ಅಂತರರಾಷ್ಟ್ರೀಯ

ಲಸಿಕೆಗಳು ಒಮಿಕ್ರಾನ್ ವಿರುದ್ಧ ಹೋರಾಡುವುದಿಲ್ಲ ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ

ಲಸಿಕೆಗಳು ಒಮಿಕ್ರಾನ್ ವಿರುದ್ಧ ಹೋರಾಡುವುದಿಲ್ಲ ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ

ಲಂಡನ್​​: ನ. 30: ಲಸಿಕೆಗಳು ಒಮಿಕ್ರಾನ್​ ರೋಗವನ್ನು ತಡೆಯುವುದಿಲ್ಲ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾ ನಿಲಯವು ಮಂಗಳವಾರ ಹೇಳಿದೆ. ಆದರೆ ಅಗತ್ಯವಿದ್ದರೆ ಆಸ್ಟ್ರಾಜೆನೆಕಾ (AZN.L) ದೊಂದಿಗೆ ಅಭಿವೃದ್ಧಿಪಡಿಸಿದ ಅದರ ಲಸಿಕೆಯ ನವೀಕರಿಸಿದ ಆವೃತ್ತಿಯನ್ನು ತ್ವರಿತವಾಗಿ ಅಭಿವೃದ್ಧಿಪಡಿಸಲು ಸಿದ್ಧವಾಗಿದೆ.

ಮಂಗಳವಾರ ಡ್ರಗ್‌ಮೇಕರ್ ಮಾಡರ್ನಾ ಮುಖ್ಯಸ್ಥರು, ಕೊರೊನಾ ರೂಪಾಂತರದ ವಿರುದ್ಧ ಲಸಿಕೆಗಳು ಪರಿಣಾಮಕಾರಿಯಾಗುವುದು ಅಸಂಭವವೆಂದು ಹೇಳಿದ ನಂತರ ಜಾಗತಿಕ ಮಾರುಕಟ್ಟೆ ಕುಸಿದಿದೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು ಇಲ್ಲಿಯವರೆಗೆ ಒಮಿಕ್ರಾನ್​​ನಲ್ಲಿ ಸೀಮಿತ ಡೇಟಾ ಇದೆ ಎಂದು ಹೇಳಿದೆ. ಕಳೆದ ವಾರ ಅಸ್ಟ್ರಾಜೆನೆಕಾದ ಬಗ್ಗೆ ನೀಡಿದ ಹೇಳಿಕೆಯನ್ನು ಪ್ರತಿಧ್ವನಿಸುತ್ತಾ, ಕೊರೊನಾ ರೂಪಾಂತರದ ಮೇಲೆ ಇದು ಯಾವ ರೀತಿ ಪ್ರಭಾವವನ್ನು ಬೀರುತ್ತದೆ ಎಂಬುದನ್ನು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡುತ್ತಿದೆ.

ಕಳೆದ ವರ್ಷ ಹೊಸ ರೂಪಾಂತರಗಳು ಉಲ್ಭಣಗೊಂಡಿದ್ದರೂ, ಅವುಗಳ ವಿರುದ್ಧ ಲಸಿಕೆಗಳು ಹೆಚ್ಚಿನ ಮಟ್ಟದ ರಕ್ಷಣೆಯನ್ನು ಒದಗಿಸಿದ್ದವು. ಒಮಿಕ್ರಾನ್​​ ಇವುಗಳಿಗಿಂತ ಯಾವ ರೀತಿ ಭಿನ್ನವಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

ಆದಾಗ್ಯೂ, ಅಗತ್ಯವಿದ್ದಲ್ಲಿ ನವೀಕರಿಸಿದ ಕೊರೊನಾ ಲಸಿಕೆಯನ್ನು ತ್ವರಿತವಾಗಿ ಅಭಿವೃದ್ಧಿಪಡಿಸಲು ನಾವು ಅಗತ್ಯವಾದ ಪರಿಕರಗಳು ಮತ್ತು ಪ್ರಕ್ರಿಯೆಗಳನ್ನು ಹೊಂದಿದ್ದೇವೆ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾ ನಿಲಯ ಹೇಳಿದೆ.


ಸುದ್ದಿ ಓದಿ