ಅಂತರರಾಷ್ಟ್ರೀಯ

ತಾಯಿ ಮಗುವಿನ ಬೆನ್ನ ಮೇಲೆ ಕುಟುಂಬದ ವಿವರ ಬರೆದ ಫೋಟೋ ವೈರಲ್; ಇದು ಯುದ್ಧದ ಭೀಭತ್ಸತೆ

ತಾಯಿ ಮಗುವಿನ ಬೆನ್ನ ಮೇಲೆ ಕುಟುಂಬದ ವಿವರ ಬರೆದ ಫೋಟೋ ವೈರಲ್; ಇದು ಯುದ್ಧದ ಭೀಭತ್ಸತೆ

ಕೈವ್: ಏಪ್ರಿಲ್ 05 : ಉಕ್ರೇನ್ ಮತ್ತು ರಷ್ಯಾದ ನಡುವಿನ ಸಮರ ಇನ್ನೂ ಕೊನೆಗಂಡಿಲ್ಲ. ಎರಡೂ ರಾಷ್ಟ್ರದ ಮಮದಿ ಜೀವವನ್ನು ಕೈಯಲ್ಲಿ ಹಿಡಿದು ಬದುಕುತ್ತಿದ್ದಾರೆ. ಊಟ, ವಸತಿಗೆ ಪರದಾಡುತ್ತಿದ್ದಾರೆ. ಹಲವಾರು ಅಮಾಯಕರ ಮೇಲೆ ಸವಾರಿ ಮಾಡುತ್ತಿರುವ ಯುದ್ಧಕ್ಕೆ ಮಕ್ಕಳು, ಹಿರಿಯರು ಎಂಬ ಭೇದವಿಲ್ಲದ ಕಾರಣ ಸಾವುಗಳು ಹೆಚ್ಚಾಗುತ್ತಿವೆ.

ಇದೀಗ ಯುದ್ಧದಿಂದ ನಲುಗಿರುವ ಪೋಷಕರು ನಮ್ಮ ಮಕ್ಕಳಾದರೂ ಬದುಕುಳಿಯಲಿ ಎಂಬ ತೀರ್ಮಾನಕ್ಕೆ ಬಂದು ಅವರ ಬೆನ್ನ ಮೇಲೆ ಮನೆಯ ವಿಳಾಸ, ವಿವರವನ್ನು ಬರೆಯಲು ಶುರು ಮಾಡಿದ್ದಾರೆ. ಈ ಸಂಬಂಧದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮನಕಲಕುವಂತಿದೆ.

ಈ ಮಕ್ಕಳ ಫೋಟೋಗಳನ್ನು ಅನೇಕ ಪತ್ರಕರ್ತರು ಟ್ವೀಟ್ ಮಾಡುವ ಮೂಲಕ ಅವರು ಸಂಘರ್ಷದ ಕಠೋರ ವಾಸ್ತವತೆಯನ್ನು ಎತ್ತಿ ತೋರಿಸುತ್ತಿದ್ದಾರೆ. ಉಕ್ರೇನಿಯನ್ ತಾಯಂದಿರು ತಮ್ಮ ಮಕ್ಕಳ ದೇಹದ ಮೇಲೆ ಕುಟುಂಬದ ಸಂಪರ್ಕಗಳನ್ನು ಬರೆಯುತ್ತಿದ್ದಾರೆ ಎಂದು ತನ್ನ ಬೆನ್ನ ಮೇಲೆ ಫೋನ್ ನಂಬರ್, ಹೆಸರು ವಿವರಗಳನ್ನು ಹೊಂದಿರುವ ಮಗುವಿನ ಚಿತ್ರದ ಮೂಲಕ ಟ್ವೀಟ್ ಮಾಡಿದ್ದಾರೆ.

ಮೂರು ದಿನಗಳ ಹಿಂದೆ ಈ ಫೋಟೋವನ್ನು ಬಾಲಕಿಯ ತಾಯಿ ಸಶಾ ಮಕೋವಿ ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ಸ್ಥಳೀಯ ಭಾಷೆಯಲ್ಲಿದೆ, ಆದರೆ ಗೂಗಲ್ ಅನುವಾದವು ಮಹಿಳೆ ತನ್ನ ಮಗಳು ವೆರಾಳ ಹೆಸರನ್ನು ಬರೆದಿದ್ದಾರೆ ಎಂದು ತೋರಿಸುತ್ತದೆ “ಏನಾದರೂ ಸಂಭವಿಸಿದಲ್ಲಿ, ಯಾರಾದರೂ ಅವಳನ್ನು ಉಳಿಸಿ ಎಂದು ಹೇಳಿದೆ.

ಉಕ್ರೇನ್ ಮತ್ತು ರಷ್ಯಾ ಇಂತಹ ಹತ್ತು ಹಲವಾರು ಆಘಾತಕಾರಿ ದೃಶ್ಯಗಳಿಗೆ ಕಾರಣವಾಗುತ್ತಿದೆ. ಇನ್ನೊಂದು ಘಟನೆ ಎಂದರೆ ತನ್ನ ಮಾಲೀಕ ಸಾವನ್ನಪ್ಪಿರುವ ಬಗ್ಗೆ ತಿಳಿದಿರುವ ನಾಯಿಯು ಆತನ ಮೃತದೇಹ ಬಿಟ್ಟು ಹೋಗದೆ ಅಲ್ಲಿಯೇ ಕಾದು ಕುಳಿತಿರುವ ದೃಶ್ಯವೂ ಕೂಡ ಜನರ ಮನಸ್ಸನ್ನು ಘಾಸಿಗೊಳಿಸಿದೆ.

ಸುದ್ದಿ ಓದಿ