ವಿದೇಶಾಂಗ ಸಚಿವ ಜೈಶಂಕರ್ ಜೊತೆ ಅಮೆರಿಕಾ ವ್ಯಾಪಾರ ಪ್ರತಿನಿಧಿ ಭೇಟಿ
ವಾಷಿಂಗ್ಟನ್, ನ 24 - ಉಭಯ ದೇಶಗಳ ನಡುವಣ ವ್ಯಾಪಾರ ನೀತಿ ವೇದಿಕೆಯನ್ನು ಮರು ಪ್ರಾರಂಭಿಸಲು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಭೇಟಿ ಮಾಡಿರುವುದಾಗಿ ಅಮೆರಿಕಾ ವ್ಯಾಪಾರ ಪ್ರತಿನಿಧಿ ಕ್ಯಾಥರೀನ್ ತೈ ಹೇಳಿದ್ದಾರೆ.
"ಇಂಡೋ- ಪೆಸಿಫಿಕ್ ವಲಯದೊಂದಿಗೆ ಅಮೆರಿಕಾ ಸಂಬಂಧ ಬಲಪಡಿಸಲು, ಅಮೆರಿಕಾ - ಭಾರತ ಟಿಪಿಎಫ್ ( ವ್ಯಾಪಾರ ನೀತಿ ವೇದಿಕೆ ) ಮರು-ಪ್ರಾರಂಭಿಸುವುದನ್ನು ಚರ್ಚಿಸಲು ಇಂದು ಸಚಿವ ಎಸ್. ಜೈಶಂಕರ್ ಅವರ ಭೇಟಿ ಮಾಡಲು ತಮಗೆ ಸಂತಸವಾಗಿದೆ. ವಿಶೇಷವಾಗಿ ಕಾರ್ಮಿಕರು, ಪರಿಸರ ಹಾಗೂ ಡಿಜಿಟಲ್ ವ್ಯಾಪಾರದ ಸಮಸ್ಯೆ ಪರಿಹರಿಸಲು, ನಾವು ಅದನ್ನು ಹೇಗೆ ಬಳಸಬಹುದು ಎಂಬ ಬಗ್ಗೆ ಚರ್ಚಿಸಲಾಯಿತು ಎಂದು ತೈ ಮಂಗಳವಾರ ಟ್ವಿಟರ್ ಮೂಲಕ ಹೇಳಿದ್ದಾರೆ.
ಇದು 2017 ರಲ್ಲಿ ಉಭಯ ದೇಶಗಳ ನಡುವೆ ಆರಂಭಗೊಂಡಿರುವ ಮೊದಲ ವ್ಯಾಪಾರ ನೀತಿ ವೇದಿಕೆಯಾಗಿದೆ.
ಭಾರತದ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹಲವು ದ್ವಿಪಕ್ಷೀಯ ವ್ಯಾಪಾರ ಸಮಸ್ಯೆಗಳ ಬಗ್ಗೆ ಚರ್ಚಿಸಲು, ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಒಪ್ಪಿಕೊಂಡಿದ್ದಾರೆ ಎಂದು ಅಮೆರಿಕಾ ವ್ಯಾಪಾರ ಪ್ರತಿನಿಧಿ ಕಚೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.