ಕ್ರೀಡೆ

ವಿಷಯಗಳು ನಿಧಾನವಾಗಿ ಚಲಿಸುತ್ತಿವೆ: ರೋಜರ್ ಫೆಡರರ್ ಹೀಗಂದಿದ್ದೇಕೆ?

ವಿಷಯಗಳು ನಿಧಾನವಾಗಿ ಚಲಿಸುತ್ತಿವೆ: ರೋಜರ್ ಫೆಡರರ್ ಹೀಗಂದಿದ್ದೇಕೆ?

ವೊಲ್ಲೆರ್ವ್, ಸ್ವಿಟ್ಜರ್ಲೆಂಡ್: ಜೂನ್ 12: ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ವಿಶ್ವದ ಟೆನಿಸ್ ತಾರೆ ರೋಜರ್ ಫೆಡರರ್ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುವ ಪ್ರಯತ್ನದಲ್ಲಿ ವಿಷಯಗಳು ನಿಧಾನವಾಗಿ ಚಲಿಸುತ್ತಿವೆ ಎಂದು ಒಪ್ಪಿಕೊಂಡಿದ್ದಾರೆ.

ಸುಮಾರು ಒಂದು ವರ್ಷದ ಹಿಂದೆ ವಿಂಬಲ್ಡನ್‌ನಲ್ಲಿ ಕ್ವಾರ್ಟರ್-ಫೈನಲ್ ಸೋಲಿನ ನಂತರ 20 ಬಾರಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ವಿಜೇತ ಮತ್ತು ಮಾಜಿ ವಿಶ್ವ ನಂಬರ್ ಒನ್  ಇದುವರೆಗೂ ಮೈದಾನಕ್ಕಿಳಿದು ಸ್ಪರ್ಧಿಸಿಲ್ಲ. ತಮ್ಮ ಮೊಣಕಾಲಿನ ಮೂರನೇ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ರೋಜರ್ ಫೆಡರರ್ ಅವರ ವಿಶ್ವ ಶ್ರೇಯಾಂಕವು 50 ಕ್ಕೆ ಕುಸಿದಿದೆ. ಇದು ಕಳೆದ 22 ವರ್ಷಗಳಲ್ಲಿ ಅವರ ಅತ್ಯಂತ ಕಡಿಮೆ ಶ್ರೇಯಾಂಕವಾಗಿದೆ.

 ಫೆಡರರ್ ಸ್ವಿಸ್ ಬ್ರಾಡ್‌ಕಾಸ್ಟರ್ ಎಸ್‌ಆರ್‌ಎಫ್‌ನೊಂದಿಗೆ ಮಾತನಾಡಿದ ರೋಜರ್ ಫೆಡರರ್ ತನ್ನ ನಾಲ್ಕು ಮಕ್ಕಳೊಂದಿಗೆ ಕಾಲಕಾಲಕ್ಕೆ ಆಟವಾಡುತ್ತೇನೆ. ಆದರೆ ವಿಷಯಗಳು ನಿಧಾನವಾಗಿ ಚಲಿಸುತ್ತಿವೆ ಎಂದು ಹೇಳಿದರು. ಈಗಾಗಲೇ ತಮ್ಮ 41 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ರೋಜರ್ ಫೆಡರರ್  ಸೆಪ್ಟೆಂಬರ್ ಅಂತ್ಯದಲ್ಲಿ ಲಂಡನ್‌ನಲ್ಲಿನ ಲೇವರ್ ಕಪ್‌ ಗೆ ಮರಳಲು ಉದ್ದೇಶಿಸಿದ್ದಾರೆ.

ಆಗಸ್ಟ್ ಅಂತ್ಯದಲ್ಲಿ ನನಗೆ ಶಸ್ತ್ರಚಿಕಿತ್ಸೆಯಾಗಿದೆ . ಜನರು ನನ್ನನ್ನು  ಶಸ್ತ್ರಚಿಕಿತ್ಸೆಯ ಬಗ್ಗೆ ಕೇಳುತ್ತಾರೆ. ಪ್ರತಿ ಬಾರಿಯೂ ನಾನು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಉತ್ತರಿಸಬೇಕಾಗಿದೆ.ನಾನು ತಾಳ್ಮೆಯಿಂದಿರಬೇಕು, ನಾನು ನಿರಂತರ ಪ್ರಗತಿಯನ್ನು ಸಾಧಿಸುತ್ತಿದ್ದೇನೆ ಎಂದು ಅವರು ಹೇಳಿದರು. ಫೆಡರರ್ ಅವರು ಪ್ರಸ್ತುತ ತಮ್ಮ  ದೈಹಿಕ ಸ್ಥಿತಿಯ ಮೇಲೆ ಗಮನಹರಿಸುತ್ತಿದ್ದಾರೆ. ದೇಹದ ಮೇಲೆ ಹೆಚ್ಚು ಭಾರ ಹಾಕುತ್ತಿಲ್ಲ. ವಾರಕ್ಕೆ ಐದರಿಂದ ಆರು ಬಾರಿ ಜಿಮ್ಗೆ ಹೋಗುತ್ತಾರೆಂದು ವರದಿಯಾಗಿದೆ.

ಸೆಪ್ಟೆಂಬರ್ ನಲ್ಲಿ ನಡೆಯುವ ಲೇವರ್ ಕಪ್ ನಂತರ, ಫೆಡರರ್ ಅವರು ಅಕ್ಟೋಬರ್ ರವರೆಗೆ ತಮ್ಮ ತವರು ಬಾಸೆಲ್ ಪಂದ್ಯಾವಳಿಯಲ್ಲಿ ಆಡಲು ಉದ್ದೇಶಿಸಿದ್ದಾರೆ ಎಂದು ಈಗಾಗಲೇ ಹೇಳಿದ್ದಾರೆ.

ತಮ್ಮ ವೃತ್ತಿಜೀವನದಲ್ಲಿ 103 ಟ್ರೋಫಿಗಳನ್ನು ಗೆದ್ದ ಫೆಡರರ್, 2021 ರಲ್ಲಿ ಕೇವಲ 13 ಪಂದ್ಯಗಳನ್ನು ಮತ್ತು 2020 ರಲ್ಲಿ ಕೇವಲ ಆರು ಪಂದ್ಯಗಳನ್ನು ಆಡಿದ್ದಾರೆ.

ಸುದ್ದಿ ಓದಿ