ಅಂತರರಾಷ್ಟ್ರೀಯ

ಜೆಟ್ ಬೋಯಿಂಗ್ ೭೩೭ ವಿಮಾನವನ್ನೇ ವರಿಸಲಿರುವ ಜರ್ಮನಿ ಈ ಮಹಿಳೆ...!!!

ಜೆಟ್ ಬೋಯಿಂಗ್  ೭೩೭  ವಿಮಾನವನ್ನೇ ವರಿಸಲಿರುವ ಜರ್ಮನಿ  ಈ  ಮಹಿಳೆ...!!!

ಬರ್ಲಿನ್, ಜ ೨೭  ಪ್ರೇಮಕ್ಕೆ ಯಾವುದೇ  ಗಡಿಗಳಿರುವುದಿಲ್ಲ  ಎನ್ನುತ್ತಾರೆ. ಆದರೆ,  ಯುವತಿಯೊಬ್ಬಳು ಪ್ರೇಮದಲ್ಲಿ  ಬಿದ್ದಿದ್ದಾಳೆಂದರೆ,  ಸುರಸುಂದರ  ಹುಡುಗನೋ, ಇಲ್ಲ ಬಾಲ್ಯದ ಗೆಳೆಯನೋ ಇರಬಹುದು  ಎಂದು ಕೊಳ್ಳುತ್ತೇವೆ.  ಆದರೆ, ವಿಚಿತ್ರವೆಂದರೆ  ಜರ್ಮನಿಯ ಈ  ಯುವತಿ  ವಿಮಾನದೊಂದಿಗೆ  ಪ್ರೇಮಕ್ಕೆ  ಬಿದ್ದಿದ್ದಾಳೆ...!   ಅಷ್ಟು ಮಾತ್ರವಲ್ಲ.. ಆಕೆ     ಆ ವಿಮಾನದೊಂದಿಗೆ  ಸದ್ಯದಲ್ಲೇ  ವಿವಾಹವಾಗುವುದಾಗಿ  ಘೋಷಿಸುವ ಮೂಲಕ ..  ಪ್ರೀತಿ ಪ್ರೇಮಕ್ಕೆ  ಯಾವುದೇ  ಗಡಿಇಲ್ಲ   ಎಂಬುದನ್ನು ಸಾಬೀತುಪಡಿಸಿದ್ದಾಳೆ.  

ಬರ್ಲಿನ್‌ನ ೩೦ ವರ್ಷದ ಮೈಕೆಲ್ ಕೋಬ್ಕೆ  ಕಳೆದ  ಆರು ವರ್ಷಗಳಿಂದ ಪ್ರಾಣಕ್ಕಿಂತ  ಹೆಚ್ಚು  ಪ್ರೀತಿಸುತ್ತಿರುವ, ತನ್ನ ಕನಸಿನ    ಜೆಟ್  ಬೋಯಿಂಗ್ ೭೩೭  ವಿಮಾನವನ್ನು   ಬರುವ ಮಾರ್ಚ್ ನಲ್ಲಿ  ನೆದರ್‌ಲ್ಯಾಂಡ್‌ನಲ್ಲಿ ವಿವಾಹವಾಗುವುದಾಗಿ  ಅವರು ಹೇಳಿದ್ದಾಳೆ. ೨೦೧೪ ರಲ್ಲಿ    ಬರ್ಲಿನ್ ಟೆಗೆಲ್ ವಿಮಾನ ನಿಲ್ದಾಣದಲ್ಲಿ      ಮೊಟ್ಟ ಮೊದಲು ಈ ಜೆಟ್ ವಿಮಾನವನ್ನು   ನೋಡಿದೆ.   ಮೊದಲ  ನೋಟದಲ್ಲೆ  ಅದರೊಂದಿಗೆ  ಪ್ರೇಮಕ್ಕೆ  ಬಿದ್ದಿದ್ದೆ,  ಅದಕ್ಕೆ  ಸ್ಕಾಟ್( ಡಾರ್ಲಿಂಗ್) ಎಂಬ ಮುದ್ದಿನ  ಹೆಸರನ್ನೂ  ಇರಿಸಿರುವುದಾಗಿ  ಹೇಳಿಕೊಂಡಿದ್ದಾಳೆ. 

ಕಳೆದ  ಆರು ವರ್ಷಗಳಿಂದ  ಈ ವಿಮಾನದೊಂದಿಗೆ  ಡೇಟಿಂಗ್ ಮಾಡುತ್ತಿದ್ದೇನೆ....!.  ಅದನ್ನು ಕಂಡ  ಕ್ಷಣದಿಂದ   ಪ್ರೀತಿಗೆ ಬಿದ್ದೀದ್ದೇನೆ ೨೧೦೪ ಟೆಗೆಲ್ ವಿಮಾನ ನಿಲ್ದಾಣದಲ್ಲಿ, ಜೆಟ್ ಬೋಯಿಂಗ್  ವಿಮಾನದ  ವಿಗ್ಸ್, ವಿಂಗ್ಲೆಟ್ಸ್ ಮತ್ತು ಥ್ರಸ್ಟರ್ ಗಳು  ತಮ್ಮನ್ನು  ತೀವ್ರ ಆಕರ್ಷಣೆಗೊಳಗಾಗುವಂತೆ ಮಾಡಿವೆ.  ವಿಮಾನ ನಿಲ್ದಾಣದಲ್ಲಿ  ಸದಾ ಜೆಟ್ ವಿಮಾನವನ್ನು  ಕೇವಲ  ಕಿಟಕಿ  ಸಮೀಪದಿಂದ  ಭೇಟಿಯಾಗುತ್ತಿದೆ. ನಾನು ಆರು ವರ್ಷಗಳಿಂದ ಈ ವಿಮಾನವನ್ನು ಪ್ರೀತಿಸುತ್ತಿದ್ದೇನೆ ಎಂದು ಮೈಕೆಲ್ ಹೇಳುತ್ತಾರೆ. ೨೦೧೯ ರ ಸೆಪ್ಟೆಂಬರ್‌ನಲ್ಲಿ ೪೦ ಟನ್ ತೂಕದ ಈ ಜೆಟ್ ವಿಮಾನವನ್ನು  ಮೊದಲು  ಬಾರಿ ಚುಂಬಿಸಿದ್ದೆ   ಎಂದು  ಆಕೆ  ಬಹಿರಂಗಪಡಿಸಿದ್ದಾಳೆ. ವಿಮಾನದೊಂದಿಗೆ  ಇರುವಷ್ಟು ಕಾಲ   ಸಮಯ ಕಳೆಯುವುದೇ  ತಿಳಿಯುವುದಿಲ್ಲ.    ಈ ವಿಮಾನ  ರೆಕ್ಕೆಯ ಮೇಲೆ ನಿಂತು ಅದನ್ನು ಚುಂಬಿಸಿದ ಕ್ಷಣ ತಮಗೆ ಅತ್ಯಂತ ಆನಂದ  ಆನಂದದ ಕ್ಷಣ.  ಇದು ನನ್ನ ಜೀವನದಲ್ಲಿ ಒಂದು ಸುಂದರ ಕ್ಷಣ  ಎಂದು ವಿಮಾನದೊಂದಿನ ತನಗಿರುವ  ಪ್ರೀತಿಯನ್ನು  ಹೇಳಿಕೊಂಡಿದ್ದಾರೆ. ಇನ್ನೂ ಮೈಕೆಲ್      ನಿರ್ಧಾರವನ್ನು ಆಕೆಯ  ತಂದೆ ತಾಯಿ,  ಸ್ನೇಹಿತರು ಸಹ ಸ್ವಾಗತಿಸಿದ್ದಾರೆ ಎಂದು ವರದಿಯಾಗಿದೆ.


ಸುದ್ದಿ ಓದಿ