ಒಕ್ಲಹೋಮದಲ್ಲಿ ಟ್ರಂಪ್ ಪ್ರಚಾರ ಸಭೆ ಪುನರಾರಂಭ
ವಾಷಿಂಗ್ಟನ್, ಜೂನ್ 11, ಅಮೆರಿಕದಲ್ಲಿ ಕರೋನ ಸಂಕಷ್ಟದ ನಡುವೆಯೂ ಅಧ್ಯಕ್ಷೀಯ ಚುನಾವಣೆ ಕಾವು ಮತ್ತೆ ಬಿರುಸುಗೊಳ್ಳುತ್ತಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದೇ 19 ರಂದು ಒಕ್ಲಹೋಮದಲ್ಲಿ ಪ್ರಚಾರ ಸಮಾವೇಶ ಪುನರಾರಂಭಿಸುವುದಾಗಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಲಹೋಮದಲ್ಲಿ ಮೊದಲ ಚುನಾವಣೆ ಸಭೆ ಆರಂಭವಾಗಲಿದೆ ಎಂದು ಟ್ರಂಪ್ ಬುಧವಾರ ಶ್ವೇತಭವನದಲ್ಲಿ ಹೇಳಿದರು. ನಂತರ ಫ್ಲೋರಿಡಾ, ಅರಿ ಜೋನ ಮತ್ತು ಉತ್ತರ ಕೆರೊಲಿನಾದಲ್ಲಿ ಚುನಾವಣಾ ಸಭೆಗಳು ನಿರಂತರವಾಗಿ ನಡೆಸುವುದಾಗಿ ಹೇಳಿದ್ದಾರೆ. ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶವನ್ನು ಉತ್ತರ ಕೆರೊಲಿನಾದಿಂದ ಸ್ಥಳಾಂತರಿಸಲಾಗುವುದು ಮತ್ತು ಹೊಸ ಸ್ಥಳದ ಕುರಿತು ಶೀಘ್ರದಲ್ಲೇ ಪ್ರಕಟಣೆ ನೀಡಲಾಗುವುದು ಎಂದರು. ಕರೋನ ಕಾರಣದಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮಾರ್ಗಸೂಚಿಗಳ ಕುರಿತು ರಾಜ್ಯದ ರಾಜ್ಯಪಾಲರೊಂದಿಗಿನ ವಿವಾದದಿಂದಾಗಿ ಈ ಕಾರ್ಯಕ್ರಮವನ್ನು ಉತ್ತರ ಕೆರೊಲಿನಾದಿಂದ ಸ್ಥಳಾಂತರಿಸಲು ಅಧ್ಯಕ್ಷರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ 