ಇಂದಿನ ಶಿಕ್ಷಣ ಕೇವಲ ಮಾರ್ಕ್ಸ ಕಾರ್ಡ ಶಿಕ್ಷಣವಾಗಿದೆ: ಚಿದಂಬರ ದೇಶಪಾಂಡೆ
ಹುಕ್ಕೇರಿ 17: ಘಟಪ್ರಭಾ ನಗರದ ಎಸ್ ಡಿ ಟಿ ಪದವಿ ಪೂರ್ವ ಮಹಾವಿದ್ಯಾಲಯದ ಸನ್ 2002 - 03 ನೇ ಸಾಲಿನ ಪಿ ಯು ಸಿ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಜರುಗಿತು.
ಧುಪದಾಳದ ಗಾರ್ಡನದಲ್ಲಿ ಜರಗಿದ ಕಾರ್ಯಕ್ರಮವನ್ನು ಗುರುಮಾತೆ ಎಸ್ ಎಮ್ ನಾಯ್ಕರ ಚಾಲನೆ ನೀಡಿದರು. ವೇದಿಕೆ ಮೇಲೆ ಚಿದಂಬರ ದೇಶಪಾಂಡೆ, ಎಸ್ ಜಿ ನಾಯಿಕ, ಜಿ ಹಿರೇಮಠ ಮ್ ಕಮತೆ, ಡಿ ಬಿ ಕರಗಾಂವಿ, ಎಮ್ ವಿ ಹಿರೇಮಠ, ಆರ್ ಬಿ ಝಿರಲಿ, ಎಸ್ ಕೆ ಬಬಲಿ, ಬಿ ವಾಯ್ ಪಾತ್ರೋಟ ಹಾಗೂ ಬಡಿಗೇರ ತೋಳಿ ಗುರುಗಳು ಉಪಸ್ಥಿತರಿದ್ದರು.ಸ್ನೇಹಿತರ ಬಳಗದ ಸದಸ್ಯರು ತಮಗೆ ವಿದ್ಯಾದಾನ ಮಾಡಿದ ಗುರುಗಳಿಗೆ ಮತ್ತು ಗುರುಮಾತೆಯರಿಗೆ ಅಭಿನಂದನೆ ಸಲ್ಲಿಸಿ ಸತ್ಕರಿಸಿದರು. ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ದೇಶಪಾಂಡೆ ಗುರುಗಳು ಇಂದಿನ ಶಿಕ್ಷಣ ಕೇವಲ ಮಾರ್ಕ್ಸ ಕಾರ್ಡ ಶಿಕ್ಷಣವಾಗಿದೆ ಮಕ್ಕಳು ಮಾರ್ಕ್ಸ್ ಕಾರ್ಡ ಪಡೆಯಲು ಶಿಕ್ಷಣ ಪಡೆಯುತ್ತಿದ್ದಾರೆ. ಇದರಿಂದ ದೇಶದ ಮೌಲ್ಯ ಕಡಿಮೆಯಾಗುತ್ತಿದೆ. ಕಾರಣ ದೇಶದ ಸಂಸ್ಕೃತಿ ಎತ್ತಿ ಹಿಡಿಯುವ ಶಿಕ್ಷಣ ಅವಶ್ಯವಾಗಿದೆ ಎಂದರು.
ಹಳೆ ವಿದ್ಯಾರ್ಥಿನಿ ರೂಪಶ್ರೀ ಕಮತೆ ಮಾತನಾಡಿ ನಮಗೆ ವಿದ್ಯಾದಾನ ಮಾಡಿದ ಗುರುಗಳಿಗೆ ಮತ್ತು ಕಲಿತ ಶಾಲೆಯ ಬಗ್ಗೆ ಕಾಳಜಿ ವಹಿಸುವದು ಅವಶ್ಯವಾಗಿದೆ, ಇಂದು ಘಟಪ್ರಭಾ ಎಸ್ ಡಿ ಟಿ ಪದವಿ ಪೂರ್ವ ಮಹಾವಿದ್ಯಾಲಯದ ಗೆಳೆಯರ ಬಳಗ ವತಿಯಿಂದ ನಮ್ಮ ಜೀವನಕ್ಕೆ ಮಾರ್ಗದರ್ಶನ ನೀಡಿದ ಗುರುಗಳಿಗೆ ವಂದನೆ ಸಲ್ಲಿಸುವ ಮೂಲಕ ಮತ್ತೊಮ್ಮೆ ಅವರ ಆಶಿರ್ವಾದ ಪಡೆದಿದ್ದೆವೆ ಎಂದರು.
ನಂತರ ಹಳೆ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಗೆಳೆಯರ ಬಳಗದ ಸದಸ್ಯರಾದ ರಾಘವೇಂದ್ರ ಗುಂಡವಗೋಳ, ಗೀರಿಶ ನಾಯಿಕ, ಯುನೂಸ್ ಶೇಖ, ಅನುರಾಧಾ ಬೆಳವಿ, ಸುನಿತಾ ಹೇಬ್ಬಾಳಕರ ಮತ್ತು ರೂಪಶ್ರೀ ಕಮತೆ ಮೊದಲಾದವರು ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸಿದರು.
ಈ ಸಂದರ್ಭದಲ್ಲಿ ಎಸ್ ಡಿ ಟಿ ಪದವಿ ಪೂರ್ವ ಕಾಲೇಜಿನ 200 - 03 ನೇ ಸಾಲಿನ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಉಪಸ್ಥಿತರಿದ್ದು ತಮ್ಮ ಹಳೆಯ ನೆನಪುಗಳನ್ನು ಮೆಲಕು ಹಾಕಿದರು.