ಅಮೆರಿಕಾ- ರಷ್ಯಾ ನಡುವೆ ಬಿಗುವಿನ ವಾತಾವರಣ
ವಾಷಿಂಗ್ಟನ್, ಡಿ ೩೧: ಅಮೆರಿಕಾ- ರಷ್ಯಾ ನಡುವೆ ಬಿಗುವಿನ ವಾತಾವರಣದ ಸೃಷ್ಟಿಯಾಗಿದೆ . ಉಕ್ರೇನ್ ವ್ಯವಹಾರದಲ್ಲಿ ಎರಡೂ ದೇಶಗಳ ನಡುವೆ ಮಾತಿನ ಸಮರವೇ ನಡೆದಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರೊಂದಿಗೆ ಮಾತುಕತೆ ನಡೆಸಿದ ಅಮೇರಿಕಾ ಅಧ್ಯಕ್ಷ ಜೋ ಬೈಡನ್.. ಉಕ್ರೇನ್ ವಿರುದ್ದ ಸೇನಾ ಕ್ರಮಗಳನ್ನು ಕೈಗೊಂಡರೆ, ಮಾಸ್ಕೋದ ಮೇಲೆ ಇನ್ನೂ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದು ನಡೆದದ್ದೇ ಆದರೆ ಅಮೇರಿಕಾ-ರಷ್ಯಾ ನಡುವಣ ಮೈತ್ರಿ ಇನ್ನಷ್ಟು ದುರ್ಬಲಗೊಳ್ಳಲಿದೆ ಎಂದು ಪುತಿನ್ ಎಚ್ಚರಿಕೆ ನೀಡಿದ್ದಾರೆ.
ಉಕ್ರೇನ್- ರಷ್ಯಾ ನಡುವಣ ಗಡಿ ವಿವಾದ ದಶಕಗಳಿಂದ ಮುಂದುವರಿದಿದೆ. ಇತ್ತೀಚಿಗೆ ರಷ್ಯಾ ಬೃಹತ್ ಪ್ರಮಾಣದಲ್ಲಿ ಸೇನಾಪಡೆಗಳ ನಿಯೋಜನೆಯಿಂದ ಗಡಿ ಬಿಕ್ಕಟ್ಟು ತೀವ್ರ ಮಟ್ಟಕ್ಕೆ ತಲುಪಿದೆ. ಈ ಹಿನ್ನೆಲೆಯಲ್ಲಿ ಅಮೆರಿಕಾ -ರಷ್ಯಾ ದೇಶಗಳ ಮುಖ್ಯಸ್ಥರ ನಡುವೆ ನಡೆದ ದೂರವಾಣಿ ಮಾತುಕತೆ ಮಹತ್ವ ಪಡೆದುಕೊಂಡಿದೆ. ಅಮೆರಿಕಾ-ರಷ್ಯಾ ದೇಶಗಳ ಮುಂದೆ ಈಗ ಎರಡು ಮಾರ್ಗಗಳಿವೆ ಒಂದು ರಾಜತಾಂತ್ರಿಕ ಮಾರ್ಗ, ಮತ್ತೊಂದು ನಿರ್ಬಂಧಗಳೊಂದಿಗೆ ಸಮಸ್ಯೆ ತೀವ್ರಗೊಳಿಸುವುದಾಗಿದೆ ಎಂದು ಪುತಿನ್‌ಗೆ ಬೈಡನ್ ತಿಳಿ ಹೇಳಿದ್ದಾರೆ
’ಉಕ್ರೇನ್ ನಲ್ಲಿನ ಉದ್ರಿಕ್ತವಾತಾವರಣವನ್ನು ತಗ್ಗಿಸುವಂತೆ ಪುತಿನ್ ಗೆ ಬೈಡನ್ ಕೋರಿದ್ದಾರೆ. ಒಂದೊಮ್ಮೆ ಉಕ್ರೇನ್ ಮೇಲೆ ರಷ್ಯಾ ದಂಡಯಾತ್ರೆ ನಡೆಸಿದರೆ .. ಮಿತ್ರ ರಾಷ್ಟ್ರಗಳೊಂದಿಗೆ ಒಟ್ಟಾಗಿ ಅಮೆರಿಕ ತೀವ್ರವಾಗಿ ಸ್ಪಂದಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ ಎಂz ಶ್ವೇತಭವನ ಪತ್ರಿಕಾ ವ್ಯವಹಾರಗಳ ಕಾರ್ಯದರ್ಶಿ ಝೆನ್ ಸಾಕಿ ಅವರು ಹೇಳಿದ್ದಾರೆ. “ಅಮೆರಿಕಾ ಇನ್ನಷ್ಟು ನಿರ್ಬಂಧವಿದಿಸಿದರೆ ಅದು ದೊಡ್ಡ ಪ್ರಮಾದವಾಗಲಿದ್ದು, ತೀವ್ರ ಬೆಳವಣಿಗೆಗಳನ್ನು ಎದುರಿಸಬೇಕಾಗುತ್ತದೆ ಎಂದು ಜೋ ಬೈಡನ್‌ಗೆ ಪುತಿನ್ ಮನವರಿಕೆ iಡಿಕೊಟ್ಟಿದ್ದಾರೆ ಎಂದು ರಷ್ಯಾದ ಅಧ್ಯಕ್ಷರ ವಿದೇಶಿ ಸಲಹೆಗಾರ ಯೂರಿ ಉಷಕೋವ್ ಹೇಳಿದ್ದಾರೆ. ಜೋ ಬೈಡನ್ ವ್ಲಾಡಿಮಿರ್ ಪುಟಿನ್ ನಡುವೆ ಡಿಸೆಂಬರ್ ನಲ್ಲಿ ನಡೆ ಎರಡನೇ ಮಾತುಕತೆ ಇದಾಗಿದೆ.
ಮತ್ತೊಂದೆಡೆ ಎರಡೂ z ಶಗಳ ಉನ್ನತ ಮಟ್ಟದ ಅಧಿಕಾರಿಗಳು.. ಜನವರಿ ೯ ರಂದು ಜೆನಿವಾದಲ್ಲಿ ಭೇಟಿಯಾಗಲಿದ್ದಾರೆ. ೧೨ ರಂದು ರಷ್ಯಾ-ನಾಟೊ ಸಭೆ ನಡೆಯಲಿದೆ. ವಿಯನ್ನಾ ವೇದಿಕೆಯಲ್ಲಿ.. ಜನವರಿ ೧೩ ರಂದು ಆರ್ಗನೈಸೇಶನ್ ಫಾರ್ ಸೆಕ್ಯುರಿಟಿ ಅಂಡ್ ಕೊ-ಆಪರೇಶನ್ ಇನ್ ಯೂರಪ್ ಸಭೆ ನಡೆಯಲಿದೆ. ಉಕ್ರೇನ್ ದೇಶವನ್ನು ನ್ಯಾಟೋಗೆ ಸೇರಿಸಿಕೊಳ್ಳಬಾರದು ಎಂದು ರಷ್ಯಾ ಎಲ್ಲಾ ಸಭೆಗಳಲ್ಲೂ ಒತ್ತಾಯಿಸಿಕೊಂಡುಬರುತ್ತಿದೆ.