ವಿಶ್ವಾದ್ಯಂತ 5.20 ಕೋಟಿ ಮೀರಿದ ಕೋವಿಡ್-19 ಪ್ರಕರಣಗಳ ಸಂಖ್ಯೆ
ವಾಷಿಂಗ್ಟನ್, ನವೆಂಬರ್ 12: ವಿಶ್ವಾದ್ಯಂತ ಕೋವಿಡ್-19 ಸೋಂಕಿನ ದೃಢಪಟ್ಟ ಪ್ರಕರಣಗಳ ಸಂಖ್ಯೆ 5 ಕೋಟಿ 20 ಲಕ್ಷ ದಾಟಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ವರದಿ ಹೇಳಿದೆ.
ಕೊರೋನಾವೈರಸ್ ನ ಒಟ್ಟು ಪ್ರಕರಣಗಳ ಸಂಖ್ಯೆ ಗುರುವಾರದ ವೇಳೆಗೆ 5,20,41,441ರಷ್ಟಿದೆ. ಮಾರಕ ಸೋಂಕಿನಿಂದ ಈವರೆಗೆ ವಿಶ್ವಾದ್ಯಂತ 12 ಲಕ್ಷ 80 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆ ಮಾರ್ಚ್ 11 ರಂದು ಕೋವಿಡ್-19 ಅನ್ನು ವಿಶ್ವವ್ಯಾಪಿ ಸಾಂಕ್ರಾಮಿಕ ರೋಗ ಎಂದು ಘೋಷಿಸಿತ್ತು. ಇದುವರೆಗೆ ಅಮೆರಿಕ, ಭಾರತ ಮತ್ತು ಬ್ರೆಜಿಲ್ ನಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ.ಕಳೆದ ಕೆಲ ದಿನಗಳಿಂದ ಐರೋಪ್ಯ ಒಕ್ಕೂಟದ ಕೆಲ ದೇಶಗಳು, ಬ್ರೆಜಿಲ್ ಇನ್ನಿತರ ರಾಷ್ಟ್ರಗಳಲ್ಲಿ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಏರುತ್ತಿದೆ. ಇದರಿಂದ ಕೆಲ ದೇಶಗಳ ಲಾಕ್ ಡೌನ್ ಮತ್ತಿತರ ನಿರ್ಬಂಧಗಳನ್ನು ಮತ್ತೆ ಜಾರಿಗೊಳಿಸಿವೆ.