ಹುಕ್ಕೇರಿ

ಕ್ಷೇತ್ರದ ಪ್ರಗತಿಯಲ್ಲಿ ಅಧಿಕಾರಿಗಳ ಪಾತ್ರ ಹಿರಿದು: ಸಚಿವ ಕತ್ತಿ

ಕ್ಷೇತ್ರದ ಪ್ರಗತಿಯಲ್ಲಿ ಅಧಿಕಾರಿಗಳ ಪಾತ್ರ ಹಿರಿದು: ಸಚಿವ ಕತ್ತಿ

ಹುಕ್ಕೇರಿ 16:  ಗ್ರಾಮಗಳ ಅಭಿವೃದ್ಧಿ ಯಿಂದ ದೇಶದ ಪ್ರಗತಿ ಸಾಧ್ಯವೆಂದು ಅರಿತು ಕೊಳ್ಳುವದು ಅವಶ್ಯ. ಆ ನಿಟ್ಟಿನಲ್ಲಿ ನನ್ನ ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ ಕೆರೆ ಕಟ್ಟೆಗಳ ನಿರ್ಮಾಣ, ಸಮರ್ಪಕ ರಸ್ತೆ, ವಿದ್ಯಾರ್ಜನೆಗೆ ಶೈಕ್ಷಣಿಕ ಚಟುವಟಿಕೆ ಹಾಗೂ ನಯ ವಿನಯಕ್ಕಾಗಿ ಧಾರ್ಮಿಕ ಕಾರ್ಯಕ್ರಮ ಗಳಿಗಾಗಿ ಸಮುದಾಯ  ಭವನಗಳ ನಿರ್ಮಾಣದಲ್ಲಿ ಅಧಿಕಾರಿಗಳ ಪಾತ್ರ ಹಿರಿಯದಾಗಿದೆ ಎಂದು ಸಚಿವ ಉಮೇಶ ಕತ್ತಿ ಶ್ಲಾಘಿಸಿದರು.

ಅವರು ಹುಕ್ಕೇರಿ ತಾಲೂಕಿನ ವಿವಿಧ ಗ್ರಾಮ ಪಂಚಾಯತಿ ಆಡಳಿತಾಧಿಕಾರಿ ಮತ್ತು ಅಭಿವೃದ್ಧಿ ಅಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಕಳೆದ ಗ್ರಾಮ ಪಂಚಾಯತಿ ಚುನಾವಣೆ ಹಿನ್ನಲೆಯಲ್ಲಿ ತಾಲೂಕಿನ 52 ಗ್ರಾಮ ಪಂಚಾಯತಿ ಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿತ್ತು ಆ ಸಮಯದಲ್ಲಿ ಶಾಸಕ ಉಮೇಶ ಕತ್ತಿ ಪ್ರತಿ ವಾರ ಅಧಿಕಾರಿಗಳ ಸಭೆ ಜರುಗಿಸಿ ಉದ್ಯೋಗ ಖಾತ್ರಿ ಯೋಜನೆಯ ಪ್ರಗತಿ ಪರಶಿಲನೆ ಮಾಡಿ ಸಲಹೆ ಸೂಚನೆಗಳನ್ನು ನೀಡಿದ್ದರು ಅದರಂತೆ ಜಿಲ್ಲೆಯಲ್ಲಿಯೆ ಅತಿ ಹೆಚ್ಚು ಕಾಮಗಾರಿಗಳನ್ನು ಕೈಕೊಂಡು  ಉದ್ಯೋಗ ಖಾತ್ರಿ ಯೋಜನೆಯಡಿ ರೈತರ ತೋಟಪಟ್ಟಿಗಳಿಗೆ 178 ಕಿಲೋ ಮೀಟರ ರಸ್ತೆ ನಿರ್ಮಿಸಿದ್ದು ರಾಜ್ಯದಲ್ಲಿಯೇ ದಾಖಲೆ ಆಗಿದೆ. ಜನಪ್ರತಿನಿಧಿಗಳು ತೆರಿಗೆ ವಸೂಲಿಗೆ ನಿರ್ಲಕ್ಷ ವಹಿಸುವದು ಸಾಮಾನ್ಯ. ಆದರೆ ಸಚಿವ ಉಮೇಶ ಕತ್ತಿ ಅವರು ಆಡಳಿತಾಧಿಕಾರಿಗಳ ಹಾಗೂ ಕೊರೊನಾ ಮಹಾಮಾರಿ ಮಧ್ಯೆ ಎರಡು ಕೋಟಿ ರೂಪಾಯಿಗಳಿಗಿಂತ ಹೆಚ್ಚು ಗ್ರಾಮ ಪಂಚಾಯತಿಗೆ ಪಂಚಾಯತಿ ತೆರಿಗೆ ವಸೂಲಿ ಮಾಡಿಸಲು ಶ್ರಮಿಸಿದ್ದು ಸ್ಮರಣೀಯ. ಇದರ ಅಂಗವಾಗಿ ಗ್ರಾಮಗಳ ಅಭಿವೃದ್ಧಿ ಯಲ್ಲಿ ಸಹಕರಿಸಿದ ಆಡಳಿತಾಧಿಕಾರಿಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಆಹಾರ ಮತ್ತು ನಾಗರಿಕ ಸೌಲಭ್ಯ ಸಚಿವ ಉಮೇಶ ಕತ್ತಿ ಸತ್ಕರಿಸಿ ಅಭಿನಂದಿಸಿದರು .

ವೇದಿಕೆ ಮೇಲೆ ಬೆಳಗಾವಿ ಉಪ ವಿಭಾಗಾಧಿಕಾರಿ ಅಶೋಕ ತೇಲಿ, ತಹಸಿಲ್ದಾರ ಡಾ,ಡಿ ಎಚ್ ಹೂಗಾರ, ಇ ಓ ಬಿ ಕೆ ಲಾಳಿ, ಆರ್ ಎ ಚಟ್ನಿ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಹುಕ್ಕೇರಿ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು,ತಾಲೂಕಾ ಪಂಚಾಯತ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸುದ್ದಿ ಓದಿ