ಕೆನಡಾದಲ್ಲಿ ಎರಡು ಓಮಿಕ್ರಾನ್ ಪ್ರಕರಣಗಳು ದೃಢ
ಮಾಸ್ಕೋ, ನವೆಂಬರ್ 29: ಕೆನಡಾದಲ್ಲಿ ಕೊರೊನಾ ವೈರಸ್ ಹೊಸ ರೂಪಾಂತರಿ ಒಮಿಕ್ರಾನ್ ನ ಮೊದಲ ಎರಡು ಪ್ರಕರಣಗಳು ದೃಢಪಟ್ಟಿವೆ ಎಂದು ಒಂಟಾರಿಯೊ ಸರ್ಕಾರ ಹೇಳಿದೆ.
ಒಂಟಾರಿಯೊ ಪ್ರಾಂತ್ಯ ಒಟ್ಟಾವಾದಲ್ಲಿ ಓಮಿಕ್ರಾನ್ ರೂಪಾಂತರಿಯ ಎರಡು ಪ್ರಕರಣಗಳು ದೃಢಪಟಿವೆ. ಈ ಎರಡೂ ಪ್ರಕರಣಗಳು ಇತ್ತೀಚಿನ ನೈಜೀರಿಯಾಗೆ ತೆರಳಿದ್ದ ವ್ಯಕ್ತಿಗಳಲ್ಲಿ ವರದಿಯಾಗಿದೆ. ಪ್ರಕರಣಗಳು ಹಾಗೂ ಸಂಪರ್ಕ ನಿರ್ವಹಣೆಯನ್ನು ಒಟ್ಟಾವಾ ಸಾರ್ವಜನಿಕ ಆರೋಗ್ಯ ಇಲಾಖೆ ನಡೆಸುತ್ತಿದೆ. ಸೋಂಕಿತ ರೋಗಿಗಳು ಪ್ರತ್ಯೇಕವಾಗಿರಿಸಲಾಗಿದೆ ಎಂದು ಉಪ ಪ್ರಧಾನ ಮಂತ್ರಿ ಹಾಗೂ ಆರೋಗ್ಯ ಸಚಿವ ಕ್ರಿಸ್ಟಿನ್ ಎಲಿಯಟ್, ಆರೋಗ್ಯ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಕೀರನ್ ಮೂರ್ ಭಾನುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಮಾನ ನಿಲ್ದಾಣಗಳಲ್ಲಿ ಎಲ್ಲಾ ಪ್ರಯಾಣಿಕರನ್ನು ಕೋವಿಡ್ 19 ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ದಕ್ಷಿಣ ಆಫ್ರಿಕಾದಿಂದ ಕೆಲವು ದೇಶಗಳಿಗೆ ಪ್ರಯಾಣಿಸುತ್ತಿದ್ದ ವಿದೇಶಿ ಪ್ರಜೆಗಳ ಮೇಲೆ ಕೆನಡಾ ಶುಕ್ರವಾರದಿಂದ ನಿಷೇಧ ಜಾರಿಗೊಳಿಸಿದೆ.
"ಒಮಿಕ್ರಾನ್ ರೂಪಾಂತರಿ ವಿರುದ್ಧದ ಅತ್ಯುತ್ತಮ ರಕ್ಷಣೆ ವ್ಯವಸ್ಥೆಯನ್ನು ನಮ್ಮ ಗಡಿಯಲ್ಲಿ ಜಾರಿಗೊಳಿಸಲಾಗಿದೆ ಎಂದು ಒಂಟಾರಿಯೊ ಸರ್ಕಾರ ಒತ್ತಿಹೇಳಿದೆ.
ಹೊಸ ಓಮಿಕ್ರಾನ್ ರೂಪಾಂತರಿ ಡೆಲ್ಟಾಕ್ಕಿಂತ ಹೆಚ್ಚು ಅಪಾಯಕಾರಿ ಎಂದು ಹೇಳಲು ಇನ್ನೂ ಸಾಕಷ್ಟು ದತ್ತಾಂಶಗಳು ಲಭ್ಯವಿಲ್ಲ ಅಸ್ತಿತ್ವದಲ್ಲಿರುವ ಲಸಿಕೆಗಳು ಪರಿಣಾಮಕಾರಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಭಾನುವಾರ ಹೇಳಿದೆ.
WHO ಹೊಸ ದಕ್ಷಿಣ ಆಫ್ರಿಕಾದ ತಳಿಯನ್ನು ಆತಂಕಕಾರಿ ಒಂದು ಎಂದು ಶುಕ್ರವಾರ ಗುರುತಿಸಿದೆ, ಹೊಸ ರೂಪಾಂತರಿ ಪ್ರಕರಣಗಳು ಈಗಾಗಲೇ ಅನೇಕ ದೇಶಗಳಲ್ಲಿ ದೃಢಪಟ್ಟಿವೆ. ಹೊಸ ತಳಿಯ ಹರಡುವಿಕೆ ತಡೆಗಟ್ಟುವ ಸಲುವಾಗಿ ದಕ್ಷಿಣ ಆಫ್ರಿಕಾದ ರಾಷ್ಟ್ರಗಳೊಂದಿಗೆ ಪ್ರಯಾಣ ಸ್ಥಗಿತಗೊಳಿಸಲು ಸರ್ಕಾರಗಳು ಧಾವಿಸಿವೆ.