ಅಮೆರಿಕ: ಬ್ರಿಟ್‍ನ್‍ನಿಂದ ಆಗಮಿಸುವ ಪ್ರಯಾಣಿಕರಿಗೆ ಕೋವಿಡ್ -ನೆಗೆಟೀವ್ ವರದಿ ಕಡ್ಡಾಯ
ವಾಷಿಂಗ್ಟನ್, ಡಿಸೆಂಬರ್ 26: ಹೊಸ ಕೊರೋನವೈರಸ್ ರೂಪಾಂತರ ವಿರುದ್ಧ ಮುನ್ನೆಚ್ಚರಿಕೆ ಕ್ರಮವಾಗಿ ಬ್ರಿಟನ್‍ನಿಂದ
ಆಗಮಿಸುವ ಎಲ್ಲ ವಿಮಾನ ಪ್ರಯಾಣಿಕರಿಗೆ ಅಮೆರಿಕ, ಕೋವಿಡ್-ನಗೆಟೀವ್ ವರದಿಯನ್ನು ಕಡ್ಡಾಯಗೊಳಿಸಿದೆ.
ಪ್ರಯಾಣಿಕರು ನಿರ್ಗಮಿಸಿದ 72 ಗಂಟೆಗಳ ಒಳಗೆ ಪಿಸಿಆರ್ ಅಥವಾ ಆಂಟಿಜನ್ ಪರೀಕ್ಷೆಗೆ ಒಳಗಾಗಿ ನೆಗೆಟೀವ್ ವರದಿಯನ್ನು ಸಲ್ಲಿಸಬೇಕಾಗುತ್ತದೆ.
ಹೊಸ ಕೊರೋನಾವೈರಸ್ ರೂಪಾಂತರ ವೇಗವಾಗಿ ಹರಡುತ್ತಿರುವುದರಿಂದ ಅಮೆರಿಕ, ಅನೇಕ ದೇಶಗಳೊಂದಿಗೆ ಪ್ರಯಾಣ ನಿರ್ಬಂಧಗಳನ್ನು ಹೇರಿದೆ.
ಕೋವಿಡ್-19ನ ಹೊಸ ರೂಪಾಂತರ ಹಿನ್ನೆಲೆಯಲ್ಲಿ ನ್ಯೂಯಾರ್ಕ್ ನಗರ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಸಂಪರ್ಕತಡೆಯ ನಿಯಮಗಳನ್ನು ಜಾರಿಗೊಳಿಸಿದ ನಂತರ ಅಮೆರಿಕ ರೋಗ ನಿಯಂತ್ರಣಾ ಮತ್ತು ತಡೆ ಕೇಂದ್ರವು ಬ್ರಿಟನ್ ಪ್ರಯಾಣಿಕರಿಗೆ ಕಡ್ಡಾಯ ಪರೀಕ್ಷೆಯ ನಿರ್ಧಾರನ್ನು ತೆಗೆದುಕೊಂಡಿದೆ.