ಅಂತರರಾಷ್ಟ್ರೀಯ

ಇಂದು ವಿಶ್ವಸಂಸ್ಥೆಯ ದಿನ

ಇಂದು ವಿಶ್ವಸಂಸ್ಥೆಯ ದಿನ

ವಿಶ್ವಸಂಸ್ಥೆ, ಅ 24: ಪ್ರತಿ ವರ್ಷ ಅಕ್ಟೋಬರ್ 24 ರಂದು  ವಿಶ್ವಸಂಸ್ಥೆ   ದಿನ  ಆಚರಿಸಲಾಗುತ್ತದೆ.  ಜೊತೆಗೆ   ಈ  ದಿನ     ಸಂಸ್ಥೆಯ    ಮಹತ್ವ,  ಅದು ಹೇಗೆ ರೂಪುಗೊಂಡಿತು ಎಂಬಿತ್ಯಾದಿ  ವಿಚಾರಗಳನ್ನು ನೆನಪಿಸಿ,    ಈ  ದಿನವನ್ನು    ಎಲ್ಲಾ ದೇಶಗಳು  ಒಗ್ಗೂಡಿ     ಆಚರಿಸುವ  ಮೂಲಕ   ಭವಿಷ್ಯದ  ಪೀಳಿಗೆಗೆ  ಸಂದೇಶ  ರವಾನಿಸಲಾಗುತ್ತದೆ.   1945  ಅಕ್ಟೋಬರ್‌  24   ವಿಶ್ವಸಂಸ್ಥೆ  ಅಸ್ತಿತ್ವಕ್ಕೆ   ಬಂದ    ಸಂದರ್ಭವಾಗಿ  ಫ್ರತಿ  ವರ್ಷ  ಈ  ದಿನವನ್ನು  ವಿಶ್ವಸಂಸ್ಥೆಯ ವಾರ್ಷಿಕೋತ್ಸವ (ವಿಶ್ವಸಂಸ್ಥೆ) ದಿನವಾಗಿ ಆಚರಿಸಲಾಗುತ್ತದೆ.

'ಯುನೈಟೆಡ್ ನೇಷನ್ಸ್' ಎಂಬ ಹೆಸರನ್ನು    ಅಮೆರಿಕಾ     ಮಾಜಿ ಅಧ್ಯಕ್ಷ ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್  ಮೊದಲು   ಬಳಸಿದ್ದರು.

ವಿಶ್ವಸಂಸ್ಥೆಯಲ್ಲಿ ಆರು  ಪ್ರಮುಖ ವಿಭಾಗಗಳಿವೆ.      ಮುಖ್ಯವಾಗಿ  ಜನರಲ್ ಅಸೆಂಬ್ಲಿ,  ಸೆಕ್ಯುರಿಟಿ ಕೌನ್ಸಿಲ್, ಆರ್ಥಿಕ  ಹಾಗೂ  ಸಾಮಾಜಿಕ ಮಂಡಳಿ, ಟ್ರಸ್ಟೀಶಿಪ್ ಕೌನ್ಸಿಲ್,  ಸೆಕ್ರೆಟರಿಯಟ್.   ನ್ಯೂಯಾರ್ಕ್‌ನಲ್ಲಿ   ವಿಶ್ವಸಂಸ್ಥೆ   ಪ್ರಧಾನ ಕಚೇರಿಯಿದ್ದರೂ   ನೆದರ್ಲೆಂಡ್ಸ್‌ನ ಹೇಗ್‌ನಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯವಿದೆ. 

ವಿಶ್ವಸಂಸ್ಥೆಯ (ಯುಎನ್)  ಸ್ಥಾಪನೆ   ಸಮಯದಲ್ಲಿ,   51 ಸದಸ್ಯ ರಾಷ್ಟ್ರಗಳನ್ನು ಹೊಂದಿತ್ತು.   ಈಗ   ಅದು  193 ಸದಸ್ಯ ರಾಷ್ಟ್ರಗಳನ್ನು ಹೊಂದಿದೆ.

ಪ್ರಾಮುಖ್ಯತೆ:

ವಿಶ್ವಸಂಸ್ಥೆ  ಎಂಬುದು    ಅಂತರಾಷ್ಟ್ರೀಯ  ಶಾಂತಿ,  ಭದ್ರತೆ   ಕಾಪಾಡುವ  ಮೂಲಕ   ರಾಷ್ಟ್ರಗಳ ನಡುವೆ  ಸೌಹಾರ್ದ ಸಂಬಂಧ   ಬೆಳೆಸುವ  ಗುರಿಯನ್ನು ಹೊಂದಿರುವ   ಒಂದು  ಅಂತರ್ ಸರ್ಕಾರಿ ಸಂಸ್ಥೆಯಾಗಿದೆ. ಅಂತರರಾಷ್ಟ್ರೀಯ ಸಹಕಾರ   ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲಾ ದೇಶಗಳನ್ನು ಒಟ್ಟುಗೂಡಿಸಲು ಸಮನ್ವಯ ಕೇಂದ್ರವಾಗಿ ಸಂಸ್ಥೆ  ಪ್ರಮುಖ ಪಾತ್ರ ವಹಿಸುತ್ತದೆ.

ವಿಶ್ವಸಂಸ್ಥೆಯ   ದಿನವನ್ನು  ಸಾಮಾನ್ಯವಾಗಿ  ನ್ಯೂಯಾರ್ಕ್‌ನ   ಪ್ರಧಾನ ಕಚೇರಿಯಲ್ಲಿರುವ  ಸಂಸ್ಥೆಯ ಜನರಲ್ ಅಸೆಂಬ್ಲಿ ಹಾಲ್‌ನಲ್ಲಿ ಏಕತೆಯ ಸಂಕೇತವಾಗಿ ಎಲ್ಲಾ ರಾಷ್ಟ್ರಗಳು ಒಟ್ಟಾಗಿ ಆಚರಿಸುತ್ತವೆ.  ಆದರೆ,   ಈ ವರ್ಷ, ವಿಶ್ವಸಂಸ್ಥೆ   ದಿನವನ್ನು  ಎಲ್ಲಾ ದೇಶಗಳು ವಿಭಿನ್ನ ಪ್ರದರ್ಶನಗಳೊಂದಿಗೆ ಆಚರಿಸುತ್ತಿವೆ.

ಸುದ್ದಿ ಓದಿ