ಅಮೆರಿಕಾ ಅಧ್ಯಕ್ಷ ಜೋಬೈಡನ್ ಗಟ್ಟಿಮುಟ್ಟಾಗಿದ್ದಾರೆ; ವೈದ್ಯರು
ವಾಷಿಂಗ್ಟನ್, ನ 20 - ಜೋ ಬೈಡೆನ್ ಅವರು ಅಮೆರಿಕಾ ಅಧ್ಯಕ್ಷರಾಗಿ ತಮ್ಮ ಕರ್ತವ್ಯ ಹಾಗೂ ಕಟ್ಟುಪಾಡುಗಳನ್ನು ನಿಭಾಯಿಸಲು ಸಮರ್ಥರಾಗಿದ್ದಾರೆ ಎಂದು ಅಧ್ಯಕ್ಷರ ವೈದ್ಯ ಕೆವಿನ್ ಒ'ಕಾನ್ನರ್ ಶ್ವೇತಭವನಕ್ಕೆ ಸಲ್ಲಿಸಿರುವ ಜ್ಞಾಪಕ ಪತ್ರದಲ್ಲಿ ದೃಢಪಡಿಸಿದ್ದಾರೆ.
ತಮ್ಮ ಕರ್ತವ್ಯಗಳನ್ನು ನಿಭಾಯಿಸಲು ಅಧ್ಯಕ್ಷ ಬೈಡನ್ ಸಮರ್ಥರಾಗಿದ್ದು, ಯಾವುದೇ ವಿನಾಯಿತಿಗಳು ಅಥವಾ ಸೌಕರ್ಯಗಳಿಲ್ಲದೆ ತಮ್ಮ ಎಲ್ಲಾ ಜವಾಬ್ದಾರಿಗಳನ್ನು ಸಂಪೂರ್ಣವಾಗಿ ನಿರ್ವಹಿಸುತ್ತಾರೆ" ಎಂದು ಓ'ಕಾನ್ನರ್ ಶುಕ್ರವಾರ ಹೇಳಿದ್ದಾರೆ.
ಬೈಡನ್ ಭಾಷಣ ಮಾಡುವಾಗ "ಗಂಟಲು ಸಮಸ್ಯೆ " ಅನುಭವಿಸುತ್ತಿರುವುದು ತನಿಖೆಯನ್ನು ಖಾತರಿಪಡಿಸಿದೆ. ಬಿಡೆನ್ ಅವರ ನಡಿಗೆ ಕೂಡ ದೃಢವಾಗಿದೆ ಎಂದು ವರದಿಯಲ್ಲಿ ವಿವರಿಸಿದ್ದಾರೆ.