ಅಂತರರಾಷ್ಟ್ರೀಯ

ಓಮಿಕ್ರಾನ್;‌ ದಕ್ಷಿಣ ಆಫ್ರಿಕಾದ ತ್ವರಿತ, ಪಾರದರ್ಶಕ ಪ್ರತಿಕ್ರಿಯೆಗೆ ಅಮೆರಿಕಾ ಪ್ರಶಂಸೆ

ಓಮಿಕ್ರಾನ್;‌   ದಕ್ಷಿಣ  ಆಫ್ರಿಕಾದ  ತ್ವರಿತ, ಪಾರದರ್ಶಕ  ಪ್ರತಿಕ್ರಿಯೆಗೆ   ಅಮೆರಿಕಾ ಪ್ರಶಂಸೆ

ವಾಷಿಂಗ್ಟನ್, ನ.  2 ಕೊರೊನಾ  ವೈರಸ್‌   ಹೊಸ  ರೂಪಾಂತರಿ  ಓಮಿಕ್ರಾನ್  ಕಂಡುಬಂದ   ನಂತರ    ತ್ವರಿತ   ಹಾಗೂ  ಪಾರದರ್ಶಕ   ಕ್ರಮಗಳನ್ನು   ಕೈಗೊಂಡಿರುವ     ದಕ್ಷಿಣ ಆಫ್ರಿಕಾಗೆ      ಅಮೆರಿಕಾ    ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್  ಧನ್ಯವಾದ  ಸಲ್ಲಿಸಿದ್ದಾರೆ   ಎಂದು   ವಿದೇಶಾಂಗ  ಇಲಾಖೆಯ  ವಕ್ತಾರೆ  ನೆಡ್ ಪ್ರೈಸ್ ಹೇಳಿದ್ದಾರೆ.

" ವಿದೇಶಾಂಗ   ಕಾರ್ಯದರ್ಶಿ  ಆಂಟೋನಿ ಜೆ. ಬ್ಲಿಂಕೆನ್  ಅವರು ,  ದಕ್ಷಿಣ ಆಫ್ರಿಕಾದ ಅಂತರರಾಷ್ಟ್ರೀಯ ಸಂಬಂಧಗಳು  ಹಾಗೂ  ಸಹಕಾರ ಸಚಿವ ನಲೆಡಿ ಪಾಂಡೋರ್ ಅವರೊಂದಿಗೆ ಮಾತುಕತೆ ನಡೆಸಿದರು ...  ಓಮಿಕ್ರಾನ್  ರೂಪಾಂತರಿಯನ್ನು  ತ್ವರಿತವಾಗಿ ಗುರುತಿಸಿದ        ದಕ್ಷಿಣ  ಆಫ್ರಿಕಾದ ವಿಜ್ಞಾನಿಗಳನ್ನು  ಕಾರ್ಯದರ್ಶಿ  ಬ್ಲಿಂಕೆನ್  ಶ್ಲಾಘಿಸಿದರು.  ಜತೆಗೆ    ಈ  ಮಾಹಿತಿ   ಹಂಚಿಕೊಳ್ಳುವಲ್ಲಿ ಅದರ ಪಾರದರ್ಶಕತೆಗಾಗಿ   ವಿಶೇಷವಾಗಿ   ದಕ್ಷಿಣ  ಆಫ್ರಿಕಾ ಸರ್ಕಾರವನ್ನು   ಅವರು  ಪ್ರಶಂಸಿಸಿದ್ದಾರೆ.  ಈ  ಮಾಹಿತಿ  ಜಗತ್ತಿಗೆ ಮಾದರಿಯಾಗಿ ಕಾರ್ಯನಿರ್ವಹಿಸಲಿದೆ   ಎಂದು ಪ್ರೈಸ್ ಶನಿವಾರ ಹೇಳಿದರು.

ಕೋವಿಡ್‌   ವಿರುದ್ಧ    ಜನರಿಗೆ   ಲಸಿಕೆ    ನೀಡಲು   ಅಮೆರಿಕಾ,    ಆಫ್ರಿಕನ್ ಯೂನಿಯನ್, ದಕ್ಷಿಣ ಆಫ್ರಿಕಾ ಹಾಗೂ  ಇತರ ಆಫ್ರಿಕನ್ ದೇಶಗಳ ನಡುವೆ   ನಿರಂತರ ಪಾಲುದಾರಿಕೆಯ  ಪ್ರಾಮುಖ್ಯತೆಯನ್ನು ಬ್ಲಿಂಕೆನ್ ಹಾಗೂ  ಪಾಂಡೋರ್ ಒತ್ತಿ ಹೇಳಿದರು  ಎಂದು  ಹೇಳಿಕೆಯಲ್ಲಿ ತಿಳಿಸಲಾಗಿದೆ.

  ವಿಶ್ವ ಆರೋಗ್ಯ ಸಂಸ್ಥೆ (WHO)  ದಕ್ಷಿಣ  ಆಫ್ರಿಕಾದ  ಹೊಸ  ರೂಪಾಂತರಿಯನ್ನು   ಗಂಭೀರ ತಳಿ   ಎಂದು ಗುರುತಿಸಿದೆ,  ಇಸ್ರೇಲ್, ಜರ್ಮನಿ, ಇಟಲಿ  ಹಾಗೂ  ಜೆಕ್ ರಿಪಬ್ಲಿಕ್ ಸೇರಿದಂತೆ ಅನೇಕ ದೇಶಗಳಲ್ಲಿ ಹೊಸ ರೂಪಾಂತರಿ  ಪ್ರಕರಣಗಳನ್ನು  ಈಗಾಗಲೇ ದೃಢಪಡಿಸಲಾಗಿದೆ.

ರಷ್ಯಾದ  ಡಬ್ಲ್ಯು ಎಚ್‌ ಒ ಪ್ರತಿನಿಧಿ  ಮೆಲಿಟಾ ವುಜ್ನೋವಿಕ್,  ಹೊಸ ಒಮಿಕ್ರಾನ್   ರೂಪಾಂತರಿಯ ಬಗ್ಗೆ ಭಯಪಡಲು  ಯಾವುದೇ  ಕಾರಣವಿಲ್ಲ ಎಂದು ಶನಿವಾರ ಹೇಳಿದ್ದು,   ಕೊರೊನಾ ವೈರಸ್ ಇತರ  ರೂಪಾಂತರಿಗಳಿಗಿಂತ ಹೆಚ್ಚು ಸಾಂಕ್ರಾಮಿಕವಾಗಿರಬಹುದು ಎಂಬ ಸಂಶಯ ವ್ಯಕ್ತಪಡಿಸಿದ್

ಸುದ್ದಿ ಓದಿ