ಅಂತರರಾಷ್ಟ್ರೀಯ

ಸೌದಿ, ಇಸ್ರೇಲ್‌ಗೆ ಅಮೆರಿಕ ಅಧ್ಯಕ್ಷ ಬಿಡೆನ್ ಭೇಟಿ ಸಾಧ್ಯತೆ

ಸೌದಿ, ಇಸ್ರೇಲ್‌ಗೆ ಅಮೆರಿಕ ಅಧ್ಯಕ್ಷ ಬಿಡೆನ್ ಭೇಟಿ ಸಾಧ್ಯತೆ

ವಾಷಿಂಗ್ಟನ್: ಜೂನ್ 12: ಮುಂದಿನ ತಿಂಗಳು ಸೌದಿ ಅರೇಬಿಯಾಕ್ಕೆ ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರ ಭೇಟಿಯ ಅಧಿಕೃತ ಘೋಷಣೆ ಸೋಮವಾರ ಹೊರಬೀಳುವ ಸಾಧ್ಯತೆ ಇದೆ. ಈ ಮಾಹಿತಿಯನ್ನು ವಾಲ್ ಸ್ಟ್ರೀಟ್ ಜರ್ನಲ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ

ಬಿಡೆನ್ ಅವರು ಗಲ್ಫ್ ರಾಷ್ಟ್ರಗಳ ತಮ್ಮ ಪ್ರವಾಸದ ಭಾಗವಾಗಿ ಮುಂದಿನ ತಿಂಗಳು ಸೌದಿ ಅರೇಬಿಯಾಕ್ಕೆ ಪ್ರಯಾಣಿಸಲಿದ್ದಾರೆ. ಈ ಪ್ರವಾಸದ ವೇಳೆ ಇಸ್ರೇಲ್‌ ಭೇಟಿಯನ್ನೂ ಸಹ ಒಳಗೊಂಡಿದೆ. ಸೌದಿ ಭೇಟಿಯ ವೇಳೆ ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಬಿಡೆನ್ ಸಭೆ ನಡೆಸಲಿದ್ದಾರೆ.

ಬಿಡೆನ್ ಅವರ ಸೌದಿ ಅರೇಬಿಯಾ ಭೇಟಿಯ ನಿರ್ಧಾರದ ಬಗ್ಗೆ ಕೇಳಿದಾಗ, ಅವರು ಪ್ರವಾಸ ಈಗ ಅಲ್ಲ. ಯಾವುದೇ ರಾಷ್ಟ್ರದೊಂದಿಗಿನ ಮಾತುಕತೆಯು ಭದ್ರತಾ ವಿಷಯದ ಮೇಲೆ ಕೇಂದ್ರಿಕೃತವಾಗಿರುತ್ತದೆ ಎಂದು ತಿಳಿಸಿದ್ದರು.

ಪತ್ರಕರ್ತ ಜಮಾಲ್ ಖಾಸೋಗಿ ಹತ್ಯೆಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಮತ್ತು ತೈಲ ಉತ್ಪಾದನೆಯನ್ನು ಹೆಚ್ಚಿಸಲು ಬಿಡೆನ್ ಆಡಳಿತ ಮತ್ತು ಸೌದಿ ನಾಯಕತ್ವವು ಒಪ್ಪಿಕೊಂಡಿದೆ ಎಂದು ಸಿಎನ್‌ಎನ್, ಹಿರಿಯ ಯುಎಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

ಇದಕ್ಕೂ ಮುನ್ನ ಉಕ್ರೇನ್ ರಷ್ಯಾ ಸಂಘರ್ಷ ಆರಂಭದ ವೇಳೆ ಜೋ ಬಿಡೆನ್ ದೂರವಾಣಿ ಕರೆಯನ್ನು ಸೌದಿ ಅರೆಬಿಯಾ ಹಾಗೂ ಎಮಿರೇಟ್ಸ್ ನಾಯಕರು ತಿರಸ್ಕರಿಸಿದ್ದರು.

ಸುದ್ದಿ ಓದಿ