ಅಂತರರಾಷ್ಟ್ರೀಯ

‘ಆಪರೇಷನ್ ಗಂಗಾ’ ಅಡಿ ಇಂದು 3726 ಭಾರತೀಯರ ಏರ್ ಲಿಫ್ಟ್

‘ಆಪರೇಷನ್ ಗಂಗಾ’ ಅಡಿ ಇಂದು 3726 ಭಾರತೀಯರ ಏರ್ ಲಿಫ್ಟ್

ಬುಕಾರೆಸ್ಟ್03: ಯುದ್ಧಗ್ರಸ್ತ ಉಕ್ರೇನ್ ನಲ್ಲಿ ಸಿಲುಕಿಬಿದ್ದಿರುವ ವಿದೇಶಿ ನಾಗರಿಕರು ಪ್ರಾಣ ರಕ್ಷಿಸಿಕೊಳ್ಳಲು ನೆರೆ ರಾಷ್ಟ್ರಗಳತ್ತ ದೌಡಾಯಿಸುತ್ತಿದ್ದಾರೆ. ಈ ಮಧ್ಯೆ, ಆಪರೇಷನ್ ಗಂಗಾ ಅಡಿಯಲ್ಲಿ ರೊಮೇನಿಯಾದಿಂದ 3,726 ಭಾರತೀಯರು ಸ್ಥಳಾಂತರಗೊಳ್ಳಲಿದ್ದಾರೆ. ರೊಮೇನಿಯಾ ರಾಜಧಾನಿ ಬುಕಾರೆಸ್ಟ್ ನಿಂದ ಸ್ವದೇಶಕ್ಕೆ ಭಾರತೀಯರನ್ನು ಕರೆತರಲಾಗವುದು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಎಂ. ಸಿಂಧಿಯಾ ತಿಳಿಸಿದ್ದಾರೆ.ಇದಕ್ಕಾಗಿ ವಿದೇಶಾಂಗ ರಾಯಭಾರಿ ಕಚೇರಿ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದು, ಬುಕಾರೆಸ್ಟ್‌ನಿಂದ 8, ಸುಸೇವಾದಿಂದ 2, ಕೊಸಿಸ್‌ನಿಂದ 1 ವಿಮಾನ, ಬುಡಾಪೆಸ್ಟ್‌ನಿಂದ 5 ಮತ್ತು ರೆಜೊದಿಂದ 3 ವಿಮಾನಗಳು ಕಾರ್ಯಾಚರಣೆ ನಡೆಸಲಿವೆ ಎಂದು ತಿಳಿಸಿದೆ.

ಸುದ್ದಿ ಓದಿ