ಅಂತರರಾಷ್ಟ್ರೀಯ

ಅಮೆರಿಕದಲ್ಲಿ 1,00,000 ದಾಟಿದ ದೈನಂದಿನ ಕೋವಿಡ್‍-19 ಪ್ರಕರಣಗಳ ಸಂಖ್ಯೆ

ಅಮೆರಿಕದಲ್ಲಿ 1,00,000 ದಾಟಿದ ದೈನಂದಿನ ಕೋವಿಡ್‍-19 ಪ್ರಕರಣಗಳ ಸಂಖ್ಯೆ

ವಾಷಿಂಗ್ಟನ್, ನವೆಂಬರ್ 5: ಅಮೆರಿಕದಲ್ಲಿ ಬುಧವಾರ ಮೊದಲ ಬಾರಿಗೆ 1,00,000ಕ್ಕೂ ಹೊಸ ಕೊರೋನಾವೈರಸ್ ಪ್ರಕರಣಗಳು ವರದಿಯಾಗಿವೆ ಎಂದು ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ತನ್ನದೇ ಮಾಹಿತಿಯನ್ನುಲ್ಲೇಖಿಸಿ  ವರದಿ ಮಾಡಿದೆ.

‘ಕನ್ಸಾಸ್, ಟೆನ್ನೆಸ್ಸೀ, ವರ್ಜೀನಿಯಾ, ಒಕ್ಲಾಹಾಮ, ಮೊಂಟಾನಾ, ಅಯೋವಾ, ಉತ್ತರ ಡಕೋಟಾ, ದಕ್ಷಿಣ ಡಕೋಟಾ, ಓಹಿಯೋ, ನೆಬ್ರಸ್ಕಾ, ಮಿನ್ನೇಸೋಟ, ಇಂಡಿಯಾನಾ ಮತ್ತು ಪಶ್ಚಿಮ ವರ್ಜೀನಿಯಾ ಸೇರಿದಂತೆ ಹದಿನೇಳು ರಾಜ್ಯಗಳಲ್ಲಿ ಬುಧವಾರ ದಾಖಲೆಯ ಕೊವಿಡ್‍-19 ಪ್ರಕರಣಗಳು ವರದಿಯಾಗಿವೆ.’ ಎಂದು ವರದಿ ತಿಳಿಸಿದೆ.

ದೇಶಾದ್ಯಂತ ಇದುವರೆಗೆ ಒಟ್ಟು 94,45,000 ಕ್ಕೂ ಹೆಚ್ಚು ಕೊರೋನಾವೈರಸ್ ಪ್ರಕರಣಗಳು ಮತ್ತು 2,32,500 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಹೆಚ್ಚುತ್ತಿರುವ ಪ್ರಕರಣಗಳ ಸಂಖ್ಯೆಯಿಂದ ಆಸ್ಪತ್ರೆಗಳು ಹಾಗೂ ಕೆಲ ಆರೋಗ್ಯ ವ್ಯವಸ್ಥೆಗಳ ಮೇಲೆ ಅಧಿಕ ಹೊರೆ ಬೀಳುವ ಅಪಾಯವಿದೆ ಎಂದು ವಾಷಿಂಗ್ಟನ್ ಪೋಸ್ಟ್ ಎಚ್ಚರಿಸಿದೆ.

ಸುದ್ದಿ ಓದಿ