ಉತ್ತರ ಕೊರಿಯಾ ಮಣಿಸಲು ಅಮೆರಿಕದ ಕರಡು! ಇಂದು ಮತದಾನ
ವಿಶ್ವಸಂಸ್ಥೆ: ಮೇ 26 : ಈ ವರ್ಷ ಪ್ಯೊಂಗ್ಯಾಂಗ್‌ನ ಬಹು ಕ್ಷಿಪಣಿ ಉಡಾವಣೆಗಳ ಹಿನ್ನೆಲೆಯಲ್ಲಿ ಉತ್ತರ ಕೊರಿಯಾದ ಮೇಲಿನ ನಿರ್ಬಂಧಗಳನ್ನು ಮತ್ತಷ್ಟು ಬಿಗಿಗೊಳಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಇಂದು ಮತ ಚಲಾಯಿಸಲಿದೆ. ಈ ಪ್ರಸ್ತಾವನೆಯ ಕರಡನ್ನು ಅಮೆರಿಕ ಸಿದ್ಧಪಡಿಸಿದೆ. ಗುರುವಾರ ಮತದಾನ ನಡೆಯುವ ನಿರೀಕ್ಷೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸ್ಪುಟ್ನಿಕ್ ಸುದ್ದಿ ಸಂಸ್ಥೆ ಬುಧವಾರ ಮಾಹಿತಿ ನೀಡಿತ್ತು.
ಸಂಸ್ಥೆಯು ಪಡೆದ ಕರಡು ಪ್ರತಿಯ ಪ್ರಕಾರ, ಉತ್ತರ ಕೊರಿಯಾ ನಿನ್ನೆ ಪ್ಯೊಂಗ್ಯಾಂಗ್‌ನ ಸುನಾನ್ ಪ್ರದೇಶದಿಂದ ಜಪಾನ್ ಸಮುದ್ರದ ಕಡೆಗೆ ಮೂರು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪರೀಕ್ಷಿಸಿದೆ. ಪ್ರಸ್ತಾವನೆಯು ಉತ್ತರ ಕೊರಿಯಾದ ಪರಮಾಣು ಶಸ್ತ್ರಾಸ್ತ್ರಗಳು ಅಥವಾ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮದಲ್ಲಿ ಪಾತ್ರವಹಿಸುವ ಹಡಗುಗಳ ಮೇಲಿನ ನಿರ್ಬಂಧಗಳನ್ನು ಮತ್ತಷ್ಟು ಬಿಗಿಗೊಳಿಸುತ್ತದೆ ಎಂದು ವರದಿ ಮಾಡಿದೆ.
ಉತ್ತರ ಕೊರಿಯಾದ ಮೇಲೆ ಪ್ರಮುಖವಾಗಿ ಖನಿಜ ಇಂಧನಗಳು, ಖನಿಜ ತೈಲ ಮತ್ತು ಅದರಿಂದ ಉತ್ಪಾದಿಸಲಾಗುವ ಇತರ ಉತ್ಪನ್ನಗಳನ್ನು ರಫ್ತು ಮಾಡಂತೆ ನಿಷೇಧಿಸಲಾಗುತ್ತದೆ. ಹಾಗೆಯೇ ಬಿಟುಮಿನಸ್ ವಸ್ತುಗಳು, ಅಲ್ಲದೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಎಲ್ಲ ಸದಸ್ಯ ರಾಷ್ಟ್ರಗಳು ಉತ್ತರ ಕೊರಿಯಾದಿಂದ ಖನಿಜ ಮೇಣ ಮತ್ತು ಕೈಗಡಿಯಾರಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಲಿದೆ.
ಈ ನಿರ್ಣಯದ ಅಡಿಯಲ್ಲಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ಉತ್ತರ ಕೊರಿಯಾಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ತಂಬಾಕು ಅಥವಾ ಇತರ ತಂಬಾಕು ಉತ್ಪನ್ನಗಳನ್ನು ಕಳುಹಿಸುವುದನ್ನು ನಿಷೇಧ ಹೇರಲಾಗುತ್ತದೆ. ಅದೇ ರೀತಿ, ಈ ನಿರ್ಣಯದ ಪ್ರಕಾರ, ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ಉತ್ತರ ಕೊರಿಯಾದಿಂದ ತಂತ್ರಜ್ಞಾನ ಸಂಬಂಧಿತ ಸೇವೆಗಳನ್ನು ಸ್ವೀಕರಿಸುವ ಹಾಗಿಲ್ಲ. ಹೆಚ್ಚುವರಿಯಾಗಿ, ಭದ್ರತಾ ಮಂಡಳಿಯ ನಿರ್ಣಯಕ್ಕೆ ಅನುಗುಣವಾಗಿ ನಿಷೇಧಿತ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ವಿಲೇವಾರಿ ಮಾಡಲು ಸದಸ್ಯ ರಾಷ್ಟ್ರಗಳಿಗೆ ಅಧಿಕಾರ ನೀಡಲಾಗುವ ಪ್ರಸ್ತಾವಗಳನ್ನು ಅಮೆರಿಕದ ಕರುಡು ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ.