ಅಪ್ಘಾನಿಸ್ತಾನ ಕಂಧಾರ್ ಆತಂಕವಾದಿ ದಾಳಿ ಖಂಡಿಸಿದ ಯುಎನ್‌ಎಎಮ್‌ಎ
ಕಾಬೂಲ್,ಅ.16: ಅಫ್ಘಾನಿಸ್ತಾನದಲ್ಲಿ ಸಂಯುಕ್ತ ರಾಷ್ಟ್ರ ಸಹಾಯತ ಮಿಷನ್(ಯುಎನ್‌ಎಎಮ್‌ಎ)ದೇಶದ ದಕ್ಷಿಣ ಭಾಗದ ಕಂಧಾರ್‌ನ ಮಸೀದಿಯಲ್ಲಾದ ಭಯೋತ್ಪಾದನಾ ದಾಳಿಯನ್ನು ಖಂಡಿಸಿದೆ.
"ಅಫ್ಘಾನಿಸ್ತಾನದಲ್ಲಿ ಭಯೋತ್ಪಾದನೆ ಇನ್ನೂ ಜಾರಿಯಲ್ಲಿದೆ.ಕಂಧಾರ್‌ನ ಅತಿದೊಡ್ಡ ಶಿಯಾ ಮಸೀದಿಯಲ್ಲಿ ಶುಕ್ರವಾರದ ಜುಮ್ಮಾ ನಮಾಜ್ ವೇಳೆ ಆತ್ಮಹುತಿ ದಾಳಿಯಲ್ಲಿ ಸುಮಾರು 30 ಮಂದಿ ಮೃತಪಟ್ಟಿದ್ದು,ಹಲವರು ಗಂಭೀರ ಗಾಯಗೊಂಡಿದ್ದಾರೆ.ಸಂಯುಕ್ತ ರಾಷ್ಟ್ರ ಧಾರ್ಮಿಕ ಸ್ಥಳ ಹಾಗೂ ಬೋಧಕರನ್ನು ಗುರಿಯಾಗಿಸಿಕೊಂಡು
ಕ್ರೂರವಾಗಿ ದಾಳಿ ನಡೆಸಲಾಗಿದೆ.ಈ ಘಾತಕ ದಾಳಿಯಲ್ಲಿ ಸುಮಾರು ನಾಲ್ವರು ದಾಳಿಕೋರರು ಭಾಗಿಯಾಗಿರುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ.ಆದರೆ ಇಲ್ಲಿಯವರೆಗೆ ಯಾವುದೇ ಆತ್ಮಾಹುತಿದಾಳಿ ಸಮೂಹವಾಗಲೀ ಉಗ್ರ ಸಂಘಟನೆಯಾಗಲಿ ಇಲ್ಲಿಯವರೆಗೆ ಈ ಬಾಂಬ್ ಧಾಳಿಯ ಹೊಣೆ ಹೊತ್ತಿಲ್ಲ ಎಂದು ಟ್ವಿಟ್ಟರ್‌ನಲ್ಲಿ ಯುಎನ್‌ಎಎಮ್‌ಎ ಹೇಳಿದೆ.
ಘಟನೆ ಬಗ್ಗೆ ಪೂರ್ಣ ಮಾಹಿತಿ ಲಭ್ಯವಾಗಿಲ್ಲ.ಸ್ಥಳೀಯ ತಾಲಿಬಾನ್ ಅಧಿಕಾರಿಗಳು ಇಲ್ಲಿಯವರೆಗೆ ಘಟನೆಯಿಂದ ಪರಿಣಾಮಕ್ಕೊಳಪಟ್ಟ ಒಟ್ಟು ಜನರೆಷ್ಟು ಎಂಬುದನ್ನೂ ಸ್ಪಷ್ಟಪಡಿಸಿಲ್ಲ ಎಂದು ಯುಎನ್‌ಎಎಮ್‌ಎ ಹೇಳಿದೆ.