ಅಂತರರಾಷ್ಟ್ರೀಯ

ಜಾರ್ಜಿಯಾದಲ್ಲಿ ಮತ ಎಣಿಕೆ ನಿಲ್ಲಿಸುವಂತೆ ಕೋರ್ಟ್ ಕದ ತಟ್ಟಿದ ಟ್ರಂಪ್

ಜಾರ್ಜಿಯಾದಲ್ಲಿ ಮತ ಎಣಿಕೆ ನಿಲ್ಲಿಸುವಂತೆ  ಕೋರ್ಟ್ ಕದ ತಟ್ಟಿದ  ಟ್ರಂಪ್

ವಾಷಿಂಗ್ಟನ್, ನವೆಂಬರ್ 5: ಅಧ್ಯಕ್ಷೀಯ ಚುನಾವಣೆಯ ಮತಎಣಿಕೆ  ಕಾರ್ಯ ನಿಲ್ಲಿಸಬೇಕು ಎಂದು  ಟ್ರಂಪ್ ಪ್ರಚಾರ  ತಂಡ  ಜಾರ್ಜಿಯಾ ಕೋರ್ಟ್ ನಲ್ಲಿ ತಕರಾರು ದಾವೆಹೂಡಿದೆ  ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಹಿಂದಿನ ಬುಧವಾರ, ಟ್ರಂಪ್ ಅಭಿಯಾನವು ಮತ  ಎಣಿಕೆ ನಿಲ್ಲಿಸುವ ಸಲುವಾಗಿ ಮಿಚಿಗನ್ ಮತ್ತು ಪೆನ್ಸಿಲ್ವೇನಿಯಾದ ಪ್ರಮುಖ ರಾಜ್ಯಗಳಲ್ಲಿ ಇದೇ ರೀತಿಯ ಮೊಕದ್ದಮೆಗಳನ್ನು ಹೂಡಿರುವ ಕಾರಣ ಫಲಿತಾಂಶ  ಪ್ರಕಟ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ . 

ಟ್ರಂಪ್ ಅಭಿಯಾನವು ತನ್ನ ವೀಕ್ಷಕರಿಗೆ ಮತದಾನದಲ್ಲಿ ಕಾನೂನುಬಾಹಿರವಾಗಿ ಪ್ರವೇಶ ನಿರಾಕರಿಸಲಾಗಿದೆ ಮತ್ತು ಮತದಾನ ಅವಧಿ  ಮುಗಿದ ನಂತರವೂ ಅವಕಾಶ   ನೀಡಲಾಗಿದೆ ಎಂದು ದೂರಲಾಗಿದೆ. ಈ  ನಡುವೆ , ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಅಧ್ಯಕ್ಷೀಯ   ಚುನಾವಣೆಯಲ್ಲಿ ಗೆಲುವಿನ ದಾರಿಯಲ್ಲಿ ಸಾಗಿದ್ದಾರೆ ಎಂದು ಅನೇಕ ವಾಹಿನಿಗಳ ಸಮೀಕ್ಷೆಗಳು  ಭವಿಷ್ಯ ಹೇಳಿದೆ. 


ಸುದ್ದಿ ಓದಿ