ಅಂತರರಾಷ್ಟ್ರೀಯ

ಬಿಹಾರ; 2ನೇ ಹಂತದ ವಿಧಾನಸಭಾ ಚುನಾವಣೆ ನಕ್ಸಲ್ ಬಾಧಿತ ಕ್ಷೇತ್ರಗಳಲ್ಲಿ ಸಂಜೆ 4ರವರೆಗೆ ಮಾತ್ರ ಮತದಾನ

ಬಿಹಾರ;  2ನೇ ಹಂತದ ವಿಧಾನಸಭಾ ಚುನಾವಣೆ   ನಕ್ಸಲ್ ಬಾಧಿತ  ಕ್ಷೇತ್ರಗಳಲ್ಲಿ  ಸಂಜೆ 4ರವರೆಗೆ ಮಾತ್ರ ಮತದಾನ

ಪಾಟ್ನಾ, ನವೆಂಬರ್ 3: ಬಿಹಾರದಲ್ಲಿ ಎರಡನೇ ಹಂತದ ವಿಧಾನಸಭಾ ಚುನಾವಣೆಯ ಮತದಾನ ಆರಂಭವಾಗಿದೆ.  ಬೆಳಗ್ಗೆ   7 ಗಂಟೆಗೆ ಮತದಾನ ಆರಂಭಗೊಂಡಿದ್ದು,   ಸಂಜೆ   6  ಗಂಟೆಯವರೆಗೆ   ಈ  ಪ್ರಕ್ರಿಯೆ  ಮುಂದುವರಿಯಲಿದೆ.  17 ಜಿಲ್ಲೆಗಳಲ್ಲಿ ಹರಡಿರುವ 94 ವಿಧಾನಸಭಾ  ಕ್ಷೇತ್ರಗಳಿಗೆ  ಇಂದು (ಮಂಗಳವಾರ) ಮತದಾನ ನಡೆಯುತ್ತಿದೆ. 94  ಕ್ಷೇತ್ರಗಳಲ್ಲಿ  1,463 ಅಭ್ಯರ್ಥಿಗಳು  ಕಣದಲ್ಲಿದ್ದಾರೆ.

ಭದ್ರತಾ  ದೃಷ್ಟಿಯಿಂದ   ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಮತದಾನ ಸಂಜೆ 4 ಗಂಟೆಗೆ   ಅಂತ್ಯಗೊಳ್ಳಲಿದೆ.  ಸೂಕ್ಷ್ಮ ಪ್ರದೇಶಗಳಲ್ಲಿ  ಭಾರಿ  ಭದ್ರತಾ ವ್ಯವಸ್ಥೆ   ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ  ಹೆಚ್ಚವರಿ ಭದ್ರತಾ ಪಡೆಗಳನ್ನು  ನಿಯೋಜಿಸಲಾಗಿದೆ.  ಈ  ಹಂತದಲ್ಲಿ   2.85 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಆರ್ಹತೆ ಪಡೆದುಕೊಂಡಿದ್ದಾರೆ. ವೃದ್ಧರು,  ಕೋವಿಡ್ ಗುಣ ಲಕ್ಷಣ ಹೊಂದಿರುವವರು ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲು    ಕೇಂದ್ರ ಚುನಾವಣಾ ಆಯೋಗ  ಅವಕಾಶ  ಕಲ್ಪಿಸಿದೆ.

ಸುದ್ದಿ ಓದಿ