದೊಡ್ಡಣ್ಣನ ಕೀರೀಟ ಯಾರ ಮುಡಿಗೆ?

ವಾಷಿಂಗ್ಟನ್, ನವೆಂಬರ್ 4: ಅಮೆರಿಕ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂಡಿಯಾ ರಾಜ್ಯದಲ್ಲಿ  ಗೆಲುವು ಸಾಧಿಸಲಿದ್ದಾರೆ   ಎಂದು ಸಿಎನ್‌ಎನ್ ಸಮೀಕ್ಷಾ ವರದಿ ಹೇಳಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೆಂಟುಕಿ, ಇಂಡಿಯಾನಾ, ಸೌಥ್ ಕರೋಲಿನಾ ದಲ್ಲಿ ಜಯಗಳಿಸಿದ್ದರೆ  ಅವರ ಎದುರಾಳಿ . ಜೋ ಬೈಡನ್ ಅವರು ಟೆಕ್ಸಾಸ್, ಜಾರ್ಜಿಯಾ, ಫ್ಲೋರಿಡಾ, ಹ್ಯಾಂಪ್ ಶೈರ್, ವರ್ಮೊಂಟ್ ವಶಪಡಿಸಿಕೊಂಡಿದ್ದು ವಿಶ್ವದ  ದೊಡ್ಡಣ್ಣ ಕೀರಿಟ ಯಾರ ಮುಡಿಗೇರಲಿದೆ ಎಂಬ ಕೂತುಹಲ ಹೆಚ್ಚಾಗಿದೆ. 

ಅಧ್ಯಕ್ಷಗಿರಿ ಅಲಂಕರಿಸಲು  ಟ್ರಂಪ್ ಅಥವಾ ಬೈಡನ್ ಅವರು 538 ಮತಗಳಿರುವ ಎಲೆಕ್ಟೊರೆಲ್ ಕಾಲೇಜಿನ  ಶೇ 50ರಷ್ಟು ಮತಗಳನ್ನು ಪಡೆಯಬೇಕು   ಅಂದರೆ, ಪ್ರತಿ ಅಭ್ಯರ್ಥಿ ಕನಿಷ್ಠ 270 ಮತಗಳನ್ನು ಗೆದ್ದರೆ ಮಾತ್ರ ಅಧ್ಯಕ್ಷ ಸ್ಥಾನ ಪಡೆಯುವ ಅರ್ಹತೆ ದೊರಕಲಿದೆ.  

ರಾಜ್ಯಗಳ ಮತಗಳು ಗೆಲುವಿಗೆ  ಬಹಳ ಪಾತ್ರ ವಹಿಸಲಿದೆ.ಇಂಡಿಯಾನಾ 11 ಎಲೆಕ್ಟೊರೆಲ್ ಕಾಲೇಜಿನ 11 ಮತ ನೀಡಲಿದೆ ಒದೊಂದು ರಾಜ್ಯಕ್ಕೂ ಒಂದು ರಿತಿಯ  ಮತ ಪಾಯಿಂಟ್ ನಿಗದಿಯಾಗಿದೆ.ಈ ಬಾರಿ, 100 ದಶಲಕ್ಷಕ್ಕೂ ಹೆಚ್ಚು ಜನರು ಈಗಾಗಲೇ ಮತದಾನದಲ್ಲಿ ತಮ್ಮ ಮತಪತ್ರಗಳನ್ನು ಚಲಾಯಿಸಿದ್ದಾರೆ. ಹೆಚ್ಚು ಮತದಾರರು  ಅಂಚೆ ಮೂಲಕ ಮತ ಚಲಾವಣೆ ಮಾಡಿದ ಕಾರಣ ಅವುಗಳ ಎಣಿಕೆಗೆ ಬಹಳ ಸಮಯ ತೆಗೆದುಕೊಳ್ಳಲಿದ್ದು ಫಲಿತಾಂಶ  ವಿಳಂಬವಾಗಲಿದೆ.

ವಿಶ್ವದ ಗಮನ ಸೆಳೆದಿರುವ ಅಮೆರಿಕದ ಅಧ್ಯಕ್ಷೀಯ ಮತ್ತು ಉಪಾಧ್ಯಕ್ಷೀಯ ಚುನಾವಣೆಗೆ ನಡೆದ ಮತದಾನ ಬಹುತೇಕ ಪೂರ್ಣಗೊಂಡಿದ್ದು, ಮೊದಲ ಹಂತದ ಫಲಿತಾಂಶಗಳು ಹೊರಬೀಳಲಾರಂಭಿಸಿದೆ.ಆದರು ಒಟ್ಟು ಫಲಿತಾಂಶ ಪ್ರಕಟ ವಾಗುವುದು  ವಿಳಂಬವಾಗಲಿದೆ.  ಹಾಲಿ ಅಧ್ಯಕ್ಷ  ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ ನಡುವೆ ನೇರಾನೇರಾ ಹಣಾಹಣಿ ಏರ್ಪಟ್ಟಿದೆ.

ಜಯ ದಾಖಲಿಸಲು 270 ಎಲೆಕ್ಟೋರಲ್ ಮತಗಳು ಅಗತ್ಯ. ಈ ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಸುಮಾರು 23.9 ಕೋಟಿ ಅರ್ಹ ಮತದಾರರಲ್ಲಿ 10  ಕೋಟಿ ಜನರು ಚುನಾವಣೆಗೆ  ಮೊದಲೇ  ಹಕ್ಕು ಚಲಾಯಿಸಿದ್ದು ಇದೊಂದು ಚುನಾವಣಾ ಇತಿಹಾಸದ  ದಾಖಲೆಯಾಗಿದೆ. 

ಸುದ್ದಿ ಓದಿ