ದ್ವಿಚಕ್ರವಾಹನಗಳ ಕಳ್ಳನ ಬಂಧನ: 8 ಲಕ್ಷ ಮೌಲ್ಯದ 16 ಬೈಕಗಳ ವಶ
Two-wheeler thief arrested: 16 bikes worth Rs 8 lakh seized
ಲೋಕದರ್ಶನ ವರದಿ
ಬೆಳಗಾವಿ 05: ದ್ವಿಚಕ್ರವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಖದೀಮನೋರ್ವನನ್ನು ನಿಪ್ಪಾಣಿ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದು, ಬಂಧಿತನಿಂದ 8 ಲಕ್ಷ ಮೌಲ್ಯದ 16 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಳ್ಳತನ ಪ್ರಕರಣದಲ್ಲಿ ನಾಗೇಶ ತಾನಾಜಿ ಕೆಂಗಾರೆ (26) (ಸಾ: ಮಾನಕಾಪೂರ, ತಾ: ಚಿಕ್ಕೋಡಿ), ಈತನನ್ನು ಬಂಧಿಸಲಾಗಿದೆ. ದಿ. 30ರಂದು ಅಜೀತ ಶ್ರೀಧರ ಕೌಲವಕರ (ಸಾ : ಕೋಡ್ನಿ, ತಾ; ನಿಪ್ಪಾಣಿ) ಇವರು ಪೊಲೀಸ್ ಠಾಣೆಗೆ ಬಂದು ತಮ್ಮ ಮಾಯ ಹಿರೋ ಸ್ಟೇಂಡರ್ ಪ್ಲಸ್ ದ್ವಿಚಕ್ರವಾಹನ ನಂ. ಕೆಎ-23 ಇ ಡಬ್ಲ್ಯೂ-1398 ಇದರ ಅಂದಾಜು ಕಿಮ್ಮತ್ತು 35,000 ರೂಗಳು
ದಿ. 15/03/2026 ರಂದು ರಂದು ಕೋಡ್ನಿ ಗ್ರಾಮ ಹದ್ದಿಯಲ್ಲಿ ಕೋಡಿ-ಬೂದಿಹಾಳ ರಸ್ತೆಯ ಬದಿಯಲ್ಲಿ ನಿಲ್ಲಿಸಿ ಹಾಲಸಿದ್ದನಾಥ ಪ್ಯಾಕ್ಟರಿಯ ಹತ್ತಿರ ಕೃಷಿ ಮೇಳವನ್ನು ನೋಡುವುದಕ್ಕೆ ಹೋದಾಗ ಸದರಿ ಮೋಟಾರ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ನೀಡಿದ್ದರು. ದೂರನ್ನು ಸ್ವೀಕರಿಸಿಕೊಂಡ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 45/2026. ಕಲಂ 303(2) ಬಿಎನ್‌ಎಸ್-2023 ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ಆರ್.ಬಿ.ಬಸರಗಿ, ಚಿಕ್ಕೋಡಿ ಡಿಎಸ್‌ಪಿ ಗೋಪಾಲಕೃಷ್ಣ ಗೌಡರ, ಇವರುಗಳ ಮಾರ್ಗದರ್ಶನದಲ್ಲಿ ಹಾಗೂ ನಿಪ್ಪಾಣಿ ಸಿಪಿಐ ಬಿ.ಎಸ್.ತಳವಾರ, ಇವರ ನೇತೃತ್ವದಲ್ಲಿ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಶಿವರಾಜ್ ನಾಯಿಕವಾಡಿ ಇವರು ಹಾಗೂ ಠಾಣೆಯ ಸಿಬ್ಬಂದಿ ಜನರಾದ ಆರ್.ವೈ.ಮೇಲ್ಗಡೆ ಸಿಪಿಸಿ-3176, ಆರ್.ಬಿ.ಪಾಟೀಲ್ ಸಿಪಿಸಿ-3294, ಎಂ.ಎಫ್.ನದಾಫ್ ಸಿಪಿಸಿ-3876 ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆ ಇವರನ್ನ ಒಳಗೊಂಡ ವಿಶೇಷ ತಂಡ ರಚನೆ ಮಾಡಿದ್ದರು.
ಸದರಿ ತಂಡವು ದಿ. 4ರಂದು ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯ ಕೊಡ್ಡಿ-ಗಾಯಕನವಾಡಿ ರಸ್ತೆಯ ಮೇಲೆ ವಾಹನಗಳ ತಪಾಸಣೆ ಮಾಡುತ್ತಿದ್ದಾಗ ಆರೋಪಿತನಾದ ನಾಗೇಶ ತಾನಾಜಿ ಕೆಂಗಾರೆ (26) (ಸಾ: ಮಾನಕಾಪೂರ, ತಾ: ಚಿಕ್ಕೋಡಿ) ಇವನು ಕೊಡ್ನಿ ಕಡೆಯಿಂದ ಮಾನಕಾಪೂರಕ್ಕೆ ನಂಬರವನ್ನು ಹಾಕಿರದ ದ್ವಿಚಕ್ರ ವಾಹನ ಹೀರೋ ಕಂಪನಿಯ ಪ್ಲೆಂಡರ್ ಪ್ಲಸ್ ಮೋಟಾರ್ ತೆಗೆದು ಕೊಂಡು ಹೋಗುತ್ತಿದ್ದಾಗ ವಿಚಾರಣೆ ಮಾಡಿದಾಗ ಸದರಿಯವನು ಸದರಿಯವನಿಗೆ ವಿಚಾರಿಸಿದಾಗ ತಾನು ಸದರಿ ಮೋಟಾರ ಸೈಕಲನ್ನು ಸುಮಾರು 20 ದಿನಗಳ ಹಿಂದೆ ಕೋಡ್ನಿ ಗ್ರಾಮ ಹದ್ದಿಯಲ್ಲಿ ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಒಪ್ಪಿಕೊಂಡಿರುತ್ತಾನೆ.
ಸದರಿ ಆರೋಪಿಯನ್ನು ನಮ್ಮ ವಶಕ್ಕೆ ತೆಗೆದುಕೊಂಡು ದಸ್ತಗಿರಿ ಮಾಡಿ ತನಿಖೆಯನ್ನು ಮುಂದುವರೆಸಿದ್ದಾರೆ. ಆರೋಪಿಯಿಂದ 8,00,000 ಮೌಲ್ಯದ ಒಟ್ಟು 16 ವಿವಿಧ ಕಂಪನಿಯ ಮೋಟಾರ ಸೈಕಲಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಚರಣೆಯ ಬಗ್ಗೆ ಬೆಳಗಾವಿ ಎಸ್.ಪಿ ಕೆ. ರಾಮರಾಜನ್, ಹೆಚ್ಚುವರಿ ಎಸ್ ಪಿ ಆರ್ ಬಿ ಬಸರಗಿ, ಅವರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 