ಶಾಂತಿಪಾಲನಾ ಸಿಬ್ಬಂದಿ ಮೇಲೆ ಗುಂಡಿನ ದಾಳಿ, ಮೂವರ ಹತ್ಯೆ
ಮಾಸ್ಕೋ,
ಡಿಸೆಂಬರ್ 26: ಮಧ್ಯ ಆಫ್ರಿಕಾದ ಗಣರಾಜ್ಯದಲ್ಲಿ
ಅಪರಿಚಿತ ಬಂದೂಕುಧಾರಿಗಳು ಯುಎನ್ ಶಾಂತಿಪಾಲನಾ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದು, ಪರಿಣಾಮ ಮೂವರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು ಇನ್ನಿಬ್ಬರು
ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ
ತಿಳಿಸಿದ್ದಾರೆ.
"ಮಧ್ಯ
ಆಫ್ರಿಕಾದ ರಾಷ್ಟ್ರೀಯ ರಕ್ಷಣಾ ಮತ್ತು ಭದ್ರತಾ ಪಡೆಗಳ ಮೇಲೆ ಅಪರಿಚಿತ ಸಶಸ್ತ್ರ ದಾಳಿಕೋರರರು ನಡೆಸಿದ
ಇಂದಿನ ದಾಳಿಯನ್ನು ಪ್ರಧಾನ ಕಾರ್ಯದರ್ಶಿಯವರು ತೀವ್ರವಾಗಿ
ಖಂಡಿಸಿದ್ದಾರೆ.
ದಾಳಿಯಲ್ಲಿ ಮಿಷನ್ ಡೆಕೊವಾದಲ್ಲಿ ಬುರುಂಡಿಯ ಮೂವರು ಶಾಂತಿಪಾಲನಾ ಸಿಬ್ಬಂದಿ
ಸಾವನ್ನಪ್ಪಿದ್ದು, ಮತ್ತು ಇತರೆ ಇಬ್ಬರು ಗಾಯಗೊಂಡಿದ್ದಾರೆ
ಎಂದೂ ಸ್ಟೀಫನ್ ಡುಜಾರಿಕ್ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.