ಅಂತರರಾಷ್ಟ್ರೀಯ

ತೈವಾನ್‌ ವಶಪಡಿಸಿಕೊಳ್ಳುವುದು ನಿಶ್ಚಿತ; ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್

ತೈವಾನ್‌  ವಶಪಡಿಸಿಕೊಳ್ಳುವುದು  ನಿಶ್ಚಿತ; ಚೀನಾ  ಅಧ್ಯಕ್ಷ  ಕ್ಸಿ ಜಿನ್ ಪಿಂಗ್

ಬೀಜಿಂಗ್,  ಅ  10:  ತೈವಾನ್ ಅನ್ನು ಚೀನಾದೊಂದಿಗೆ  ವಿಲೀನಗೊಳಿಸಿ ತೀರುವುದಾಗಿ   ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಪುನರುಚ್ಚರಿಸಿದ್ದಾರೆ.  ತೈವಾನ್ ವಿಲೀನ ಶಾಂತಿಯುತ  ಹಾಗೂ  ಎರಡೂ ಪ್ರದೇಶಗಳ ಜನರ  ಪ್ರಯೋಜಗಳಿಗೆ  ಅನುಗುಣವಾಗಿರಲಿದೆ   ಎಂದು ಅವರು ಹೇಳಿದ್ದಾರೆ.  ತೈವಾನ್ ವಿಷಯದಲ್ಲಿ ಹೊರಗಿನ  ದೇಶಗಳ    ಹಸ್ತಕ್ಷೇಪ  ಅನಗತ್ಯ   ಎಂದು  ಅಮೆರಿಕಾ  ಹಾಗೂ ಜಪಾನ್ ಗೆ  ಪರೋಕ್ಷ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.   ಇತ್ತೀಚೆಗೆ ತೈವಾನ್‌  ವಾಯು ಪ್ರದೇಶದಲ್ಲಿ ಚೀನಾದ ವಿಮಾನಗಳು ಹಲವು ಬಾರಿ   ಅತಿಕ್ರಮಿಸಿ    ಹಾರಾಟ ನಡೆಸಿದ್ದವು

ಯಾವುದೇ ಸಮಯದಲ್ಲಿ ಚೀನಾ   ತಮ್ಮ ಮೇಲೆ    ದಾಳಿ ಮಾಡಬಹುದು ಎಂದು ತೈವಾನ್ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ತೈವಾನ್ ನನ್ನು   ಬೆಂಬಲಿಸುವುದಾಗಿ ಅಮೆರಿಕ ಹೇಳುತ್ತದೆ. ಇದಕ್ಕಾಗಿ ತೈವಾನ್   ಜೊತೆ   ಒಪ್ಪಂದ ಮಾಡಿಕೊಂಡಿದೆ. ತೈವಾನ್ ತನ್ನನ್ನು ಸಾರ್ವಭೌಮ  ದೇಶವೆಂದು  ಪರಿಗಣಿಸಿದರೆ,  ಚೀನಾ   ಮಾತ್ರ  ಅದು ತನ್ನ ನಿಯಂತ್ರಣದಲ್ಲಿರುವ  ಸ್ವಾಯತ್ತತೆ ಪ್ರದೇಶವೆಂದು ಪರಿಗಣಿಸುತ್ತಿದೆ.   ಚೀನಾದ ವಿಮೋಚನೆ ವಾರ್ಷಿಕೋತ್ಸವದಂದು  ಜಿಂಗ್ ಪಿಂಗ್  ಹೇಳಿಕೆ ನೀಡಿದ್ದಾರೆ. ಚೀನಾದೊಂದಿಗೆ  ತೈವಾನ್‌ ವಿಲೀನಕ್ಕೆ   ತೈವಾನ್‌ನ ಸ್ವಾತಂತ್ರ್ಯ ಪಡೆಗಳು ದೊಡ್ಡ ಅಡ್ಡಿಯಾಗಿವೆ.  ನಮ್ಮೊಂದಿಗಿನ  ವಿಲೀನದಿಂದ ಭವಿಷ್ಯದಲ್ಲಿ  ಪ್ರಯೋಜನಗಳನ್ನು ತೈವಾನ್ ಅರಿತುಕೊಳ್ಳಲಿದೆ ಎಂದು   ಜಿಂಗ್‌ ಪಿಂಗ್‌   ಹೇಳಿದ್ದಾರೆ.  ತೈವಾನ್ ವಿಲೀನ   ಎಲ್ಲಾ ಚೀನಿಯರ ಬಯಕೆ ಎಂದು ಅವರು   ಬಣ್ಣಿಸಿದ್ದಾರೆ.

ವಿವಾದ ಏಕೆ?

1911 ರ ದಂಗೆಯ  ನಂತರ  ಚೀನಾದ ಆಡಳಿತಕ್ಕೆ  ತೈವಾನ್  ಒಳಪಟ್ಟಿತು. 1949 ರಿಂದ   ತೈವಾನ್  ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದೆ. ಆದರೆ ,  ಬಲಪ್ರಯೋಗದ ಮೂಲಕವಾದರೂ  ತೈವಾನ್   ಪಡೆಯಬೇಕು  ಎಂಬುದು ಚೀನಾದ ಯೋಜನೆ ಎಂದು ತಜ್ಞರು ನಂಬಿದ್ದಾರೆ. ತೈವಾನ್ ಒಪ್ಪಂದವನ್ನು ಚೀನಾ ಗೌರವಿಸುತ್ತದೆ  ಎಂದು ಅಮೆರಿಕ ಅಧ್ಯಕ್ಷ ಬಿಡೆನ್  ಆಶಯ  ವ್ಯಕ್ತಪಡಿಸಿದ್ದಾರೆ. ಒಪ್ಪಂದ  ಉಲ್ಲಂಘಿಸುವಂತಹ  ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಭಾವಿಸಿದೆ.   ಆದರೆ   ತೈವಾನ್ ವಿಷಯದಲ್ಲಿ  ಬಾಹ್ಯ  ದೇಶಗಳ   ಹಸ್ತಕ್ಷೇಪ   ಬಯಸುವುದಿಲ್ಲ ಎಂದು ಚೀನಾ ತೀಕ್ಷ್ಣವಾಗಿ  ಹೇಳಿದ್ದು,  ಇದು ನಮ್ಮ  ಆಂತರಿಕ ವಿಚಾರ ಎಂದು ಹೇಳಿದೆ.  ಹಾಂಕಾಂಗ್‌ನಂತೆಯೇ  ತೈವಾನ್‌ನೊಂದಿಗೆ ಒಂದೇ ದೇಶ, ಎರಡು ವ್ಯವಸ್ಥೆಗಳ ನೀತಿಯನ್ನು ಅನುಸರಿಸುವುದಾಗಿ ಚೀನಾ ಹೇಳಿದೆ.  

ಸುದ್ದಿ ಓದಿ