ಕೊರೋನ , ಅಮೆರಿಕದಲ್ಲಿ ಹೆಚ್ಚುತ್ತಿದೆ ಸಾವಿನ ಪ್ರಕರಣಗಳು
ಮಾಸ್ಕೋ ಡಿಸೆಂಬರ್3:ಕ್ರಿಸ್ ಮಸ್ ಸಮಯದಲ್ಲೇ
ಅಮೆರಿಕದಲ್ಲಿ ಕೊರೋನ ಸೋಂಕು , ಸಾವಿನ ಪ್ರಕರಣಗಳು
ಎರಡೂ ಹೆಚ್ಚಾಗುತ್ತಿರುವುದು ಕಳವಳಕಕ್ಕೆ ಕಾರಣವಾಗಿದೆ. ಕಳೆದ 24 ಗಂಟೆಗಳಲ್ಲಿ 2,733 ರೋಗಿಗಳು ಕೊರೋನ ಸೋಂಕಿಗೆ
ಬಲಿಯಾಗಿದ್ದಾರೆ.
ಇದು ಸೋಂಕು ಪ್ರಕರಣಗಳು ಏಕಾಏಕಿ ಪ್ರಾರಂಭವಾದ ನಂತರದ ದೈನಂದಿನ ಹೆಚ್ಚಳದ ಸಾವಿನ ಪ್ರಕರಣ ವಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ಹೇಳಿವೆ. ಕಳೆದ ಮಾರ್ಚ್ 11 ರಂದು ವಿಶ್ವ ಆರೋಗ್ಯ ಸಂಸ್ಥೆ ಕೊರೋನ ಸೋಂಕು ಸಾಂಕ್ರಾಮಿಕ ರೋಗ ಎಂದು ಘೋಷಿಸಿತ್ತು ಇಲ್ಲಿಯವರೆಗೆ, ವಿಶ್ವಾದ್ಯಂತ 64.4 ದಶಲಕ್ಷಕ್ಕೂ ಹೆಚ್ಚು ಜನರು ಕರೋನ ಸೋಂಕಿಗೆ ಒಳಗಾಗಿದ್ದಾರೆ. 1.49 ದಶಲಕ್ಷಕ್ಕೂ ಹೆಚ್ಚು ಸಾವುನೋವುಗಳು ಸಂಭವಿಸಿವೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ (ಜೆಎಚ್‌ಯು) ತಿಳಿಸಿದೆ. ಪ್ರಕರಣಗಳ ಸಂಖ್ಯೆ (13.9 ದಶಲಕ್ಷಕ್ಕೂ ಹೆಚ್ಚು) ಮತ್ತು ಸಾವುನೋವುಗಳು (273,000 ಕ್ಕಿಂತ ಹೆಚ್ಚು) ಎರಡರಲ್ಲೂ ಅಮೆರಿಕವೇ ಹೆಚ್ಚು ಹಾನಿಗೊಳಗಾದ ರಾಷ್ಟ್ರವಾಗಿಯೇ ಉಳಿದಿದೆ.