ಕ್ರೀಡೆ

ಫುಟ್ಬಾಲ್ ದೈತ್ಯ ಆಟಗಾರ ಪೀಲೆ ನಿಧನಕ್ಕೆ ಶ್ರದ್ಧಾಂಜಲಿ

ಫುಟ್ಬಾಲ್ ದೈತ್ಯ ಆಟಗಾರ ಪೀಲೆ ನಿಧನಕ್ಕೆ ಶ್ರದ್ಧಾಂಜಲಿ

ಗದಗ 1: ಬ್ರೆಜಿಲ್ ದೇಶದ ಮೀನಾಸ್‌ನಲ್ಲಿ 23.10.1940 ರಲ್ಲಿ ಜನಿಸಿದ 5 ಅಡಿ 8 ಫೂಟ್ ಎತ್ತರದ ಪೀಲೆ ಅವರ ಜೀವನ ಬಾಲ್ಯದಲ್ಲಿ ಬೂಟ್ ಪಾಲಿಶ್ ಮಾಡಿ ಜೀವನ ಸಾಗಿಸಿ ಬಡತನದ ಬೇಗೆಯಲ್ಲಿ ಬೆಂದು ಜೀವನ ಸಾಗಿಸುತ್ತಿದ್ದ ಪೀಲೆ ಅವರ ತಂದೆಯವರು ಆಸ್ಪತ್ರೆಯಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಪೀಲೆ ಅವರು ತಂದೆಯ ಆಸೆಯಂತೆ ಫುಟ್ಬಾಲ್ ಆಟಗಾರನಾಗಿ ಬೆಳೆಯಬೇಕೆಂಬ ಹಂಬಲದಿಂದ ತಮ್ಮ ಫುಟ್ಬಾಲ್ ಜೀವನವನ್ನು ಪ್ರಾರಂಭಿಸಿದರು. ಫುಟ್ಬಾಲ್ ದಂತಕಥೆ ಬ್ರೆಜಿಲ್‌ನಲ್ಲಿ ಅರಳಿದ ಬ್ಲ್ಯಾಕ್ ಪರ್ಲ್‌ ಪೀಲೆ ಅವರು 97 ಅಂತರಾಷ್ಟ್ರೀಯ ಗೋಲುಗಳ ಅಭಿಮಾನ ಗಿಟ್ಟಿಸಿಕೊಂಡಿದ್ದರು. ಬ್ರೆಜಿಲ್ ಪರವಾಗಿ ಮೂರು ಬಾರಿ ವಿಶ್ವಕಪ್ ಗೆದ್ದ ಪೀಲೆ 1280 ಗೋಲು ಬಾರಿಸಿದ ಕೀರ್ತಿ ಪೀಲೆ ಅವರದ್ದು. ಜರ್ಸಿ ನಂಬರ್ 10 ರಲ್ಲಿ ಮಿಂಚಿದ ಸನ್ 2000 ನೇ ಇಸ್ವಿಯಲ್ಲಿ ವರ್ಲ್ಡ್‌ ಪ್ಲೇಯರ್ ಆಫ್ ಸೆಂಚುರಿ ಅಂತ ಕರೆಸಿಕೊಂಡರು. ತದನಂತರ ಪೀಲೆ ಅವರಿಗೆ ಬ್ರೆಜಿಲ್ ದೇಶ ರಾಷ್ಟ್ರೀಯ ನಿಧಿ ಅಂತ ಘೋಷಣೆ ಮಾಡಿತು. ಇಂತ ದೈತ್ಯ ಫುಟ್ಬಾಲ್ ಆಟಗಾರರು ಯುವ ಪೀಳಿಗೆಗೆ ಮಾದರಿಯಾಗಿದ್ದರು. ಫುಟ್ಬಾಲ್ ಆಟಗಾರರಿಗೆ ಉತ್ತೇಜನ ನೀಡುವ ಸಲುವಾಗಿ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡಿದ್ದರು.ಇಂತ ಆಟಗಾರರು ತಮ್ಮ 82ನೇ ವಯಸ್ಸಿನಲ್ಲಿ ಡಿ.29ರಂದು ಇವರ ನಿಧನದ ಸುದ್ದಿ ಕೇಳಿ ಫುಟ್ಬಾಲ್ ಪ್ರೇಮಿಗಳಿಗೆ ಬಹಳ ಅಘಾತವಾಯಿತು. ಇಂಥ ದೈತ್ಯ ಆಟಗಾರರಿಗೆ ಶ್ರದ್ಧಾಂಜಲಿ ಮೂಲಕ ಕರ್ನಾಟಕ ಸ್ಪೋರ್ಟ್ಸ್‌ ಆ್ಯಂಡ್ ಎಜುಕೇಶನ್ ಅಕಾಡೆಮಿ ಗದಗ, ವತಿಯಿಂದ ಫುಟ್ಬಾಲ್ ಟರ್ಫ್‌ ಗ್ರೌಂಡ್‌ನಲ್ಲಿ ಎಲ್ಲ ಫುಟ್ಬಾಲ್ ಆಟಗಾರರು ಹಾಗೂ ಫುಟ್ಬಾಲ್ ಪ್ರೇಮಿಗಳು ಸೇರಿ ಪೀಲೆ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು 2 ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.                       




ಸುದ್ದಿ ಓದಿ