ಅಂತರರಾಷ್ಟ್ರೀಯ

ಅಫ್ಘಾನಿಸ್ತಾನದಲ್ಲಿ ಮೂರು ಸ್ಫೋಟ; 5 ಸಾವು

ಅಫ್ಘಾನಿಸ್ತಾನದಲ್ಲಿ ಮೂರು ಸ್ಫೋಟ; 5 ಸಾವು

ಕಾಬೂಲ್: ಏಪ್ರಿಲ್ 21: ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ, ಮಜರ್-ಎ-ಷರೀಫ್ ಮತ್ತು ಕುಂದುಜ್ ನಗರದಲ್ಲಿ ಸ್ಫೋಟ ಸಂಭವಿಸಿದ್ದು, ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 65 ಮಂದಿ ಗಾಯಗೊಂಡಿದ್ದಾರೆ.

ಕಾಬೂಲ್ ನಲ್ಲಿ ನಡೆದ ಮೊದಲ ಸ್ಫೋಟದಲ್ಲಿ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ ಎಂದು ಆಂತರಿಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಎರಡನೇ ಸ್ಫೋಟವು ಮಜರ್-ಎ-ಷರೀಫ್ ನ ಸೆಹ್ ಡೋಕಾನ್ ಮಸೀದಿ ಬಳಿ ಸಂಭವಿಸಿದ್ದು, ಐದು ಜನರು ಸಾವನ್ನಪ್ಪಿದರು ಮತ್ತು 60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಮೂರನೇ ಸ್ಫೋಟದಲ್ಲಿ ಸಾವು-ನೋವುಗಳು ತಿಳಿದುಬಂದಿಲ್ಲ. ದಾಳಿಯ ಹೊಣೆಯನ್ನು ಯಾವುದೇ ಗುಂಪು ಹೊತ್ತುಕೊಂಡಿಲ್ಲ.

ಸುದ್ದಿ ಓದಿ