ಕ್ಷಯ ಸಂಪೂರ್ಣ ವಾಸಿಯಾಗುವ ರೋಗ: ಡಾ. ಚಿತ್ತರಗಿ
ಸವದತ್ತಿ 25: ಕ್ಷಯ ರೋಗವು ಸಂಪೂರ್ಣ ವಾಸಿಯಾಗುವ ರೋಗವಾಗಿದ್ದು, ಕೇವಲ 6 ರಿಂದ 9 ತಿಂಗಳ ಕಾಲ ಔಷಧೋಪಚಾರವನ್ನು ಪಡೆದುಕೊಳ್ಳುವ ಮೂಲಕ ಕ್ಷಯರೋಗದಿಂದ ಮುಕ್ತಿಯನ್ನು ಹೊಂದಬಹುದಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಮಹೇಶ ಚಿತ್ತರಗಿ ಹೇಳಿದರು.
ಸ್ಥಳೀಯ ಸ್ವಾಮಿ ವಿವೇಕಾನಂದ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೈಕೊಬ್ಯಾಕ್ಟೀರಿಯ ಟ್ಯುಬರ್ಕ್ಲೋಸಿಸ್ ಎಂಬ ಸೂಕ್ಷ್ಮ ಕ್ರಿಮಿಯಿಂದ ಬರುವ ಕ್ಷಯರೋಗವು ಮಾನವನ ದೇಹದ ವಿವಿಧ ಭಾಗಗಳಿಗೆ ಬರುವ ಸಾಧ್ಯತೆಗಳಿದ್ದು, ಮುನ್ನೆಚರಿಕೆ ಕ್ರಮ ಅತ್ಯವಶ್ಯ ಎಂದರು. ಕ್ಷಯ ರೋಗಕ್ಕೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ತೀವ್ರ ಪ್ರಮಾಣದ ಕೆಮ್ಮು, ಸಂಜೆ ವೇಳೆ ಪದೆ ಪದೆ ಜ್ವರ ಕಾಣಿಸುತ್ತಿದ್ದರೆ ಕೂಡಲೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕೆಂದರು. ಕ್ಷಯರೋಗವನ್ನು ಸಂಪೂರ್ಣವಾಗಿ ಹೊಡೆದೊಡಿಸಬೇಕಾದರೆ ಪ್ರತಿಯೊಬ್ಬರ ಸಹಕಾರ ಮುಖ್ಯ ಎಂದರು.
ಡಾ.ಗೀತಾ ಸೂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸ್ಥಳೀಯ ತಜ್ಞವೈದ್ಯರಾದ ಡಾ.ವಿಜಯ ನಾವದಗಿ ಮಾತನಾಡಿ, ಕ್ಷಯರೋಗವು ದೇಶದ ಆರ್ಥಿಕತೆ ಹಾಗೂ ಸಾಮಾಜಿಕ ಸ್ಥಿತಿಗತಿಗಳ ಮೇಲೆ ಸಾಕಷ್ಟು ದುಸ್ಪ್ಪರಿಣಾಮ ಬಿರುತ್ತಿದ್ದು, ನಿರ್ಲಕ್ಷ ಮಾಡದೆ ರೋಗದ ಲಕ್ಷಣಗಳು ಕಂಡು ಬಂದ ಕೂಡಲೆ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕೆಂದರು.
ಡಾ.ನಯನಾ ಭಸ್ಮೆ ಮಾತನಾಡಿ ಕ್ಷಯರೋಗವು ಒಬ್ಬರಿಂದ ಇನ್ನೊಬ್ಬರಿಗೆ ಅತಿ ಬೇಗ ಹರಡುವ ರೋಗವಾಗಿದ್ದು, ರೋಗದ ಕುರಿತು ಜಾಗೃತೆ ಅವಶ್ಯ ಎಂದರು.
ಪ್ರಾಚಾರ್ಯ ಮೌನೇಶ ಅರ್ಕಸಾಲಿ ಅಧ್ಯಕ್ಷತೆವಹಿಸಿದ್ದರು.
ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ಸರಕಾರಿ ಮತ್ತು ಖಾಸಗಿ ವೈದ್ಯರನ್ನು ಹಾಗೂ ಸಿಬ್ಬಂದಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಡಾ.ಹೇಮಂತ ಭಸ್ಮೆ, ಡಾ.ರಮೇಶ ದಾನಗೌಡ, ಡಾ.ಕವಿತಾ, ಆರತಿ ಹಳ್ಳಿಕೇರಿ, ಕಿರಣ ಕಟ್ಟಿಮನಿ, ಎಸ್.ಎಸ್.ಹಿರೇಮಠ, ಸುಮಿತ್ರಾ ಪೂಜಾರ, ರೇಣುಕಾ ಉಪ್ಪಾರ, ನಿರಂಜನ ಬಡಿಗೇರ, ಅಶೋಕ ಮುರಗೋಡ, ಮುರಗೇಶ ಕರ್ಜಗಿಮಠ, ಇತರರು ಉಪಸ್ಥಿತರಿದ್ದರು
ಕಾಲೇಜಿನ ಕನ್ನಡ ಉಪನ್ಯಾಸಕರಾದ ಬಿ.ವೈ.ಹೊಸೂರ ಸ್ವಾಗತಿಸಿದರು. ಎಸ್.ಐ.ಡೋನಿ ನಿರೂಪಿಸಿದರು. ಎಮ್.ವಿ.ಹಟ್ಟಿ ವಂದಿಸಿದರು.