ಇನ್ನೂ 10 ಕೋಟಿ ಡೋಸ್ ಲಸಿಕೆ ಖರೀದಿಸಿದ ಅಮೆರಿಕಾ..!
ವಾಷಿಂಗ್ಟನ್, ಡಿ 12: ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ಕೊರೊನಾ ಸಾಂಕ್ರಾಮಿಕ ಸೃಷ್ಟಿಸಿರುವ ಭಯಾನಕ ಪರಿಸ್ಥಿತಿಯನ್ನು ಮತ್ತೆ ವಿವರಿಸಬೇಕಾಗಿಲ್ಲ. ಅಲ್ಲಿ ಕೊರೊನಾ ತೀವ್ರತೆ ಎಷ್ಟಿದೆಯೆಂದರೆ .ಇತ್ತೀಚಿಗೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲೂ ಇದು ಅತಿ ದೊಡ್ಡ ವಿಷಯವಾಗಿತ್ತು. ಇಂತಹ ತೀವ್ರತೆಯ ಕೊರೊನಾ ನಿಯಂತ್ರಿಸಲು ಅಮೆರಿಕಾ ಸರ್ಕಾರ ಮೊಡೆರ್ನಾ ಕಂಪನಿ ಅಭಿವೃದ್ದಿ ಪಡಿಸುತ್ತಿರುವ ಲಸಿಕೆಯ ಮೇಲೆ ವಿಶ್ವಾಸ ಇರಿಸಿದೆ.ಈ ಹಿಂದೆ 10 ಕೋಟಿ ಡೋಸ್ ಲಸಿಕೆಗಳನ್ನು ಖರೀದಿಸಿದ್ದ ಅಮೆರಿಕಾ, .. ಈಗ ಹೊಸದಾಗಿ ಇನ್ನೂ 10 ಕೋಟಿ ಡೋಸ್ ಲಸಿಕೆಗಳನ್ನು ಖರೀದಿಸಿದೆ. ಇದರಿಂದ ಒಟ್ಟು 20 ಕೋಟಿ ಡೋಸ್ ಕೊರೊನಾ ಲಸಿಕೆ ಖರೀದಿಸಿದಂತಾಗಿದೆ. ಹೆಚ್ಚುವರಿ ಪ್ರಮಾಣ ಲಸಿಕಾ ಡೋಸ್ ಗಳು ಮುಂದಿನ ವರ್ಷದ ಜೂನ್ ವೇಳೆಗೆ ಅಮೆರಿಕಾ ತಲುಪಿಸುವ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗಿದೆ.