ಬ್ರೆಜಿಲ್ ನಲ್ಲಿ ಕೋವಿಡ್-19ನ ಒಟ್ಟು ಪ್ರಕರಣಗಳ ಸಂಖ್ಯೆ 65 ಲಕ್ಷಕ್ಕೆ ಏರಿಕೆ
ಬ್ರಸಿಲಿಯಾ, ಡಿಸೆಂಬರ್ 5: ಬ್ರೆಜಿಲ್‌ನಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್ -19ನ 46,884 ಹೊಸ ಪ್ರಕರಣಗಳು
ವರದಿಯಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 65,33,968 ಕ್ಕೆ ಏರಿದೆ ಎಂದು ಅಲ್ಲಿನ ರಾಷ್ಟ್ರೀಯ
ಆರೋಗ್ಯ ಸಚಿವಾಲಯ ತಿಳಿಸಿದೆ.
ಇದೇ ಅವಧಿಯಲ್ಲಿ 694 ಮಂದಿ ಸಾವನ್ನಪ್ಪುವುದರೊಂದಿಗೆ ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 1,75,964ಕ್ಕೆ ಏರಿದೆ. ಸಾಂಕ್ರಾಮಿಕ ರೋಗ ಉಲ್ಬಣವಾದಾಗಿನಿಂದ ಬ್ರೆಜಿಲ್‌ನಲ್ಲಿ ಈವರೆಗೆ 57 ಲಕ್ಷಕ್ಕೂ ಹೆಚ್ಚು ಜನರು ಚೇತರಿಸಿಕೊಂಡಿದ್ದಾರೆ ಎಂದು ಸಚಿವಾಲಯ ಶುಕ್ರವಾರ ತಿಳಿಸಿದೆ.
ಒಂದು ದಿನದ ಹಿಂದೆ, ಬ್ರೆಜಿಲ್ ನಲ್ಲಿ ಕೊರೋನಾವೈರಸ್ ಸೋಂಕಿನ 50,434 ಹೊಸ ಪ್ರಕರಣಗಳು ಮತ್ತು 755 ಸಾವುಗಳು ವರದಿಯಾಗಿದ್ದವು. ಅತಿ ಹೆಚ್ಚು ಕೊರೋನಾವೈರಸ್ ಪ್ರಕರಣಗಳು ವರದಿಯಾಗಿರುವ ದೇಶಗಳ ಪೈಕಿ ಅಮೆರಿಕ ಮತ್ತು ಭಾರತದ ನಂತರ ಬ್ರೆಜಿಲ್ ಮೂರನೇ ಸ್ಥಾನದಲ್ಲಿದೆ. ಅಮೆರಿಕದಲ್ಲಿ 1.43 ಕೋಟಿ ಮತ್ತು ಭಾರತದಲ್ಲಿ 95 ಲಕ್ಷ ಕೋವಿಡ್-19 ಪ್ರಕರಣಗಳು ವರದಿಯಾಗಿವೆ.
ಮಾರ್ಚ್ 11 ರಂದು ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್-19ನ್ನು ಸಾಂಕ್ರಾಮಿಕ ರೋಗ ಎಂದು ಘೋಷಿದಿದ ನಂತರ ವಿಶ್ವಾದ್ಯಂತ ಇಲ್ಲಿಯವರೆಗೆ 6.57 ಕೋಟಿಗೂ ಹೆಚ್ಚು ಜನರು ಕೋರೋನಾವೈರಸ್ ಸೋಂಕಿಗೆ ತುತ್ತಾಗಿದ್ದಾರೆ. ಈವರೆಗೆ 15 ಲಕ್ಷ ಜನರು ಸೋಂಕಿಗೆ ಬಲಿಯಾಗಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.