ಪೂರ್ವ ಅಫ್ಘಾನಿಸ್ತಾನ : ಐಸಿಸ್-ಖೋರಾಸನ್ ವಿರುದ್ಧ ಅಮೆರಿಕ ವಾಯುದಾಳಿ
ವಾಷಿಂಗ್ಟನ್, ಆಗಸ್ಟ್ 28 : ಪೂರ್ವ ಅಫ್ಘಾನಿಸ್ತಾನದಲ್ಲಿ ಇಸ್ಲಾಮಿಕ್ ಸ್ಟೇಟ್-ಖೋರಾಸನ್ ಭಯೋತ್ಪಾದಕ ಸಂಘಟನೆಯ ವಿರುದ್ಧ ಅಮೆರಿಕ ವಾಯುದಾಳಿ ನಡೆಸಿದ್ದು, ಓರ್ವ ಉಗ್ರ ಹತನಾಗಿದ್ದಾನೆ. ಕಾಬೂಲ್ ನಲ್ಲಿ ನಡೆದ ಸರಳಿ ಭಯೋತ್ಪಾದಾನಾ ದಾಳಿಗೆ ಅಮೆರಿಕ ಈ ಪ್ರತಿಕಾರದ ದಾಳಿ ನಡೆಸಿದೆ.
"ಅಮೆರಿಕಮಿಲಿಟರಿ ಪಡೆಗಳು ಇಂದು ಐಸಿಸ್-ಖೋರಾಸನ್ ಸಂಘಟನೆಯ ವಿರುದ್ಧ ಭಯೋತ್ಪಾದನಾ ನಿಗ್ರಹವನ್ನು ನಡೆಸಿದೆ ಎಂದು ಅಮೆರಿಕ ಸೆಂಟ್ರಲ್ ಕಮಾಂಡ್ ಕ್ಯಾಪ್ಟನ್ ವಕ್ತಾರ ಬಿಲ್ ಅರ್ಬನ್ ಹೇಳಿದ್ದಾರೆ.
ಅಫ್ಘಾನಿಸ್ತಾನದ ನಂಗರ್‌ಹಾರ್ ಪ್ರಾಂತ್ಯದಲ್ಲಿ ಮಾನವರಹಿತ ವೈಮಾನಿಕ ದಾಳಿ ನಡೆಯಿತು. ನಾವು ಗುರಿಯನ್ನು ಬೇಟೆಯಾಡಿದ್ದೇವೆ" ಎಂದು ಅರ್ಬನ್ ಶುಕ್ರವಾರ ತಡರಾತ್ರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವೈಮಾನಿಕ ದಾಳಿಯಿಂದ ಯಾವುದೇ ನಾಗರಿಕರ ಸಾವುನೋವುಗಳ ಬಗ್ಗೆ ಅಮೆರಿಕ ಸೈನ್ಯಕ್ಕೆ ತಿಳಿದುಬಂದಿಲ್ಲ ಎಂದು ಅವರು ಹೇಳಿದ್ದಾರೆ.
ಐಸಿಸ್-ಕೆ ಗುಂಪು ಗುರುವಾರ ಕಾಬೂಲ್‌ನಲ್ಲಿ ಸರಣಿ ಭಯೋತ್ಪಾದಕ ದಾಳಿಗಳನ್ನು ನಡೆಸಿತು. ಇದರಲ್ಲಿ ಅದು 100 ಕ್ಕೂ ಹೆಚ್ಚು ಜನರು, 13 ಅಮೆರಿಕ ಸೇನಾಧಿಕಾರಿಗಳು ಮೃತಪಟ್ಟು, 1,300 ಹೆಚ್ಚು ಗಾಯಗೊಂಡರು. ಇದು ಅಂತಾರಾಷ್ಟ್ರೀಯ ಸಮುದಾಯದ ಆಕ್ರೋಶಕ್ಕೆ ಕಾರಣವಾಯಿತು.