ಅಂತರರಾಷ್ಟ್ರೀಯ

ಅಮೆರಿಕಾ ಅಧ್ಯಕ್ಷ ಬೈಡನ್‌ ಜನಪ್ರಿಯತೆ ತೀವ್ರ ಕುಸಿತ- ಸಮೀಕ್ಷೆಯಲ್ಲಿ ಬಹಿರಂಗ

ಅಮೆರಿಕಾ  ಅಧ್ಯಕ್ಷ ಬೈಡನ್‌   ಜನಪ್ರಿಯತೆ    ತೀವ್ರ  ಕುಸಿತ- ಸಮೀಕ್ಷೆಯಲ್ಲಿ ಬಹಿರಂಗ

ವಾಷಿಂಗ್ಟನ್, ಅ 24   ಅಮೆರಿಕಾ  ಅಧ್ಯಕ್ಷ  ಜೋ ಬೈಡೆನ್     ಅವರ    ಅನುಮೋದನೆ   ರೇಟಿಂಗ್    ತೀವ್ರ   ಕುಸಿತ  ಕಂಡಿದೆ.    ಮೊದಲ ಒಂಬತ್ತು ತಿಂಗಳ   ಅಧ್ಯಕ್ಷೀಯ  ಅವಧಿಯಲ್ಲಿ   ಅವರ  ಜನಪ್ರಿಯತೆ    ಯಾವುದೇ   ಇತರ   ಅಮೆರಿಕಾ  ಅಧ್ಯಕ್ಷರಿಗಿಂತ   ಅತ್ಯಂತ  ಕಡಿಮೆಯಾಗಿದೆ ಎಂದು ಹೊಸ   ಸಮೀಕ್ಷೆಯೊಂದು    ಬಹಿರಂಗಪಡಿಸಿದೆ.

.
ಶನಿವಾರ  ಟೆಲಿಗ್ರಾಫ್ ಸಮೀಕ್ಷೆಯ  ಫಲಿತಾಂಶ ಗಳನ್ನು  ಬಿಡುಗಡೆ  ಮಾಡಿದೆ  ಬೈಡೆನ್ ಅವರ ಜನಪ್ರಿಯತೆ  ಶೇ  11.3  ಅಂಶ   ಕುಸಿದಿರುವುದು ಕಂಡುಬಂದಿದೆ.  ಮೊದಲ 9ತಿಂಗಳ  ಅಧ್ಯಕ್ಷೀಯ  ಅವಧಿಯಲ್ಲಿ   ಶೇ  56   ರಿಂದ     ಶೇ 44.7  ಇಳಿಕೆಯಾಗಿದೆ.  ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ  ಮೊದಲ ಒಂಬತ್ತು ತಿಂಗಳಲ್ಲಿ ಅನುಭವಿಸಿದ್ದಕ್ಕಿಂತ ಇದು ದೊಡ್ಡ ಕುಸಿತವಾಗಿದೆ.  ಅವರ ಅನುಮೋದನೆ ರೇಟಿಂಗ್   ಶೇ 10.1 ರಷ್ಟು  ಕಡಿಮೆಯಾಗಿತ್ತು.

ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜನಪ್ರಿಯತೆ  ಅವರ ಅಧ್ಯಕ್ಷರಾದ  ಮೊದಲ ಒಂಬತ್ತು ತಿಂಗಳಲ್ಲಿ ಕೇವಲ 4.4   ಕಡಿಮೆಯಾಗಿತ್ತು.  ಆದರೆ 1977-1981 ರಲ್ಲಿ  ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಜಿಮ್ಮಿ ಕಾರ್ಟರ್ ಅವರ  ಅನುಮೋದನೆ ರೇಟಿಂಗ್  ಶೇ 8.9   ಅಂಶಗಳಷ್ಟು   ಇಳಿಕೆಯಾಗಿತ್ತು.

ದಿ ಟೆಲಿಗ್ರಾಫ್  ಪ್ರಕಾರ, ಕೊರೊನಾ  ವೈರಸ್‌  ಪ್ರಕರಣಗಳು ಹೆಚ್ಚಳಗೊಂಡ  ಜುಲೈನಲ್ಲಿ  ಬೈಡನ್‌   ಜನಪ್ರಿಯತೆ    ಕುಸಿತ   ಆರಂಭಗೊಂಡಿತು.  ಆಗಸ್ಟ್  ಅಂತ್ಯದಲ್ಲಿ ಅಫ್ಘಾನಿಸ್ತಾನದಿಂದ   ಸೇನಾ ಪಡೆಗಳ   ವಾಪಸಾತಿ   ನಿರ್ಧಾರದಿಂದಾಗಿ  ಮತ್ತಷ್ಟು ಇಳಿಕೆಗೊಳ್ಳಲು ಕಾರಣವಾಗಿದೆ ಎಂದು ಹೇಳಿದೆ.

ಸುದ್ದಿ ಓದಿ