ಯುವಕ ಕಾಣೆ
ಲೋಕದರ್ಶನ ವರದಿ
ಬ್ಯಾಡಗಿ: ದುಶ್ಚಟಗಳನ್ನು ಬಿಡುವಂತೆ ಕುಟುಂಬಸ್ಥರು ಬುದ್ಧಿ ಹೇಳಿದ್ದನ್ನೇ ನೆಪವಾಗಿಟ್ಟುಕೊಂಡು ಯುವಕನೊಬ್ಬ ಕಾಣೆಯಾದ ಘಟನೆ ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯ ಪಟ್ಟಣದ ದ್ಯಾಮವ್ವದೇವಿ ದೇವಸ್ಥಾನದ ಬಳಿ ನಡೆದಿದೆ.
ಕಾಣೆಯಾದ ಯುವಕರನನ್ನು ಮೃತ್ಯುಂಜಯ ಚನ್ನಬಸಪ್ಪ ಮೋಟೆಬೆನ್ನೂರ (38) ಎಂದು ಗುತರ್ಿಸಲಾಗಿದ್ದು, ಈತ ಕಳೆದ ಕಳೆದ 2017ರ ಡಿ.16ರಂದು ಮನೆಯಿಂದ ತೆರಳಿದವನು ಇನ್ನೂ ಸಹ ಮನೆಗೆ ತಿರುಗಿ ಬಂದಿರುವುದಿಲ್ಲ ಎಂದು ತಿಳಿದು ಬಂದಿದೆ.
ಮದ್ಯವ್ಯಸನಿಯಾಗಿದ್ದ ಈತನಿಗೆ ಪಾಲಕರು ಸೇರಿದಂತೆ ಅಕ್ಕಪಕ್ಕದವರು ಬುದ್ಧಿವಾದ ಹೇಳಿದ್ದಲ್ಲದೇ, ಕುಡಿಯುವುದನ್ನು ಬಿಟ್ಟರೇ ಮಾತ್ರ ನಿನಗೆ ಮದುವೆ ಮಾಡುವುದಾಗಿ ಹೇಳಿದ್ದರು. ಇದನ್ನು ತಿರಸ್ಕರಿಸಿದ ಮೃತ್ಯುಂಜಯ ಮದ್ಯವನ್ನು ಬಿಡದೇ ಮನೆಯನ್ನೇ ಬಿಟ್ಟು ಹೋಗಿದ್ದಾಗಿ ತಿಳಿದು ಬಂದಿದೆ.
ಮಗನಿಗಾಗಿ, ಸಂಬಂಧಿಕರ ಸ್ನೇಹಿತರ ಮನೆಗಳಲ್ಲಿ ವಿಚಾರಿಸಿದರೂ ಸಹ ಮೃತ್ಯುಂಜಯ ಸುಳಿವು ಸಿಗದ ಹಿನ್ನೆಲೆಯಲ್ಲಿ ತಂದೆ ಚನ್ನಬಸಪ್ಪ 2018 ಜ.9 ರಂದು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಮಗನನ್ನು ಹುಡುಕಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದಾನೆ.
ಚಹರೆ: ಕಾಣೆಯಾದ ಯುವಕ 5.4 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು, ಗೋಧಿಗೆಂಪು ಮೈಬಣ್ಣ, ಕೋಲು ಮುಖವಿದ್ದು ಕನ್ನಡ ಮಾತು ಬಲ್ಲವನಾಗಿದ್ದಾನೆ. ಮನೆಯಿಂದ ತೆರಳುವ ಸಂದರ್ಭದಲ್ಲಿ ಬದಾಮಿ ಬಣ್ಣದ ಅಂಗಿ ಹಾಗೂ ನೀಲಿ ಪ್ಯಾಂಟ್ ಧರಿಸಿದ್ದು ಈತನ ಸುಳಿವು ಸಿಕ್ಕಲ್ಲಿ ಬ್ಯಾಡಗಿ ವೃತ್ತ ನಿರೀಕ್ಷಕರ ಕಛೇರಿ ದೂರವಾಣಿ ಸಂಖ್ಯೆ:08375-228633, ಅಥವಾ 08375-228333 ಹಾವೇರಿ ಎಸ್ಪಿ ಆಫೀಸ್ ಕಂಟ್ರೋಲ್ ರೂಂನ ದೂರವಾಣಿ ಸಂ.08375-237368 ಸಂಪಕರ್ಿಸುವಂತೆ ಕೋರಲಾಗಿದೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 