ಅಂತರರಾಷ್ಟ್ರೀಯ

ಟ್ರಂಪ್ ವಕೀಲ ರೂಡಿ ಗಿಯುಲಿಯಾನಿಗೂ ತಗುಲಿದ ಕೊರೋನ ಸೋಂಕು

ಟ್ರಂಪ್ ವಕೀಲ ರೂಡಿ ಗಿಯುಲಿಯಾನಿಗೂ ತಗುಲಿದ  ಕೊರೋನ ಸೋಂಕು

ವಾಷಿಂಗ್ಟನ್, ಡಿಸೆಂಬರ್ 7: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವೈಯಕ್ತಿಕ ವಕೀಲ ರೂಡಿ ಗಿಯುಲಿಯಾನಿ 76, ಕರೋನ ಸೋಂಕಿಗೆ ತುತ್ತಾಗಿದ್ದಾರೆಎಂದು ಅಧ್ಯಕ್ಷ  ಡೋನಾಲ್ಡ್    ಟ್ರಂಪ್ ಪ್ರಕಟಿಸಿದ್ದಾರೆ.

ಈ ಕುರಿತು ಮಾಡಿದ ಟ್ರಂಪ್ ರೂಡಿ ಗಿಯುಲಿಯಾನಿ, ಇತಿಹಾಸದಲ್ಲಿ ಅತ್ಯಂತ ಶ್ರೇಷ್ಠ ಮೇಯರ್ ಮತ್ತು ಅಮೆರಿಕದ  ಇತಿಹಾಸದಲ್ಲಿ ಅತ್ಯಂತ ಭ್ರಷ್ಟ ಚುನಾವಣೆಯನ್ನು (ಇಲ್ಲಿಯವರೆಗೆ!) ಬಹಿರಂಗಪಡಿಸುವಲ್ಲಿ ದಣಿವರಿಯಿಲ್ಲದೆ ಕೆಲಸ ಮಾಡಿದ್ದಾರೆ ಎಂದು ಗುಣಗಾನ ಮಾಡಿದ್ದಾರೆ. 

 ಶೀಘ್ರದಲ್ಲೇ ಅವರ ಆರೋಗ್ಯ ಚೇತರಿಸಿಕೊಳ್ಳಲಿ  ಎಂದೂ  ಹಾರೈಸಿದ್ದಾರೆ. ಆದರೂ " ಗಿಯುಲಿಯಾನಿ ಕೊರೋನ ಸೋಂಕಿನ ಬಗ್ಗೆ ಯಾವುದೇ   ಪ್ರಕಟಣೆ ನೀಡಿಲ್ಲ. ಗಿಯುಲಿಯಾನಿ ಅವರ ಪುತ್ರ ಆಂಡ್ರ್ಯೂ ಅವರು ನವೆಂಬರ್ 20 ರಂದು ತಂದೆ ಕೊರೋನ ಸೋಂಕಿಗೆ  ಒಳಗಾಗಿ ನಂತರ ಸ್ವಯಂ ಕ್ವಾರಂಟೈನ್ ಗೆ  ಒಳಗಾಗಿದ್ದರೆಎಂದು ಟ್ವೀಟ್ ಮಾಡಿದ್ದಾರೆ.

ಹಲವು ರಾಜ್ಯಗಳಲ್ಲಿನ ಅಧ್ಯಕ್ಷೀಯ ಚುನಾವಣೆಯ ವಂಚನೆ ವಿರುದ್ದ ಟ್ರಂಪ್ ಹೂಡಿರುವ ದಾವೆ, ವಿಚಾರಣೆಯನ್ನು  ಗಿಯುಲಿಯಾನಿ ಮುನ್ನಡೆಸುತ್ತಿದ್ದಾರೆ. 

ಸುದ್ದಿ ಓದಿ