ಕೊರೊನಾಸೋಂಕು, ಆರ್ಥಿಕ ಪರಿಹಾರ ಮಸೂದೆಗೆ ಟ್ರಂಪ್ ಅಂಕಿತ
ವಾಷಿಂಗ್ಟನ್, ಮಾರ್ಚ್ 19, ಉಚಿತ ಕರೋನಾ ಚಿಕಿತ್ಸೆ, ಕಡಿಮೆ ಆದಾಯದ ಜನರಿಗೆ ಆಹಾರ ಖಾತ್ರಿ ಒದಗಿಸುವ, ಕಾಂಗ್ರೆಸ್ ಅಂಗೀಕರಿಸಿದ ಬಹುಕೋಟಿ ಡಾಲರ್ ಕೊರೊನಾ ಆರ್ಥಿಕ ಪರಿಹಾರ ಮಸೂದೆ, ಕಾಯಿದೆಯಾಗಿ ಜಾರಿಗೆ ಬರಲು ಅನುವಾಗುವಂತೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ. ಬಡ ಕುಟುಂಬಗಳಿಗೆ ನೆರವಾಗಲು ಈ ಮಸೂದೆ ಸಹಾಯವಾಗಲಿದೆ ಎಂದು ನಂತರ ಟ್ರಂಪ್ ಹೇಳಿದ್ದಾರೆ. ಈ ಕಾಯಿದೆಯು ತುರ್ತು ಪೂರಕ ವಿನಿಯೋಗ ಮತ್ತು ಕಾನೂನಿನ ಇತರ ಬದಲಾವಣೆಗೆ ಅವಕಾಶ ಮಾಡಿಕೊಡಲಿದೆ ಎಂದು ಶ್ವೇತಭವನ ಉಲ್ಲೇಖಿಸಿದಂತೆ ಟ್ರಂಪ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಮಸೂದೆಯು ಕೋವಿಡ್ ಸೋಂಕಿನ ಉಚಿತ ಪರೀಕ್ಷೆಗೆ ಸಹಾಯ ಮಾಡಲಿದೆ , ತುರ್ತು ಪಾವತಿಸಿದ ರಜೆ , ಮೇಲಾಗಿ ಕಡಿಮೆ ಆದಾಯದ ಕುಟುಂಬಗಳಿಗೆ ಒಂದು ಬಿಲಿಯನ್ ಆಹಾರ ಸಹಾಯವನ್ನು ಖಾತ್ರಿಗೊಳಿಸುವ ಮತ್ತು ನಿರುದ್ಯೋಗ ವಿಮೆಗೆ ಹಣಕಾಸು ಸೌಲಭ್ಯ ಒದಗಿಸಲಿದೆ ಎಂದು ಅವರು ಹೇಳಿದರು. ಇದೇ 11 ರಂದು ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ -19 ಸಾಂಕ್ರಾಮಿಕ ರೋಗ ಎಂದು ಘೋಷಿಸಿತ್ತು . ವಿಶ್ವಾದ್ಯಂತ 200,000 ಕ್ಕೂ ಹೆಚ್ಚು ಜನರು ಕರೋನವೈರಸ್ ಸೋಂಕಿಗೆ ಒಳಗಾಗಿದ್ದು, 8,700 ಕ್ಕೂ ಹೆಚ್ಚು ಸಾವಿನ ಪ್ರಕರಣಗಳು ವರದಿಯಾಗಿದೆ.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 