ಕೊರೋನ, ಅಮೆರಿಕದಲ್ಲಿ 3 ತಿಂಗಳು ಬಹಳ ಕಷ್ಟದ ಸಮಯ: ರಾಬರ್ಟ್ ರೆಡ್ಫೀಲ್ಡ್
ವಾಷಿಂಗ್ಟನ್, ಡಿಸೆಂಬರ್ 11 : ಕೊರೋನ ಸಂಕಷ್ಟದಿಂದ ಪಾರಾಗಲು ಮುಂದಿನ ಮೂರು ತಿಂಗಳು ಅಮೆರಿಕ ಬಹಳ ಎಚ್ಚರಿಕೆ ವಹಿಸಬೇಕು ಎಂದು ಸಿಡಿಸಿ ನಿರ್ದೇಶಕ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ನಿರ್ದೇಶಕ ರಾಬರ್ಟ್ ರೆಡ್ಫೀಲ್ಡ್ ಹೇಳಿದ್ದಾರೆ. ಕೊರೋನ ಹೆಚ್ಚಳ ಅತ್ಯಂತ ಕಷ್ಟಕರವಾದ ಸಾರ್ವಜನಿಕ ಆರೋಗ್ಯ ಪರಿಸ್ಥಿತಿಗೆ ತಳ್ಳಬಹುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು . ಮುಂದಿನ ಮೂರು ತಿಂಗಳು ಪರಿಸ್ಥಿತಿ ಗಂಭಿರವಾಗಿಆರೋಗ್ಯ ಇತಿಹಾಸದಲ್ಲಿ ಇದು ಅತ್ಯಂತ ಕಷ್ಟದ ಸಮಯವಾಗಲಿದೆ ಎಂದರು. ಆದರೆ ನವೆಂಬರ್ ನಲ್ಲಿ 4 ಮಿಲಿಯನ್ ಹೊಸ ಪ್ರಕರಣಗಳು ಸೇರ್ಪಡೆಯಾಗಿದೆ ಪ್ರತಿನಿತ್ಯ ಸೋಂಕು ಮತ್ತು ಸಾವಿನ ಪ್ರಕರಣ ಹೆಚ್ಚಾಗುತ್ತಿದೆ ಎಂದು ಅವರು ಹೇಳಿದರು.ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ 15.4 ದಶಲಕ್ಷಕ್ಕೂ ಹೆಚ್ಚು ಜನರು ಕರೋನ ಸೋಂಕು ಧನಾತ್ಮಕ ಪರೀಕ್ಷೆ ಮಾಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ ಮತ್ತು ಸಾವಿನ ಸಂಖ್ಯೆ ಈಗ 290, 219 ರಷ್ಟಿದೆ ಎಂದು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಅಂಕಿ ಅಂಶಗಳು ಗುರುವಾರ ಬಹಿರಂಗಪಡಿಸಿವೆ.