ಅಂತರರಾಷ್ಟ್ರೀಯ

ಕೋವಿಡ್ ದೃಢ; ಸತತ ಮೂರು ಗಂಟೆಗಳ ಕಾಲ ವಿಮಾನದ ಬಾತ್‍ರೂಮಿನಲ್ಲೇ ಕ್ವಾರಂಟೈನ್ ಆದ ಯುಎಸ್ ಮಹಿಳೆ

ಕೋವಿಡ್ ದೃಢ; ಸತತ ಮೂರು ಗಂಟೆಗಳ ಕಾಲ ವಿಮಾನದ ಬಾತ್‍ರೂಮಿನಲ್ಲೇ ಕ್ವಾರಂಟೈನ್ ಆದ ಯುಎಸ್ ಮಹಿಳೆ

ನ್ಯೂಯಾರ್ಕ್, ಡಿಸೆಂಬರ್ 31: ಸತತ ಮೂರು ಗಂಟೆಗಳ ಕಾಲ ಚಿಕಾಗೋದಿಂದ ಐಸ್‍ಲ್ಯಾಂಡ್‍ಗೆ ವಿಮಾನದಲ್ಲಿ ತೆರಳುತ್ತಿದ್ದ ಕೋವಿಡ್‍ಗೆ ತುತ್ತಾದ ಯುಎಸ್ ಮಹಿಳೆಯನ್ನು ವಿಮಾನದ ಬಾತ್ ರೂಮಿನಲ್ಲಿಯೇ ಕ್ವಾರಂಟೈನ್ ಮಾಡಲಾಗಿತ್ತು.

ಮಿಚಿಗನ್‍ನ ಶಿಕ್ಷಕಿ ಮಾರಿಸಾ ಫೋಟಿಯೋ ಕೋವಿಡ್‍ಗೆ ತುತ್ತಾಗಿದ್ದವರು. ಡಿಸೆಂಬರ್ 19ರಂದು ವಿಮಾನದಲ್ಲಿ ಪ್ರಯಾಣಿಸಿದ್ದ ಇವರಿಗೆ ಒಮದು ವರೆ ಗಂಟೆಗಳ ನಂತರ ತೀವ್ರ ಗಂಟಲು ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಬಾತ್ ರೂಮಿನಲ್ಲಿ ಪರೀಕ್ಷೆ ಕೈಗೊಂಡಾಗ ವರದಿ ನೆಗೆಟಿವ್ ಬಂದಿದೆ.

ತೀವ್ರ ಗಂಟಲು ನೋವು ಕಾಣಿಸಿಕೊಂಡಾಗ ನಾನೇ ಪರೀಕ್ಷೆಗೆ ಒಳಗಾದೆ. ಆಗ ವರದಿ ನೆಗೆಟಿವ್ ಬಂದಿತು ಎಂದು ಫೋಟಿಯೋ ಹೇಳಿದ್ದಾರೆ. ಇವರು ಎರಡು ವ್ಯಾಕ್ಸಿನ್ ಜೊತೆಗೆ ಬೂಸ್ಟರ್ ಕೂಡ ಪಡೆದುಕೊಂಡಿದ್ದರು.

ಈ ಬಗ್ಗೆ ಮಾತನಾಡಿದ ಫೋಟಿಯೋ, ನನ್ನ ಕೋವಿಡ್ ವರದಿ ನೆಗೆಟಿವ್ ಬಂದಾಗ ನನ್ನ ಜೊತೆ ಊಟ ಮಾಡಿದ ಕುಟುಂಬದ ಬಗ್ಗೆ ಹೆದರಿಕೊಂಡೆ. ನನ್ನ ಜೊತೆ ಪ್ರಯಾಣ ಬೆಳೆಸುತ್ತಿರುವ ಇತರೆ ಪ್ರಯಾಣಿಕರ ಬಗ್ಗೆ ಆತಂಕಗೊಂಡೆ. ಕೊನೆಗೆ ನನಗೆ ಭಯ ಶುರುವಾಯಿತು. ತದ ನಂತರ ಈ ಬಗ್ಗೆ ವಿಮಾನದ ಅಟೆಂಡೆಂಟ್ ಹತ್ತಿರ ಹೇಳಿಕೊಂಡು ಅಳಲು ಶುರುಮಾಡಿದಾಗ ನನ್ನನ್ನು ಅವರು ಸಮಾಧಾನ ಪಡಿಸಿದರು. ನನಗೆ ಪ್ರತ್ಯೇಕವಾದ ಸೀಟು ಕಾಯ್ದಿರಿಸಲು ನೋಡಿದರು. ಆದರೆ ಸಾಧ್ಯವಾಗದಿದ್ದಾಗ ವಿಮಾನದ ಬಾತ್ ರೂಮಿನಲ್ಲಿ ಇರಲು ನಿರ್ಧರಿಸಿದೆ. ತದ ನಂತರ ವಿಮಾನದ ಬಾತ್ ರೂಮಿನ ಮುಂದೆ ಸೇವೆಯಲ್ಲಿ ಇಲ್ಲ ಎಂದು ಬೋರ್ಡ್ ತೂಗು ಹಾಕಿದರು. ಅಲ್ಲಿಂದ ಸತತ ಮೂರು ಗಂಟೆಗಳ ಕಾಲ ವಿಮಾನದ ಬಾತ್ ರೂಮಿನಲ್ಲಿಯೇ ಉಳಿದಿದ್ದೆ ಎಂದು ಘಟನೆಯನ್ನು ವಿವರಿಸಿದರು.

ತದನಂತರ ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೆ ಒಲಗಾಗಿ 10 ದಿನಗಳ ಕಾಲ ಹೋಟೆಲ್‍ನಲ್ಲಿ ಕ್ವಾರಂಟೈನ್‍ನಲ್ಲಿದೆ. ಇದೀಗ ವೈದ್ಯರ ಉಪಚಾರ, ಸರಿಯಾದ ಸಮಯಕ್ಕೆ ಊಟ, ಔಷಧಿಗಳ ಕಾರಣದಿಂದ ಇದೀಗ ಹುಷಾರಾಗಿದ್ದೇನೆ. ಇದೆಲ್ಲವೂ ಸಾಧ್ಯವಾಗಿದ್ದು ವಿಮಾನದ ಅಟೆಂಡೆಂಟ್‍ಗಳಿಂದ ಹಾಗೂ ಐಸ್ ಲ್ಯಾಂಡಿನ ಜನರ ಸಹಾಯದಿಂದ. ಇಲ್ಲಿ ಎಲ್ಲರೂ ತುಂಬಾ ಕರುಣಾಮಯಿಗಳು ಎಂದು ಹೇಳಿದ್ದಾರೆ.

ಸುದ್ದಿ ಓದಿ