ಇಂದು ಕನ್ನಡ, ತೆಲುಗು ಭಾಷೆಯಲ್ಲಿ ಸಿನಿಮಾ ತೆರೆಗೆ
Today, the film will be released in Kannada and Telugu.
ಈಗಾಗಲೇ ಟೀಸರ್, ಹಾಡು ಟ್ರೇಲರ್ ಮೂಲಕ ಚಿತ್ರರಂಗದಲ್ಲಿ ಬರವಸೆ ಮೂಡಿಸಿರುವ 'ಗತವೈಭವ' ಸಿನಿಮಾ ಇಂದು (ನ.14) ಕನ್ನಡ, ತೆಲುಗು ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಸೆನ್ಸಾರ್‌ನಿಂದ ಯು/ಎ ಪ್ರಮಾಣ ಪತ್ರ ಪಡೆದಿರುವ ಈ ಚಿತ್ರದ ಟ್ರೇಲರ್‌ನ್ನು ಇತ್ತೀಚೆಗೆ ನಟ ಕಿಚ್ಚ ಸುದೀಪ್ ಬಿಡುಗಡೆ ಮಾಡಿ ತಂಡಕ್ಕೆ ಸಾಥ್ ನೀಡಿದ್ದಾರೆ. ಇದಕ್ಕೂ ಮೊದಲ ಚಿತ್ರದ ಒಂದು ಗೀತೆಯನ್ನು ಶಿವಣ್ಣ ಬಿಡುಗಡೆ ಮಾಡಿ ತಂಡದ ಶ್ರಮಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ನಿರ್ದೇಶಕ ಸಿಂಪಲ್ ಸುನಿ ಅವರ ಸಿನಿಕರಿಯರ್‌ನ ವಿಭಿನ್ನ ಚಿತ್ರ ಎನಿಸಿಕೊಂಡಿರುವ 'ಗತವೈಭವ' ತನ್ನ ಕಂಟೆಂಟ್ ಮೂಲಕ ಈಗಾಗಲೇ ನೀರೀಕ್ಷೆ ಹೆಚ್ಚು ಮಾಡಿದೆ.
ಚಿತ್ರದ ಬಗ್ಗೆ ಮಾಹಿತಿ ನೀಡಿರುವ ನಿರ್ದೇಶಕ ಸಿಂಪಲ್ ಸುನಿ, 'ಗತವೈಭವ' ಬೇರೆ ರೀತಿ ಸಿನಿಮಾ. ಈ ಚಿತ್ರ ರೀಲೀಸ್ ಆದ್ಮೇಲೆ ಮೌತ್ ಪಬ್ಲಿಸಿಟಿ ತೆಗೆದುಕೊಂಡ ಚೆನ್ನಾಗಿ ಹೋಗುತ್ತದೆ ಎಂಬ ನಂಬಿಕೆ ನಮಗಿದೆ. ಚಿತ್ರಕ್ಕೆ ಹಾಕಿರುವ ಎಫರ್ಟ್ ದೊಡ್ಡದಿದೆ. ಆದರೆ ಸ್ಟಾರ್ ವ್ಯಾಲ್ಯೂ ಕಮ್ಮಿ ಇತ್ತು. ಅದನ್ನು ನಮ್ಮ ಚಿತ್ರರಂಗದ ಗಣ್ಯರಾದ ಶಿವಣ್ಣ, ಸುದೀಪ್ ಸರ್ ಬೆಂಬಲ ಸಿಕ್ಕಿರುವುದು ಗತವೈಭವ ಸಿನಿಮಾಗೆ ಒಳ್ಳೆ ಓಪನಿಂಗ್ ಸಿಗಲಿದೆ ಎಂಬ ನಂಬಿಕೆ ಇದೆ' ಎಂದಿದ್ದಾರೆ. ನಟ ದುಷ್ಯಂತ್, 'ನಮ್ಮ ಸಿನಿಮಾ ಗತವೈಭವಗೆ ಕಿಚ್ಚ ಸರ್ ಬೆನ್ನೆಲುಬಾಗಿ ನಿಂತಿರುವುದು ಖುಷಿ ಕೊಟ್ಟಿದೆ. ಎಂಟು ವರ್ಷಗಳ ಪ್ರಯತ್ನದ ಬಳಿಕ ನಾನು ನಟನಾಗಿ ನಿಮ್ಮ ಮುಂದೆ ಬರುತ್ತಿದ್ದೇನೆ. ಇದೇ ತಿಂಗಳ 14ರಂದು ನಮ್ಮ ಚಿತ್ರ ತೆರೆಗೆ ಬರ್ತಿದೆ. ತ್ರಿಭಾಷಾ ನಟಿ ಆಶಿಕಾ ಅವರ ಜೊತೆ ನಟಿಸಿರುವುದು ಸಂತಸ. ಹತ್ತು ಯಶಸ್ವಿ ಚಿತ್ರಗಳ ನಿರ್ದೇಶಕ ಸಿಂಪಲ್ ಸುನಿ ಅವರ ಕನಸಿನ ಕೂಸು ಮಕ್ಕಳ ದಿನದಂದು ನಿಮ್ಮ ಮುಂದೆ ಬರ್ತಿದೆ. ನಿಮ್ಮ ಬೆಂಬಲ ಇರಲಿ' ಎಂದಿದ್ದಾರೆ.
ಚಿತ್ರದ ನಾಯಕಿ ಆಶಿಕಾ ರಂಗನಾಥ್, 'ಈ ಕಾರ್ಯಕ್ರಮ ಆಗಲು ಕಾರಣ ನಮ್ಮ ಪ್ರೀತಿಯ ಸುದೀಪ್ ಸರ್. ಅವರು ಯಾವಾಗಲೂ ಹೊಸಬರ ಕಂಟೆಂಟ್‌ಗೆ ಪ್ರೀತಿಯಿಂದ ಸಪೋರ್ಟ್ ಮಾಡುತ್ತಾರೆ. ಅದು ಅವರಲ್ಲಿ ಇರುವ ಸಿನಿಮಾ ಮೇಲಿನ ಪ್ರೀತಿ ಹಾಗೂ ಫ್ಯಾಷನ್ ಕಾಣಿಸುತ್ತದೆ. ಗತವೈಭವ ಚಿತ್ರದ ಟ್ರೇಲರ್ ಲಾಂಚ್‌ಗೆ ಸುದೀಪ್ ಸರ್ ಮೆರುಗು ನೀಡಿದ್ದಾರೆ. ಗತವೈಭವ ಸಾಕಷ್ಟು ರೀತಿಯಲ್ಲಿ ಸ್ಪೆಷಲ್ ಚಿತ್ರ. ಅತಿ ಹೆಚ್ಚು ದಿನಗಳ ಕಾಲ ಶೂಟ್ ಮಾಡಿದ ಸಿನಿಮಾ. ಗತವೈಭವ ಸಿನಿಮಾವನ್ನು ನಾಲ್ಕು ಸಿನಿಮಾ ನೋಡುವ ಅನುಭವ ಆಗುತ್ತದೆ. ನಾಲ್ಕು ಕಥೆ, ನಾಲ್ಕು ಪಾತ್ರಗಳು. ಇದು ಹೊಸ ರೀತಿ ಸ್ಕ್ರೀಪ್ಟ್' ಎಂದರು.
ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಹೀರೋ ಆಗಿ ದುಷ್ಯಂತ್ ಎಂಟ್ರಿ ಕೊಡುತ್ತಿದ್ದು, ಇವರಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಸಾಥ್ ನೀಡಿದ್ದಾರೆ. ಸುಧಾ ಬೆಳವಾಡಿ, ಕಿಶನ್ ಬಿಳಗಲಿ, ಕೃಷ್ಣ ಹೆಬ್ಬಾಳೆ, ಕೃಷ್ಣ ಜೋರಾಪುರ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತ ನೀಡಿದ್ದು, ವೀಲೀಯಂ ಡೇವಿಡ್ ಛಾಯಾಗ್ರಹಣ ಮಾಡಿದ್ದಾರೆ. ಸೇರ್ವೇಗಾರ ಸಿಲ್ವರ್ ಸ್ಕ್ರೀನ್ಸ್ ಮತ್ತು ಸುನಿ ಸಿನಿಮಾಸ್ ಸಂಸ್ಥೆಯಡಿ ದೀಪಕ್ ಹಾಗೂ ಸಿಂಪಲ್ ಸುನಿ ಚಿತ್ರ ನಿರ್ಮಾಣ ಮಾಡ್ತಿದ್ದಾರೆ. ಗತವೈಭವ, ಸಂಪೂರ್ಣ ಪ್ರೇಮಕಥೆ ಪ್ಯಾಂಟಸಿ ಹಾಗು ಸಾನಾತನ ಧರ್ಮದ ಕಥೆಯ ಹಿನ್ನೆಲೆಯಲ್ಲಿ ಚಿತ್ರ ಸಾಗಲಿದೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 