ಅಂತರರಾಷ್ಟ್ರೀಯ

ಯುಎಸ್: ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಹೊಸ ಕೊರೊನಾ ರೂಲ್ಸ್​​​

ಯುಎಸ್: ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಹೊಸ ಕೊರೊನಾ ರೂಲ್ಸ್​​​

ವಾಷಿಂಗ್ಟನ್ : ಅ, 26 :  ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಬೈಡನ್​ ಸರ್ಕಾರ ಹೊಸ ಕೋವಿಡ್​​-19 ನಿಯಮಗಳನ್ನು ಬಿಡುಗಡೆ ಮಾಡಿದ್ದು, ಇವು ನವೆಂಬರ್​​8 ರಿಂದ ಜಾರಿಗೆ ಬರಲಿದೆ. 

ನವೆಂಬರ್ 8 ರಿಂದ ಅಮೆರಿಕಾಗೆ ಹೋಗಲು ಬಯಸುವವರು ಲಸಿಕೆಯನ್ನು ಹಾಕಿಸಿಕೊಂಡಿರಬೇಕು. ಅಲ್ಲದೇ ಬೋರ್ಡಿಂಗ್​ಗೂ ಮುನ್ನ ವ್ಯಾಕ್ಸಿನೇಷನ್ ರಿಪೋರ್ಟ್ ​ತೋರಿಸಬೇಕಾಗುತ್ತದೆ ಎಂದು ಯುಎಸ್​​ ಡಿಪಾರ್ಟ್‌ಮೆಂಟ್ ಆಫ್ ಸ್ಟೇಟ್ ಹೇಳಿದೆ.

ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ), ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್‌ಡಿಎ) ಅನುಮೋದಿತ ಅಥವಾ ಅಧಿಕೃತಗೊಳಿಸಿದ ಮತ್ತು ತುರ್ತು ಬಳಕೆಯ ಪಟ್ಟಿಯಲ್ಲಿ ಇರುವ ಲಸಿಕೆಗಳನ್ನು ಪ್ರಯಾಣಿಕರು ಹಾಕಿಸಿಕೊಂಡಿರಬೇಕು. ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮೋದಿತ ಫೈಜರ್, ಮಾಡರ್ನಾ, ಜಾನ್ಸನ್ & ಜಾನ್ಸನ್, ಅಸ್ಟ್ರಾಜೆನೆಕಾ, ಸಿನೋಫಾರ್ಮ್ ಮತ್ತು ಸಿನೋವಾಕ್ ಲಸಿಕೆಗಳನ್ನುಅಮೆರಿಕಾದಲ್ಲಿ ಹಾಕಲಾಗುತ್ತಿದೆ.

ಸಂಪೂರ್ಣವಾಗಿ ಲಸಿಕೆಯನ್ನು ಪಡೆದ ವಿಮಾನ ಪ್ರಯಾಣಿಕರು ವಿಮಾನ ಹತ್ತುವ ಮೊದಲೇ, ಮೂರು ದಿನದ ಹಿಂದೆ ಆರ್​​ಟಿ-ಪಿಸಿಆರ್​​ ಪರೀಕ್ಷೆ ಮಾಡಿಸಿರಬೇಕು. ಅಲ್ಲದೇ ಅದರ ನೆಗೆಟಿವ್​​ ವರದಿಯನ್ನು ತೋರಿಸಬೇಕಾಗುತ್ತದೆ.​ ಅಮೆರಿಕದಲ್ಲಿ 4.54 ಕೋಟಿ ಜನರಿಗೆ ಕೋವಿಡ್ ದೃಢಪಟ್ಟಿದ್ದು, ವೈರಸ್​ಗೆ 7.36 ಲಕ್ಷ ಮಂದಿ ಬಲಿಯಾಗಿದ್ದಾರೆ.

ಸುದ್ದಿ ಓದಿ